ಕಡೂರು : ಮಹಿಳೆಯೊಬ್ಬರು ಆನ್ಲೈನ್ ಟ್ರೇಡಿಂಗ್ ಆಸೆಗೆ ಬಿದ್ದು 4.36 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದ್ದು, ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರುದಾರ ಮಹಿಳೆ ಕರ್ನಾಟಕ ಬ್ಯಾಂಕ್ನಲ್ಲಿ ಖಾತೆ ಹೊಂದಿದ್ದು, ಮೊದಲಿನಿಂದಲೂ ಸ್ಟಾಕ್ ಮಾರ್ಕೆಟ್ನಲ್ಲಿ ಹೂಡಿಕೆ ಮಾಡುವ ಅಭ್ಯಾಸ ಇಟ್ಟುಕೊಂಡಿದ್ದರು.
ಇತ್ತೀಚೆಗೆ ಅವರು ಆನ್ಲೈನ್ನಲ್ಲಿ ಟ್ರೇಡಿಂಗ್ ಬಗ್ಗೆ ಹುಡುಕಾಟ ನಡೆಸುತ್ತಿದ್ದಾಗ, ಜನವರಿ 27 ರಂದು ವಾಟ್ಸಾಪ್ ಮೂಲಕ ರಕ್ಷಿತ ವೇದ ಮತ್ತು ಆನಂದ್ ದಾಲ್ಮೀಯಾ ಎಂಬ ಹೆಸರಿನ ವ್ಯಕ್ತಿಗಳು ಇವರನ್ನು ಸಂಪರ್ಕಿಸಿದ್ದರು.
ವಂಚಕರು ತಮಗೆ ಐಪಿಒ (IPO) ಹಂಚಿಕೆ ಮಾಡಿಸುವುದಾಗಿ ನಂಬಿಸಿ, ‘FisdPro’ ಎಂಬ ಆ್ಯಪ್ ಡೌನ್ಲೋಡ್ ಮಾಡಿಸಿದ್ದರು.
ಆರಂಭಿಕ ಹೂಡಿಕೆ ಮತ್ತು ಆ್ಯಪ್ ಬಳಕೆಯ ಶುಲ್ಕದ ಹೆಸರಿನಲ್ಲಿ ವಿವಿಧ ದಿನಾಂಕಗಳಂದು ಹಂತಹಂತವಾಗಿ ಒಟ್ಟು 4,36,900 ರೂಪಾಯಿಗಳನ್ನು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಮಹಿಳೆಯು ಆ್ಯಪ್ನಲ್ಲಿ ತಮಗೆ ಬಂದ ಲಾಭದ ಹಣವನ್ನು ವಿತ್ ಡ್ರಾ ಮಾಡಲು ಹೋದಾಗ ಅದು ಸಾಧ್ಯವಾಗಿಲ್ಲ, ಆಗಲೇ ತಮಗೆ ಮೋಸ ಹೋಗಿರುವುದು ಅವರ ಅರಿವಿಗೆ ಬಂದಿದೆ. ಈ ಸಂಬಂಧ ಸೈಬರ್ ಕ್ರೈಮ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Woman loses Rs 4.36 lakh in online trading
Leave a comment