ಚಿಕ್ಕಮಗಳೂರು: ಚಾರ್ಮಾಡಿ ಘಾಟಿಯ ೨ ಮತ್ತು ೩ನೇ ತಿರುವಿನ ಮಧ್ಯೆ ರಸ್ತೆ ಮೇಲೆ ಕಾಡಾನೆ ಪ್ರತ್ಯಕ್ಷ ವಾಗಿದೆ. ರಾತ್ರಿ ೯.೪೫ ರ ಸುಮಾರಿಗೆ ಮರ ಮುರಿದು ರಸ್ತೆ ಮಧ್ಯೆ ಕಾಡಾನೆ ನಿಂತಿದೆ.
ಇದರಿಂದಾಗಿ ಸುಮಾರು ಒಂದು ತಾಸಿಗೂ ಅಧಿಕ ಕಾಲ ಟ್ರಾಫಿಕ್ ಜಾಮ್ ಆಗಿತ್ತು.ವಾಹನ ಸವಾರರಲ್ಲಿ ಕ್ಷಣ ಕಾಲ ಆತಂಕ ಮನೆ ಮಾಡಿದ್ದು ಸಂಚಾರ ಸಂಪೂರ್ಣ ಸ್ಥಗಿತ ವಾಗಿತ್ತು.ಮೊಬೈಲ್ ನೆಟ್‌ವರ್ಕ್ ಇಲ್ಲದೆ ಮಾಹಿತಿ ನೀಡಲು ಸಾರ್ವಜನಿಕರು ಪರದಾಡಬೇಕಾಯಿತು.
ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕಿಸುವ ಚಾರ್ಮಾಡಿ ಘಾಟ್‌ನಲ್ಲಿ ಪದೇಪದೇ ಆನೆ ಕಾಣಿಸಿಕೊಳ್ಳುತ್ತಿದೆ. ಕೆಲವು ತಿಂಗಳಿನಿಂದ ಕಾಣಿಸಿಕೊಳ್ಳದ ಆನೆ ಮತ್ತೆ ಆಗಮಿಸಿದೆ. ಶುಕ್ರವಾರ ರಾತ್ರಿ ರಸ್ತೆಯ ಮಧ್ಯದಲ್ಲಿ ನಿಂತು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದೆ.
ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಈ ಒಂಟಿಆನೆಯನ್ನು ಹಿಡಿದು ಬೇರೆಡೆಗೆ ಸಾಗಿಸಲು ಮುಂದಾಗಬೇಕೆಂದು ವಾಹನ ಸವಾರರು ಒತ್ತಾಯಿಸಿದ್ದಾರೆ.
Wild elephant sighted at Charmadi Ghat
Leave a comment