ಚಿಕ್ಕಮಗಳೂರು: ಟ್ರ್ಯಾಕ್ಟರ್ ಹಾಗೂ ಓಮ್ಮಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಒಮ್ಮಿಯಲ್ಲಿದ್ದ ಇಬ್ಬರು ಸಾವನ್ನಪ್ಪಿ ಮತ್ತಿಬ್ಬರಿಗೆ ಗಾಯಗಳಾಗಿರುವ ಘಟನೆ ಚಿಕ್ಕಮಗಳೂರು-ಕಡೂರು ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಕಡೂರು ತಾಲೂಕಿನ ಒಕ್ಕಲಿಗರೆ ಗ್ರಾಮದ ದಾಕ್ಷಾಯಿಣಿ, ಮೋಹನ್, ಲಕುಮಿ, ರಕ್ಷಾ ಧರ್ಮಸ್ಥಳಕ್ಕೆ ಹೊರಟಿದ್ದರು ಆದರೆ ಚಿಕ್ಕಮಗಳೂರು ಸಮೀಪಕ್ಕೆ ಬಂದು ಧರ್ಮಸ್ಥಳಕ್ಕೆ ಹೋಗುವುದು ಬೇಡವೆಂದು ನಿರ್ಧರಿಸಿ ವಾಪಾಸ್ ಸ್ವಗ್ರಾಮಕ್ಕೆ ತೆರಳುವಾಗ ಸಖರಾಯಪಟ್ಟಣದ ಆಂಜನೇಯ ದೇವಸ್ಥಾನದ ಬಳಿ ಕಡೂರು ಕಡೆಯಿಂದ ಬರುತ್ತಿದ್ದ ಟ್ರ್ಯಾಕ್ಟರ್ ಒಮ್ಮಿಗೆ ಡಿಕ್ಕಿ ಹೊಡೆದಿದೆ.
ಪರಿಣಾಮ ಒಮ್ಮಿಯಲ್ಲಿದ್ದ ದಾಕ್ಷಾಯಿಣಿ (೫೦) ಹಾಗೂ ಒಂದೂವರೆ ವರ್ಷದ ಲಕುಮಿ ಸ್ಥಳದಲ್ಲಿ ಸಾವನಪ್ಪಿದ್ದಾರೆ. ಅಪಘಾತವಾಗುತ್ತಿದ್ದಂತೆಯೇ ಟ್ರ್ಯಾಕ್ಟರ್ ಚಾಲಕ ಎಸ್ಕೆಪ್ ಆಗಿದ್ದಾನೆ ನಂತರ ಸ್ಥಳೀಯರು ಗಾಯಗೊಂಡಿದ್ದ ಮೋಹನ್ ಹಾಗೂ ರಕ್ಷಾ ಅವರನ್ನು ಕಡೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tractor-Ommi road accident – two killed
Leave a comment