Home namma chikmagalur chikamagalur ರಸ್ತೆ ಅಪಘಾತದಲ್ಲಿ ಇಬ್ಬರ ಸಾವು-ಐವರಿಗೆ ಗಾಯ
chikamagalurHomeLatest Newsnamma chikmagalur

ರಸ್ತೆ ಅಪಘಾತದಲ್ಲಿ ಇಬ್ಬರ ಸಾವು-ಐವರಿಗೆ ಗಾಯ

Share
Share

ಕಡೂರು: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗೇಸರ ಸೇತುವೆಯ ಮೇಲೆ ನಡೆದ ರಸ್ತೆ ಅಪಘಾತದಲ್ಲಿ ರಾಜಯ್ಯ ಎಂಬುವವರು ಮೃತಪಟ್ಟಿದ್ದಾರೆ.

ಜಿ. ಮಾದಾಪುರ ಗ್ರಾಮದ ನಿವಾಸಿಯಾದ ಇವರು ತಮ್ಮ ಟಿವಿಎಸ್ ಎಕ್ಸ್‌ಎಲ್ ವಾಹನದಲ್ಲಿ ಮಾದಾಪುರ ಮಠದ ಬಳಿ ಇರುವ ಅಂಗಡಿಗೆ ವ್ಯಾಪಾರಕ್ಕಾಗಿ ತೆರಳುತ್ತಿದ್ದರು. ಈ ವೇಳೆ ಗಂಗೇಸರ ಸೇತುವೆಯ ಮೇಲೆ ವಾಹನ ಸ್ಕಿಡ್ ಆಗಿ ಬಿದ್ದ ಪರಿಣಾಮ ಅವರ ತಲೆಯ ಬಲ ಭಾಗಕ್ಕೆ ತೀವ್ರ ರಕ್ತಗಾಯವಾಗಿತ್ತು.

ತಕ್ಷಣವೇ ಅವರನ್ನು ಕಡೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಆಟೋ ಪಲ್ಟಿ: ಚಾಲಕ ಸಾವು, ಐವರಿಗೆ ಗಾಯ

ಬೀರೂರು ಮತ್ತು ಅಜ್ಜಂಪುರ ಮಧ್ಯದ ದೋಗೆಹಳ್ಳಿ ಬಳಿ ಆಟೋ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ಆಟೋ ಚಾಲಕ ಶಿವು ಎಂಬುವವರು ಮೃತಪಟ್ಟಿದ್ದು, ಐವರು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಜನವರಿ 31ರ ಮುಂಜಾನೆ ಭದ್ರಾವತಿ ಮತ್ತು ಬೀರೂರು ನಿವಾಸಿಗಳಾದ ಹನುಮಂತ ರಾವ್, ಪ್ರಮಿಳಾ, ಪಲ್ಲವಿ, ಧನ್ಯ ಹಾಗೂ ವರುಣ ಅವರೊಂದಿಗೆ ಶಿವು ಅವರು ಅಂತರಘಟ್ಟೆ ಜಾತ್ರೆಗೆ ಆಟೋದಲ್ಲಿ ತೆರಳುತ್ತಿದ್ದರು. ಮುಂಜಾನೆ 6 ಗಂಟೆಯ ಸುಮಾರಿಗೆ ರಸ್ತೆಗೆ ನಾಯಿ ಅಡ್ಡ ಬಂದಾಗ ಅದನ್ನು ತಪ್ಪಿಸಲು ಹೋದ ಚಾಲಕ ಶಿವು ಅವರ ನಿಯಂತ್ರಣ ತಪ್ಪಿ ಆಟೋ ರಸ್ತೆ ಬದಿಯ ಕಾಲುವೆಗೆ ಉರುಳಿ ಬಿತ್ತು.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶಿವು ಅವರನ್ನು ಬೀರೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಉಳಿದ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಮೃತರ ಸಹೋದರ ಶ್ರೀನಿವಾಸ ನೀಡಿದ ದೂರಿನ ಮೇರೆಗೆ ಬೀರೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Two dead five injured in road accident

Share

Leave a comment

Leave a Reply

Your email address will not be published. Required fields are marked *

Don't Miss

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ-ಜಿಲ್ಲಾಧಿಕಾರಿ

ಚಿಕ್ಕಮಗಳೂರು: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಇದೇ ಮಾರ್ಚ್ ೧೮ ರಿಂದ ಪ್ರಾರಂಭವಾಗಲಿದ್ದು, ಪರೀಕ್ಷೆಗಳು ಸುಸೂತ್ರವಾಗಿ ನಡೆಯಲು ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ತಿಳಿಸಿದರು. ಜಿ.ಪಂ.ನ ಅಬ್ದುಲ್...

ಜಿಲ್ಲೆಯಲ್ಲಿ ಗೃಹಬಳಕೆ ಸಿಲಿಂಡರ್‌ಗೆ ಕೊರತೆ ಇಲ್ಲ

ಚಿಕ್ಕಮಗಳೂರು, ಮಾ.೧೩: ಜಿಲ್ಲೆಯಲ್ಲಿ ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳ ಸಮರ್ಪಕ ಸಂಗ್ರಹ ಮತ್ತು ಸರಬರಾಜು ಲಭ್ಯವಿರುವುದನ್ನು ದೃಢಪಡಿಸಿ ಎಂದಿನಂತೆ ಎಲ್‌ಪಿಜಿ ವಿತರಕರು ಗ್ರಾಹಕರ ಮನೆಬಾಗಿಲಿಗೆ ಸರಬರಾಜು ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ...

Related Articles

ವಿದ್ಯುತ್ ಸ್ಪರ್ಶಕ್ಕೆ ಯುವಕನ ಧಾರುಣ ಸಾವು

ಅಜ್ಜಂಪುರ: ವಿದ್ಯುತ್ ಸ್ಪರ್ಶದಿಂದ ಪ್ರವೀಣ್ ಎಂಬ ಯುವಕ ಮೃತಪಟ್ಟಿದ್ದಾನೆ ಸೊಕ್ಕೆ ಪರಮೇಶಣ್ಣ ಅವರ ಮಗ. ಹೆಬ್ಬೂರು...

ಏಕಲವ್ಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ಮನಸೋಇಚ್ಛೆ ಹಲ್ಲೆ

ಮೂಡಿಗೆರೆ:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದಲ್ಲಿರುವ ಏಕಲವ್ಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ...

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ 25ಕ್ಕೂ ಹೆಚ್ಚುಕಡೆ ಬೆಂಕಿ

ಚಿಕ್ಕಮಗಳೂರು: ಬಿಸಿಲ ಬೇಗೆಗೆ ಅಪರೂಪದ ಶೋಲಾ ಹುಲ್ಲುಗಾವಲು  ಹೊತ್ತಿ ಉರಿಯುತ್ತಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ...

3.50 ಕೋಟಿ ರೂ ವೆಚ್ಚದ ವಿವಿಧ ರಸ್ತೆಗಳ ಲೋಕಾರ್ಪಣೆ

ಚಿಕ್ಕಮಗಳೂರು:  ಬಡವರ ಬಗ್ಗೆ ಕಾಳಜಿ ಇಲ್ಲದ ಕೇಂದ್ರ ಸರ್ಕಾರ ಧರ್ಮ ಧರ್ಮಗಳ ಮಧ್ಯೆ ವಿಷಬೀಜ ಬಿತ್ತಿ...