ಚಿಕ್ಕಮಗಳೂರು: ಜಿಲ್ಲಾಸ್ಪತ್ರೆಯಲ್ಲಿ ನಿರ್ಲಕ್ಷ್ಯತನದಿಂದ ಬಡ ರೋಗಿಗಳ ಸಾವಿಗೆ ಕಾರ ಣರಾದ ಸರ್ಜನ್, ಡೀನ್ ಮತ್ತು ವೈದ್ಯಾಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊ ಳ್ಳಬೇಕು ಎಂದು ಆಗ್ರಹಿಸಿ ಭೀಮ್‌ಆರ್ಮಿ, ರಾಜ್ಯ ರೈತ ಹಸಿರುಸೇನೆ, ಕನ್ನಡಸೇನೆ ಹಾಗೂ ವಿವಿಧ ಸಂಘಟ ನೆಗಳ ನೇತೃತ್ವದಲ್ಲಿ ಶುಕ್ರವಾರ ಆಜಾದ್‌ಪಾರ್ಕ್ ವೃತ್ತದಲ್ಲಿ ಮುಖಂಡರು ಪ್ರತಿಭಟನೆ ನಡೆಸಿದರು.
ಈ ಕುರಿತು ಮಾತನಾಡಿದ ಭೀಮ್‌ಆರ್ಮಿ ಜಿಲ್ಲಾಧ್ಯಕ್ಷ ಹೊನ್ನೇಶ್ ಹೊಸವರ್ಷದ ದಿನದಂದು ಜಿಲ್ಲಾ ಸ್ಪತ್ರೆಯಲ್ಲಿ ರೋಗಿಗಳು ನರಳಾಡುತ್ತಿದ್ದರೂ ವೈದ್ಯಕೀಯ ಸಿಬ್ಬಂದಿಗಳು ಕುಣಿದುಕುಪ್ಪಳಿಸುವ ವೀಡಿಯೋ ಎಲ್ಲೆಡೆ ವೈರಲ್‌ಆಗಿದೆ. ದಾದಿಯರ ಸಂಭ್ರಮದಲ್ಲಿ ಅಮಾಯಕ ರೋಗಿಗಳು ಸಾವಿಗೀಡಾಗಿ ಅವರ ಕುಟುಂ ಬವು ಬೀದಿಪಾಲಾಗಿದೆ ಎಂದರು.
ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಬೇಕಾದ ವೈದ್ಯರು, ಖಾಸಗೀ ಕ್ಲೀನಿಕ್ ತೆರೆದು ಜಿಲ್ಲಾಸ್ಪತ್ರೆಯನ್ನು ಮರೆ ತಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಖಾಸಗೀ ಕ್ಲೀನಿಕ್‌ನಲ್ಲೇ ಚಿಕಿತ್ಸೆ ನೀಡುತ್ತೇವೆ ಎಂದು ಸರ್ಕಾ ರಿ ವೈದ್ಯರು ತಮ್ಮ ವೈಯಕ್ತಿಕ ಲಾಭವನ್ನು ಹೆಚ್ಚಿಸಿಕೊಂಡು, ಸರ್ಕಾರಿ ಕೆಲಸವನ್ನು ಸರಿಯಾಗಿ ನಿರ್ವಹಿಸು ತ್ತಿಲ್ಲ ಎಂದು ದೂರಿದರು.
ಜಿಲ್ಲಾಸ್ಪತ್ರೆ ಸುತ್ತಮುತ್ತ, ರೋಗಿಗಳ ಕೊಠಡಿ ಹಾಗೂ ಮೆಡಿಕಲ್ ಕಾಲೇಜು ಸಮೀಪ ಸ್ವಚ್ಚತೆ ಕಾಪಾ ಡುತ್ತಿಲ್ಲ. ಈ ಬಗ್ಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮೆಡಿಕಾಲ್ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ಬಳಿಕ, ಚಳಿಗಾಲದ ಅಧಿವೇಶನದಲ್ಲಿ ಧ್ವನಿಗೂಡಿಸಿದರೂ ಇಂದಿಗೂ ರಾಜ್ಯಸರ್ಕಾರ ಯಾವುದೇ ಕ್ರಮ ಜರು ಗಿಸದಿರುವುದು ದುರ್ದೈವ ಎಂದು ಹೇಳಿದರು.
ರಾಜ್ಯ ರೈತ ಹಸಿರುಸೇನೆ ಅಧ್ಯಕ್ಷ ಫಯಾಜ್ ಮಾತನಾಡಿ ಜಿಲ್ಲಾಸ್ಪತ್ರೆಯಲ್ಲಿ ಸಾವಪ್ಪಿನದ ಬಡ ರೋಗಿಗ ಗಳ ಕುಟುಂಬಕ್ಕೆ ಸರ್ಕಾರ ತಲಾ ೫೦ ಲಕ್ಷ ರೂ. ಪರಿಹಾರ ಘೋಷಿಸಬೇಕು. ಬಡವರ ರೋದನೆಗೆ ಸರ್ಕಾ ರ ಸ್ಪಂದಿಸದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಮೀಪ ಎಲ್ಲಾ ಸಂಘಟನೆಗಳು ಒಟ್ಟಾಗಿ ಬೃಹತ್ ಪ್ರತಿಭಟನೆ ನಡೆ ಸಲಾಗುವುದು ಎಂದು ಎಚ್ಚರಿಸಿದರು.
ಕನ್ನಡಸೇನೆ ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್ ಮಾತನಾಡಿ ಬಡ ರೋಗಿಗಳು ಕಾಯಿಲೆಗಳಿಂದ ನರಳಾಡಿ ಸಾವಪ್ಪಿದ್ದು ಇದಕ್ಕೆ ಮೂಲ ಕಾರಣರಾದ ಜಿಲ್ಲಾಸ್ಪತ್ರೆ ಸರ್ಜನ್, ಮೆಡಿಕಲ್ ಕಾಲೇಜು ಡೀನ್ ಮತ್ತು ವೈದ್ಯರುಗಳ ವಿರುದ್ಧ ಕ್ರಮ ವಹಿಸಬೇಕು. ನೊಂದವರ ಪಾಲಿಗೆ ಸೂಕ್ತ ಪರಿಹಾರ ಒದಗಿಸುವ ಮೂಲಕ ನ್ಯಾಯ ಒದಗಿಸಿಕೊಡಬೇಕು ಎಂದರು.
ಪ್ರತಿಭಟನೆಯಲ್ಲಿ ಭೀಮ್ ಆರ್ಮಿ ತಾಲ್ಲೂಕು ರಮೇಶ್, ಪ್ರಧಾನ ಕಾರ್ಯದರ್ಶಿ ಲೋಕೇಶ್, ಟಿಪ್ಪು ಸುಲ್ತಾನ್ ವೇದಿಕೆ ಅಧ್ಯಕ್ಷ ಜಂಶೀದ್‌ಖಾನ್, ಕನ್ನಡಸೇನೆ ನಗರಾಧ್ಯಕ್ಷ ಸತೀಶ್, ಹಸಿರುಸೇನೆ ಹಾಸನ ಜಿಲ್ಲಾ ಧ್ಯಕ್ಷೆ ಶರತ್, ಮುಖಂಡರುಗಳಾದ ಸುಧೀರ್, ಅಕ್ರಮ್, ಸೈಯದ್ ಅಬ್ದುಲ್, ರಂಗಸ್ವಾಮಿ ಉಪಸ್ಥಿತರಿದ್ದರು.
Various organizations protest against negligence at the district hospital
Leave a comment