ಚಿಕ್ಕಮಗಳೂರು: ಬಿ.ಎಲ್.ಶಂಕರ್ ರಾಜಕೀಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ದೊಡ್ಡ ಶಕ್ತಿಯಾಗಿದ್ದವರು ಹಿನ್ನಡೆ ಅನುಭವಿಸುತ್ತಿರುವುದು ಏಕೆ ?
ಕಿರಿಯ ವಯಸ್ಸಿನಲ್ಲಿ ಹಿರಿಯ ಜವಾಬ್ದಾರಿ ನಿರ್ವಹಿಸಿರುವ ಶಂಕರ್ ಕಳೆದ ಇಪ್ಪತ್ತೈದು ವರ್ಷಗಳಿಂದ ಯಾವ ಅಧಿಕಾರವಿಲ್ಲದೆ ಒದ್ದಾಡುತ್ತಿದ್ದಾರೆ. ಇಪ್ಪತ್ತೈದರ ಹರೆಯದಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಯುವಜನ ಸೇವಾ ಮತ್ತು ಕ್ರೀಡಾ ಮಂತ್ರಿಯಾಗಿದ್ದವರು.ಬೆಳಗ್ಗೆ ವಿಧಾನ ಪರಿಷತ್ ಸದಸ್ಯರಾಗಿ ಸಂಜೆ ದೊಡ್ಡ ಕೈಗಾರಿಕಾ ಮಂತ್ರಿ ಯಾದ ದಾಖಲೆ ಇದೆ.
ಸಭಾಪತಿ ಯಾಗಿ ಸೈ ಅನ್ನಿಸಿಕೊಂಡವರು ಲೋಕಸಭಾ ಸದಸ್ಯರಾಗಿ ಜನತಾದಳದ ರಾಜ್ಯ ಅಧ್ಯಕ್ಷರಾಗಿ ಪಕ್ಷ ಕಟ್ಟಿದವರು. ಒಂದು ಹಂತದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಇದ್ದವರು ಕಳೆದ ಇಪ್ಪತ್ತೈದು ವರ್ಷಗಳಿಂದ ಏನು ಆಗದು ಎಂಬಂತೆ ಈ ಸಾರಿ ವಿಧಾನ ಪರಿಷತ್ ಗೆ ಗ್ಯಾರಂಟಿ ಎನ್ನುತ್ತ ಇರುವಾಗಲೇ ಪಟ್ಟಿಯಲ್ಲಿ ಇದ್ದ ಹೆಸರು ಕಾಣೆಯಾಗುತ್ತಿರುವುದರ ಗುಟ್ಟೇನಲ್ಲ.
ಜನತಾದಳ ತೊರೆದು ಕಾಂಗ್ರೆಸ್ ಸೇರಿದ ಮೇಲೆ ಮೂಲೆಗುಂಪಾಗಿರುವುದು ಸ್ಪರ್ಧೆ ಮಾಡಿದ ಚುನಾವಣೆಯಲ್ಲಿ ಸೋತ ದಾಖಲೆ ಸೇರಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ರಾಜಕಾರಣಕ್ಕೆ ಸೀಮಿತವಾದ ಶಂಕರ್ ತನಗೆ ಬೇಕಾದ ಗುಂಪು ಕಟ್ಟಿಕೊಂಡು ನೆಲಕಚ್ಚಿದ್ದಾರೆ ಎಂದು ಕಾಂಗ್ರೆಸ್ ನ ಮುಖಂಡರು ಹೇಳುವುದಲ್ಲದೆ ಶಂಕರ್ ನಮಗೆ ಗೂಟ ಒಡೆದರೆ ಶಂಕರ್ ಗೂ ಗೂಟ ಒಡೆಯುವವರು ಇರುತ್ತಾರೆ ಆದ್ದರಿಂದ ಶಂಕರ್ ರಾಜಕೀಯ ನಿವೃತ್ತಿ ಪಡೆಯಲಿ ಎನ್ನುತ್ತಾರೆ.ಈ ಬಾರಿ ಖಚಿತವಾಗಿ ವಿಧಾನ ಪರಿಷತ್ ಗೆ ಹೋಗುತ್ತಾರೆ ಎನ್ನುವಾಗ ಅವರ ಬದಲಾಗಿ ಆರತಿಕೃಷ್ಣರ ಹೆಸರು ಮೂಂಚುಣಿಗೆ ಬಂದಿದ್ದು ಮಾತ್ರ ಶಂಕರ್ ತೀವ್ರ ಹಿನ್ನಡೆ ಎನ್ನಲಾಗಿದೆ.
ಶಂಕರ್ ಬೆಂಗಳೂರು ರಾಜಕಾರಣದ ಕೇಂದ್ರವಾಗಿಸಿಕೊಂಡು ತಳಮಟ್ಟದ ಹಿಡಿತ ಕಳೆದುಕೊಂಡಿರುವುದರ ಜೊತೆಗೆ ಹಿಂಬಾಲಕರು ಕಿವಿ ಕಚ್ಚಿ ರಾಜಕೀಯ ಹಿನ್ನಡೆಗೆ ಕಾರಣ ಎನ್ನುವವರು ಇದ್ದಾರೆ.
ಸಾಂಸ್ಕೃತಿಕವಾಗಿ ಉತ್ತಮ ನಡವಳಿಕೆ ಮಾತು,ಓದುವ ಹವ್ಯಾಸ ಸಭೆ,ಸಮಾರಂಭ ಸಂಘಟಿಸುವುದು,ಪ್ರಣಾಳಿಕೆ ಬೇಕಾದ ವಿಷಯ ತಿಳಿದಿರುವ ಶಂಕರ್ ಒಳ್ಳೆಯ ಭಾಷಣಕಾರ ಹೀಗಾಗಿ ಕಳೆದ ಇಪ್ಪತ್ತೈದು ವರ್ಷಗಳಿಂದ ಚಿತ್ರ ಕಲಾ ಪರಿಷತ್ ನ ಅಧ್ಯಕ್ಷರಾಗಿದ್ದು ಇತ್ತೀಚಿಗೆ ಮತ್ತೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರು ಹೌದು ಒಟ್ಟಾರೆ ಹೇಳುವುದಾದರೆ ಶಂಕರ್ ಗೆ ರಾಜಕೀಯ ಬೇಕೋ ಬೇಡವೋ ಅವರೇ ಉತ್ತರಿಸ ಬೇಕು.
Why is B.L. Shankar politically backward?
Leave a comment