Home Latest News ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೆಂದ್ರ ಅಮಾನತು ಆದೇಶ ರದ್ದು : ಭೋಜೇಗೌಡರ ಹಠ ಏನಾಯ್ತು
Latest News

ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೆಂದ್ರ ಅಮಾನತು ಆದೇಶ ರದ್ದು : ಭೋಜೇಗೌಡರ ಹಠ ಏನಾಯ್ತು

Share
Share

ಚಿಕ್ಕಮಗಳೂರು : ಜಿಲ್ಲಾ ನೌಕರರ ಸಂಘದ ಚುನಾವಣೆಯ ಹಣಾಹಣಿಯಲ್ಲಿ ದೇವೇಂದ್ರ ಜಿಲ್ಲಾ ಸಂಘದ ಅಧ್ಯಕ್ಷರಾಗಿ ಗೆದ್ದರೂ ಎಂಎಲ್ಸಿ ಭೋಜೇಗೌಡರ ಹಠ ಸಾಧಿಸಿ ಅಮಾನತು ಮಾಡಿಸಿ ಉಡುಪಿ ಜಿಲ್ಲೆಯ ಕುಂದಾಪುರಕ್ಕೆ ಸ್ಥಳ ನಿಯುಕ್ತಿಗೊಳಿಸಲಾಗಿತ್ತು.

ನಂತರ ಭೋಜೇಗೌಡರನ್ನು ಮನವೊಲಿಸಲು ಅಧಿವೇಶನದ ವೇಳೆ ಬೆಳಗಾವಿಗೆ ಹೋಗಿದ್ದ ದೇವೇಂದ್ರ ನಿರಾಶರಾಗಿ ಬಂದಿದ್ದರು.

ಇದೀಗ ದೇವೇಂದ್ರ ಅಮಾನತು ಆದೇಶ ರದ್ದುಪಡಿಸಿ ಅಲ್ದೂರು ಕಾಲೇಜ್ ಗೆ ಸ್ಥಳ ನಿಯುಕ್ತಿ ಗೊಳಿಸಲಾಗಿದೆ. ನಾಳೆ ರಾಜ್ಯದ ಸರ್ಕಾರಿ ನೌಕರರ ರಾಜ್ಯ ಅಧ್ಯಕ್ಷರು ಮತ್ತು ಖಜಾಂಚಿ ಸ್ಥಾನಕ್ಕೆ ಚುನಾವಾಣೆ ನಡೆಯಲಿದೆ. ಅದರಲ್ಲಿ ಯಾರಿಗೆ ದೇವೆಂದ್ರ ಟೀಂ ಮತ ಚಾಲಯಿಸುತ್ತಾರೆ ಎಂಬುದರ ದಿಕ್ಸೂಚಿಯ ಫಲವೇ ಅಮಾನತು ರದ್ದುಗೊಳಿಸಿರುವುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಅಮಾನತು ರದ್ದು ಮಾಡಿಸಲು ಚಿಕ್ಕಮಗಳೂರು ಶಾಸಕ ಹೆಚ್.ಡಿ.ತಮ್ಮಯ್ಯ, ಶೃಂಗೇರಿಯ ಟಿ.ಡಿ.ರಾಜೇಗೌಡ ವಿಧಾನ ಪರಿಷತ್ ಉಪ ಸಭಾಪತಿ ಪ್ರಾಣೇಶ್. ಹಾಗೂ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ಕೃಷ್ಣೇಗೌಡರ ಪ್ರಭಾವದಿಂದಾಗಿ ದೇವೇಂದ್ರ ರಿವೋಕ್ ಆಗಿದ್ದಾರೆ ಎನ್ನಲಾಗುತ್ತಿದೆ ಆದರೆ ಭೋಜೇಗೌಡರ ಹಠ ಏನಾಯಿತು ಎಂಬುದು ಸದ್ಯ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ ಆಗಿದೆ.

Share

Leave a comment

Leave a Reply

Your email address will not be published. Required fields are marked *

Don't Miss

ಅಮಾನವೀಯ ಜಾನುವಾರು ಸಾಗಾಟ – ಮೂವರ ಬಂಧನ

ಎನ್.ಆರ್. ಪುರ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಹಾಗೂ ಅಮಾನವೀಯ ಜಾನುವಾರು ಸಾಗಾಟ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಿ, ವಾಹನ ಮತ್ತು ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ...

ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಧ್ಯಮಗಳು ಮಾಡಬೇಕು

ಚಿಕ್ಕಮಗಳೂರು: ಬಡವರ ಕಷ್ಟಗಳನ್ನು, ಸಮಸ್ಯೆಗಳನ್ನು ಸಮಾಜದ ಮತ್ತು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸಲಹೆ ಮಾಡಿದರು. ಹೊನ್ನ ಬಿತ್ತೇವು ಹೊಲಕೆಲ್ಲ ಮತ್ತು ನ್ಯೂಸ್ ಕಿಂಗ್...

Related Articles

ನೀರುಗಂಟಿ ಆತ್ಮಹತ್ಯೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲು

ಚಿಕ್ಕಮಗಳೂರು: ಅಣೂರು ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ರಮೇಶ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ,...

ಹೇಮಾವತಿ ನದಿಯ ಅಕ್ರಮವಾಗಿ ಮರಳು ಸಾಗಣೆ ಪ್ರಕರಣ ಪತ್ತೆ

ಮೂಡಿಗೆರೆ: ಜೀವನದಿ ಹೇಮಾವತಿಯ ಒಡಲಿಗೆ ಕನ್ನ ಹಾಕಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಜಾಲದ ಮೇಲೆ ಗೋಣಿಬೀಡು...

ಕಾಫಿನಾಡಿನಲ್ಲಿ ರಂಜಾನ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆ

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಪವಿತ್ರ ರಂಜಾನ್ ಹಬ್ಬದ ಸಂಭ್ರಮವು ಸಡಗರ ಹಾಗೂ ಸೌಹಾರ್ದತೆಯಿಂದ ಕಳೆಗಟ್ಟಿತ್ತು. ಕೆಂಪನಹಳ್ಳಿಯ...

ಕಾಫಿ ತೋಟದಲ್ಲಿ ಮರಗಸಿ – ಕಾರ್ಮಿಕನ ಸಾವು

ಚಿಕ್ಕಮಗಳೂರು : ಕಾಫಿ ತೋಟದ ಮಾಲೀಕರು ಮತ್ತು ಮೇಸ್ತ್ರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ಕಾರ್ಮಿಕನೊಬ್ಬ ಬಲಿಯಾದ ದಾರುಣ...