Home namma chikmagalur ಸಿಡಿಎ ವಂಚನೆ ವಿರುದ್ಧ ಗ್ರಾಮಸ್ಥರಿಂದ ಪ್ರತಿಭಟನೆ
namma chikmagalurchikamagalurHomeLatest News

ಸಿಡಿಎ ವಂಚನೆ ವಿರುದ್ಧ ಗ್ರಾಮಸ್ಥರಿಂದ ಪ್ರತಿಭಟನೆ

Share
????????????????????????????????????
Share

ಚಿಕ್ಕಮಗಳೂರು:  ಇಂದಾವರ ಗ್ರಾಮಸ್ಥರ ಜಮೀನನ್ನು ನಿವೇಶನಗಳನ್ನಾಗಿ ಪರಿವ ರ್ತಿಸುವಂತೆ ಸಿಡಿಎ ಇಲಾಖೆ ಒಡಂಬಡಿಕೆಯಲ್ಲಿ ಜಮೀನನ್ನು ಪಡೆದುಕೊಂಡು ರೈತರಿಗೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿ ಗುರುವಾರ ಸಿಡಿಎ ಕಚೇರಿ ಎದುರು ಇಂದಾವರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಈ ಕುರಿತು ಮಾತನಾಡಿದ ಗ್ರಾಮಸ್ಥ ಯತೀಶ್ ಗ್ರಾಮದ ಸುಮಾರು ೨೦೮ ಎಕರೆ ಪ್ರದೇಶವನ್ನು ಸಿಡಿ ಎ ಇಲಾಖೆ ಪರಸ್ಪರ ಒಪ್ಪಂದ ಮೇರೆಗೆ ಪಡೆದುಕೊಂಡು ಸುಮಾರು ಮೂರ್‍ನಾಲ್ಕು ವರ್ಷಗಳೇ ಕಳೆದರೂ ಇಂದಿಗೂ ಲೇಔಟ್ ನಿರ್ಮಾಣಗೊಂಡಿಲ್ಲ. ಇನ್ನೊಂದೆಡೆ ರೈತರ ಜಮೀನನ್ನು ಹಿಂತಿರುಗಿಸುತ್ತಿಲ್ಲ ಎಂದು ಆರೋಪಿಸಿದರು.

ಗ್ರಾಮದ ಜಮೀನನ್ನು ಸರಿಯಾಗಿ ನಿವೇಶನಗಳನ್ನಾಗಿ ಮಾರ್ಪಡಿಸದೇ ಸಿಡಿಎ ಇಲಾಖೆ, ಇದೀಗ ಮ ತ್ತೊಂದು ಸ್ಥಳದಲ್ಲಿ ರೈತರಿಂದ ಜಮೀನು ಪಡೆದುಕೊಂಡು ಲೇಔಟ್ ಮಾಡುವುದಾಗಿ ಹೇಳುತ್ತಿದೆ. ಇದರಿಂ ದ ಗ್ರಾಮದ ಬಹುತೇಕ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಹೇಳಿದರು.

ಬೃಹತ್ ಮಟ್ಟದಲ್ಲಿ ಗ್ರಾಮದಲ್ಲಿ ಲೇಔಟ್ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಬೆರಳಣಿಕೆ ಸಂಖ್ಯೆಯ ಲ್ಲಿ ಸಿಬ್ಬಂದಿಗಳು ನಿಯೋಜಿಸಿ ಕೆಲಸ ಮಾಡಿಸಲಾಗುತ್ತಿದೆ. ಅಲ್ಲದೇ ವರ್ಷಗಟ್ಟಲೇ ಸಮಯ ಸಾಗುತ್ತಿರುವ ಕಾರಣ ನಿವೇಶನದ ಜಾಗದಲ್ಲಿ ಹುಲ್ಲು ಬೆಳೆದುಕೊಂಡು ನಿವೇಶನ ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಜೊತೆಗೆ ರೈತರಿ ಗೂ ತಮ್ಮ ಜಮೀನು ಯಾವುದೆಂದು ತಿಳಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮದ ರೈತರ ಪ್ರತಿ ಎಕರೆಗೆ ಶೇ.೫೫ ರಂತೆ ೧೨ ಸಾವಿರ ಚದರಡಿ ಮೀಸಲಿಡಬೇಕು. ಈ ಲೇಔಟ್ ಸಂಪೂರ್ಣವಾಗಿ ಪೂರೈಸುವ ಮೊದಲೇ, ಹೊಸ ಸ್ಥಳದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರವು ಕಾಯ್ದೆಗಳ ಬೆದ ರಿಕೆವೊಡ್ಡಿ ರೈತರಿಂದ ಜಮೀನನ್ನು ಕಬಳಿಸಲು ಯತ್ನಿಸುತ್ತಿದೆ ಎಂದರು.

ರೈತರು ಬೆಳೆ ಭೂಮಿಯನ್ನು ಪ್ರಾಧಿಕಾರಕ್ಕೆ ಹಸ್ತಾಂತರಿಸಿ ನಾಲ್ಕೈದು ವರ್ಷಗಳೇ ಕಳೆದಿವೆ. ಇಂದಿಗೂ ಲೇಔಟ್ ಪೂರೈಸದೇ ಉಡಾಫೆ ಉತ್ತರ ನೀಡಿ ರೈತರನ್ನು ವಂಚಿಸಲಾಗುತ್ತಿದೆ. ರೈತರಿಗೆ ನಿವೇಶನ ಹಂಚಿಲ್ಲ, ಲೇಔಟ್‌ನಲ್ಲಿ ಚರಂಡಿ, ರಸ್ತೆ ಕಾಮಗಾರಿ ಕಳಪೆಯಾಗಿದೆ. ಇಲಾಖೆ ರೈತರ ಬೆಳೆ ಬೆಳೆಯುವ ಭೂಮಿ ಪಡೆದು ವಂಚಿಸುತ್ತಿದ್ದಾರೆ ಎಂದರು.

ಕೂಡಲೇ ಲೇಔಟ್ ಬಗ್ಗೆ ಸಿಡಿಎ ಇಲಾಖೆ ಡಿಸೆಂಬರ್ ಅಂತ್ಯದೊಳಗೆ ಸಮರ್ಪಕ ಉತ್ತರ ನೀಡಿ, ರೈತ ರಿಗೆ ನಿವೇಶನ ಹಂಚಿಕೆ ಮಾಡದಿದ್ದಲ್ಲಿ ಜಮೀನಿನಲ್ಲಿ ರೈತರು ಉಳುಮೆ ಆರಂಭಿಸುವ ಜೊತೆಗೆ ಇಲಾಖೆ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಇಂದಾವರ ಗ್ರಾ.ಪಂ. ಅಧ್ಯಕ್ಷ ಸುಭಾಶ್, ಗ್ರಾಮಸ್ಥರಾದ ಸುರೇಶ್, ದಿನೇಶ್, ಲವ ಕುಮಾರ್, ರೇವಣ್ಣ, ಐ.ಡಿ.ಚಂದ್ರು, ಪ್ರೇಮ್‌ಕುಮಾರ್, ದಿಣೇಶ್, ಮಲ್ಲೇಶ್, ಚೇತನ್, ನಿರಂಜನ್ ಇದ್ದರು.

Villagers protest against CDA fraud

Share

Leave a comment

Leave a Reply

Your email address will not be published. Required fields are marked *

Don't Miss

ಅಮಾನವೀಯ ಜಾನುವಾರು ಸಾಗಾಟ – ಮೂವರ ಬಂಧನ

ಎನ್.ಆರ್. ಪುರ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಹಾಗೂ ಅಮಾನವೀಯ ಜಾನುವಾರು ಸಾಗಾಟ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಿ, ವಾಹನ ಮತ್ತು ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ...

ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಧ್ಯಮಗಳು ಮಾಡಬೇಕು

ಚಿಕ್ಕಮಗಳೂರು: ಬಡವರ ಕಷ್ಟಗಳನ್ನು, ಸಮಸ್ಯೆಗಳನ್ನು ಸಮಾಜದ ಮತ್ತು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸಲಹೆ ಮಾಡಿದರು. ಹೊನ್ನ ಬಿತ್ತೇವು ಹೊಲಕೆಲ್ಲ ಮತ್ತು ನ್ಯೂಸ್ ಕಿಂಗ್...

Related Articles

ನೀರುಗಂಟಿ ಆತ್ಮಹತ್ಯೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲು

ಚಿಕ್ಕಮಗಳೂರು: ಅಣೂರು ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ರಮೇಶ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ,...

ಹೇಮಾವತಿ ನದಿಯ ಅಕ್ರಮವಾಗಿ ಮರಳು ಸಾಗಣೆ ಪ್ರಕರಣ ಪತ್ತೆ

ಮೂಡಿಗೆರೆ: ಜೀವನದಿ ಹೇಮಾವತಿಯ ಒಡಲಿಗೆ ಕನ್ನ ಹಾಕಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಜಾಲದ ಮೇಲೆ ಗೋಣಿಬೀಡು...

ಕಾಫಿನಾಡಿನಲ್ಲಿ ರಂಜಾನ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆ

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಪವಿತ್ರ ರಂಜಾನ್ ಹಬ್ಬದ ಸಂಭ್ರಮವು ಸಡಗರ ಹಾಗೂ ಸೌಹಾರ್ದತೆಯಿಂದ ಕಳೆಗಟ್ಟಿತ್ತು. ಕೆಂಪನಹಳ್ಳಿಯ...

ಕಾಫಿ ತೋಟದಲ್ಲಿ ಮರಗಸಿ – ಕಾರ್ಮಿಕನ ಸಾವು

ಚಿಕ್ಕಮಗಳೂರು : ಕಾಫಿ ತೋಟದ ಮಾಲೀಕರು ಮತ್ತು ಮೇಸ್ತ್ರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ಕಾರ್ಮಿಕನೊಬ್ಬ ಬಲಿಯಾದ ದಾರುಣ...