ಚಿಕ್ಕಮಗಳೂರು: ಅಡಿಕೆ ತೋಟದಲ್ಲಿ ಕೆಲಸ ಮಾಡುವಾಗ ಕಾರ್ಮಿಕನಿಗೆ ವಿದ್ಯುತ್ ಸ್ಪರ್ಶಸಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಬನ್ನೂರ್ ಬಳಿ ನಡೆದಿದೆ.
ಜ್ಯೋತಿ ಕುಮಾರ್ (೨೮) ಮೃತ ದುರ್ದೈವಿ. ಅಡಿಕೆ ತೋಟದ ವಿದ್ಯುತ್ ಟ್ರಾನ್ಸಾರ್ಮರ್ ಪಕ್ಕದಲ್ಲಿ ಚರಂಡಿ ಸ್ವಚ್ಛಗೊಳಿಸುವಾಗ ವಿದ್ಯುತ್ ಸ್ಪರ್ಶಿಸಿ ಜ್ಯೋತಿ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಭಾಗದಲ್ಲಿ ಕಳೆದ ಒಂದು ವಾರದಿಂದ ಧಾರಾಕಾರ ಮಳೆಯಾಗುತ್ತಿತ್ತು ಗುರುವಾರ ಕೊಂಚ ವರುಣನ ಆರ್ಭಟ ಕಡಿಮೆಯಾಗಿದೆ ಎಂದು ಕೆಲಸ ಮಾಡುವಾಗ ಈ ದುರಂತ ನಡೆದಿದೆ.
ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
Worker dies of electrocution in areca nut plantation
Leave a comment