ಅಜ್ಜಂಪುರ: ಸೆಪ್ಟೆಂಬರ್ 17 ರಂದು ಪಟ್ಟಣ ಪಂಚಾಯತಿ ಚುನಾವಣೆಗೆ ನಡೆದಿದ್ದು ಇಂದು ಮತಗಳ ಎಣಿಕೆ ಮಾಡಿ ಫಲಿತಾಂಶ ಪ್ರಕಟವಾಗಿದೆ.
ಒಂದನೆಯ ವಾರ್ಡ್‌ನಲ್ಲಿ ನಿರೀಕ್ಷೆಯಂತೆ ಬಿಜೆಪಿಯ ಕವಿತಾ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಮಾಲ ಸೋಲು ಕಂಡಿದ್ದಾರೆ. ಕವಿತಾ 491 ಮತ ಪಡೆದರೆ ಮಾಲ135 ಮತ ಪಡೆದಿದ್ದಾರೆ.
ಎರಡನೆಯ ವಾರ್ಡ್‌ನಲ್ಲಿ ಬಿಜೆಪಿಯವರು ಗೆದ್ದೇ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಉಸಿಯಾಗಿದೆ.ಕಾಂಗ್ರೆಸ್ ನ ಜೋಗಿ ಪ್ರಕಾಶ್ ಗೆಲುವು ಸಾಧಿಸಿದರೆ ಬಿಜೆಪಿಯ ಮಲ್ಲಿಕಾರ್ಜುನ ಸೋಲು ಕಂಡಿದ್ದಾರೆ.ಕಾಂಗ್ರೆಸ್590 ಮತಪಡೆದರೆ ಬಿಜೆಪಿ511 ಮತಪಡಿದಿದೆ.
ಮೂರನೆಯ ವಾರ್ಡ್‌ನಲ್ಲಿ ಕಾಂಗ್ರೆಸ್ ನ ನಿಸಾರ್ ಅಹಮದ್ ನಿರೀಕ್ಷೆಯಂತೆ 664 ಮತ ಪಡೆದು ಜಯಗಳಿಸಿದ್ದಾರೆ.ಪಕ್ಷೇತರರ ಅಭ್ಯರ್ಥಿ ಷಡಾಕ್ಷರಿ 584 ಮತ್ತು ದಳದ ಎಸ್,ಶಿವಾನಂದ್ 62 ಮತ ಪಡೆದು ಸೋಲು ಕಂಡಿದ್ದಾರೆ.
ನಾಲ್ಕನೆಯ ವಾರ್ಡ್‌ನಲ್ಲಿ ಬಿಜೆಪಿಯ ರೇವಣ್ಣ 255 ಮತಪಡೆದು ಗೆಲುವಿನ ನಗೆ ಬೀರಿದರೆ ಕಾಂಗ್ರೆಸ್ ನ ರತ್ನಮ್ಮ 237 ಮತ ಪಡೆದ ಸೋತಿದ್ದಾರೆ.
ಐದನೆಯ ವಾರ್ಡ್‌ನಲ್ಲಿ ಕಾಂಗ್ರೆಸ್ ನ ಕೃಷ್ಣಪ್ಪ 247 ಮತಪಡೆದು ಅಯ್ಕೆಯಾಗಿದ್ದು ಬಿಜೆಪಿಯ ಪ್ರಕಾಶ್ 216 ಮತ ಪಡೆದು ಸೋಲು ಕಂಡಿದ್ದಾರೆ ಐದು ಜನ ಪಕ್ಷೇತರರು ಸ್ಪರ್ಧೆ ಮಾಡಿ ಕೆಲವು ಮತ ಪಡೆದಿದ್ದಾರೆ.
ಆರನೆಯ ವಾರ್ಡ್‌ನಲ್ಲಿ ಬಿಜೆಪಿಯ ರಂಗಸ್ವಾಮಿ 364 ಮತ ಪಡೆದು ಗೆಲುವು ಸಾಧಿಸಿದರೆ ಕಾಂಗ್ರೆಸ್ ನ ಮಂಜುನಾಥ್ 292 ಮತ ಪಡೆದು ಸೋಲು ಕಂಡಿದ್ದಾರೆ.
ಏಳನೆಯ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಮಲತಾ 262 ಮತ ಪಡೆದು ಗೆಲುವು ಸಾಧಿಸಿದರೆ ಬಿಜೆಪಿಯ ಮೇಘನಾ 230 ಮತ ಪಡೆದು ಸೋತಿದ್ದಾರೆ.ಪಕ್ಷೇತರರಾದ ರೇಖಾ52 ಮತ್ತು ಮೇಘನಾ94 ಮತ ಪಡೆದಿದ್ದಾರೆ..
ಎಂಟನೆಯ ವಾರ್ಡ್‌ನಲ್ಲಿ ನಿರೀಕ್ಷೆ ಯಂತೆ ಕಾಂಗ್ರೆಸ್ ನ ತೀರ್ಥಪ್ರಸಾದ್ 290 ಮತ ಪಡೆದು ಗೆಲುವಿನ ನಗೆ ಬೀರಿದರೆ ಬಿಜೆಪಿಯ ಸಂತೋಷ್ 124 ಮತ್ತು ಪಕ್ಷೇತರರ ಅಭ್ಯರ್ಥಿ 24 ಮತ ಪಡೆದರು ಸೋಲು ಕಂಡಿದ್ದಾರೆ.
ಒಂಬತ್ತನೆಯ ವಾರ್ಡ್‌ನಲ್ಲಿ ಬಿಜೆಪಿಯ ಮಧುಸೂದನ್ ನಿರೀಕ್ಷೆಯಂತೆ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನ ಸಂತೋಷ್ ಸೋಲು ಕಂಡಿದ್ದಾರೆ.ಬಿಜೆಪಿ313 ಮತ ಪಡೆದರೆ ಕಾಂಗ್ರೆಸ್114ಮತ ಪಡೆದಿದೆ.
ಹತ್ತನೆಯ ವಾರ್ಡ್‌ನಲ್ಲಿ ಬಿಜೆಪಿಯ ಬಿಂದು 364 ಮತ ಪಡೆಯುವುದರ ಮೂಲಕ ಗೆಲುವು ಸಾಧಿಸಿದರೆ ಕಾಂಗ್ರೆಸ್ ನ ಮೇಘನಾ 291 ಮತ ಪಡೆದು ಸೋತಿದ್ದಾರೆ. ಹನ್ನೊಂದನೆಯ ವಾರ್ಡ್‌ನಲ್ಲಿ ಬಿಜೆಪಿಯ ಶೋಭ 552 ಮತ ಪಡೆದು ಗೆಲುವು ಸಾಧಿಸಿದರೆ ಕಾಂಗ್ರೆಸ್ ನ ಕವಿತಾ 301 ಮತ ಪಡೆದು ಸೋತಿದ್ದಾರೆ.
ಹನ್ನೊಂದು ವಾರ್ಡ್‌ನಲ್ಲಿ ಆರು ಸ್ಥಾನ ಗೆದ್ದು ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ ಐದು ಸ್ಥಾನ ಗೆದ್ದಿದೆ. ಶಾಸಕ ಶ್ರೀನಿವಾಸ್ ಮತ್ತು ಕುಟುಂಬ ಈ ಚುನಾವಣೆಯನ್ನು ಪ್ರತಿಷ್ಠೆಗೆ ತೆಗೆದುಕೊಂಡು ಹಗಲು ರಾತ್ರಿ ಓಡಾಡಿದ್ದು ಮತ್ತು ಅಧಿಕಾರ ಬಲ ಹಣ ಬಲ ಬಳಸಿದರು
ಪ್ರಯೋಜನವಾಗಿಲ್ಲ.ಕಾಂಗ್ರೆಸ್ ನಲ್ಲಿದ್ದ ಎ.ಟಿ.ಶ್ರೀನಿವಾಸ್ ಬಿಜೆಪಿ ಸೇರಿ ಸೆಡ್ಡು ಹೊಡೆದ ಪರಿಣಾಮ ಕಾಂಗ್ರೆಸ್ ಗೆ ಹಿನ್ನಡೆ ಕಾಣುವಂತಾಯಿತು ವಿಶ್ಲೇಷಣೆ ಮಾಡಲಾಗುತ್ತಿದೆ.ಬಿಜೆಪಿಯ ಬಹಳ ನಿರೀಕ್ಷೆ ಇಟ್ಟು ಕೊಂಡಿದ್ದ ಎರಡನೆಯ ವಾರ್ಡ್‌ನಲ್ಲಿ ಸೋತಿರುವುದು ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ ಮತದಾರರು.
Town Panchayat election results give majority to BJP
Leave a comment