ಚಿಕ್ಕಮಗಳೂರು :
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನಲ್ಲಿ ಮಳೆ ಹೆಚ್ಚು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಇಲ್ಲಿನ ಬದುಕು ಕೂಡ ಅಷ್ಟೇ ಕಷ್ಟದಿಂದ ಇರುತ್ತದೆ. ಅದರಲ್ಲೂ ಕಾಫಿತೋಟದ ಕೆಲಸವನ್ನು ಹೇಳುವುದು ಅಸಾಧ್ಯ.
ಕಾಫಿತೋಟದ ಕೆಲಸಕ್ಕೆ ಬರುವ ಮಹಿಳೆಯರು ಪಡುವ ಕಷ್ಟ ವರ್ಣಿಸಲು ಬಲು ಕಷ್ಟ.
ಜಿಲ್ಲೆಗೆ ಹೊರ ರಾಜ್ಯದಿಂದ ಬರುವ ಕಾರ್ಮಿಕರ ಸಂಖ್ಯೆ ಪ್ರತಿ ವರ್ಷ ಹೆಚ್ಚಾಗುತ್ತಿದೆ. ಬಿಹಾರ, ಒರಿಸ್ಸಾ ನಾಗಲ್ಯಾಂಡ್ ಮತ್ತು ಅಸ್ಸಾಂ ರಾಜ್ಯಗಳಿಂದ ಕಾಫಿತೋಟದ ಕೆಲಸಗಳಿಗೆ ಮಕ್ಕಳ ಸಹಿತ ಬರುತ್ತಾರೆ. ಜಿಲ್ಲೆಗೆ ಬರುವವರ ಸಂಖ್ಯೆ ಎಷ್ಟು ಎಂಬುದು ತಿಳಿಯುವುದಿಲ್ಲ ಜೊತೆಗೆ ಇವರ ಪಕ್ಕಾ ವಿಳಾಸವೇ ಸಿಗುವುದಿಲ್ಲ ಇದರ ಮಧ್ಯೆ ಇವರಿಗೆ ಬರುವ ಖಾಯಿಲೆ ಅಪಘಾತ ತಿಳಿಯುವುದಿಲ್ಲ. ಇಲ್ಲಿನ ಅತಿಯಾದ ಮಳೆಗೆ ವಾತಾವರಣ ಹೊಂದಿಕೊಳ್ಳುವುದು ಕಷ್ಟ ಯಾರು ಸತ್ತರು ಮಾಹಿತಿ ಕೂಡ ಸಿಗುವುದಿಲ್ಲ. ದಿನಗೂಲಿ ಲೆಕ್ಕದಲ್ಲಿ ಬರುವುದರಿಂದ ಯಾವ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲ. ಬಹು ಸಂಕಷ್ಟದಿಂದ ಬದುಕಿದರೆ ಬದುಕಬೇಕು ಇಲ್ಲ ಎಂದರೆ ಗೋವಿಂದ.
ತೋಟದ ಕೆಲಸದಲ್ಲಿ ನಿರತರಾಗಿರುವ ತಾಯಿ ಮಗ ಮಳೆಯಲ್ಲಿ ಹೊಟ್ಟೆ ತುಂಬಿಸಿಕೊಳ್ಳಲು ಕಷ್ಟಪಡುತ್ತಾರೆ. ಬದುಕು ಜಟಾಕ ಬಂಡಿ ವಿಧಿ ಅದರ ಸಾಹೇಬ ಕದುರೆ ನೀನ್ ಅವನು ಪೇಳಿದಂತೆ ಪಯಣಿಗನು ಮದುವೇಗೋ ಮಸಣಕೋ ಹೋಗೆಂದ ಪದ ಕುಸಿಯ ನೆಲವಿವದು ಮಂಕುತಿಮ್ಮ. ಎಂಬ ಡಿವಿಜಿಯವರ ವಾಣಿಯಂತೆ
ಕಾರ್ಮಿಕರ ಮತ್ತು ಮಹಿಳಾ ಕಾರ್ಮಿಕರ ಬದುಕು ಕೂಡ ಹೊಟ್ಟೆ ತುಂಬಿಸಿಕೊಳ್ಳಲು ಮಗು ಜೊತೆಗೆ ತಾಯಿಯು ಮಳೆಯಲ್ಲಿ ತೋಯಲೇ ಬೇಕು. ಬಿಸಿಸಲಲ್ಲಿ ಒಣಗ ಬೇಕು ಕಾಫಿ ತೋಟದವರು ಶ್ರೀ ಮಂತರಾರದರು ಅಲ್ಲಿ ದುಡಿಯುವ ಜನರ ಬದುಕು ಕಷ್ಟ,ಕಷ್ಟ.
Leave a comment