ಚಿಕ್ಕಮಗಳೂರು : ಸಂಸಾರದಲ್ಲಿ ಕಲಹ ಹಿನ್ನೆಲೆಯಲ್ಲಿ ಪತ್ನಿಯನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ
ತನು (25) ಗಂಡನಿಂದ ಭೀಕರವಾಗಿ ಕೊಲೆಯಾದ ಮಹಿಳೆ.ಅಜ್ಜಂಪುರ ತಾಲೂಕಿನ ಚಿಕ್ಕನಾವಂಗಲ ಗ್ರಾಮದಲ್ಲಿ ಘಟನೆ ನಡೆದಿದೆ .
ಪತಿ ರಮೇಶ್ ತನ್ನ ಪತ್ನಿಯನ್ನು ಕ್ರೂರವಾಗಿ ಕೊಚ್ಚಿ ಕೊಲೆ ಮಾಡಿದ್ದಾನೆ.ಗಂಡನ ಜೊತೆ ಜಗಳವಾಗಿ 2 ವರ್ಷದಿಂದ ತನು ಪ್ರತ್ಯೇಕವಾಗಿ ವಾಸವಾಗಿದ್ದಳು.
7 ವರ್ಷದ ಹಿಂದೆ ಮದುವೆಯಾಗಿದ್ದು, 6 ವರ್ಷದ ಗಂಡು ಮಗುವಿದೆ . ನಿನ್ನೆ ರಾತ್ರಿ ಕುಡಿದು ಬಂದು ಪತ್ನಿಯನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾನೆ.
ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Wife murdered in Chikkanawangal village
Leave a comment