Home namma chikmagalur chikamagalur ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರ ಹುಚ್ಚಾಟ
chikamagalurHomeLatest Newsnamma chikmagalur

ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರ ಹುಚ್ಚಾಟ

Share
Share

ಚಿಕ್ಕಮಗಳೂರು: ಪೋಲಿಸ್ ಇಲಾಖೆಯ ಎಚ್ಚರಿಕೆಯ ಫಲಕದ ಸಮೀಪದಲ್ಲೇ ಪ್ರವಾಸಿಗರು ಧುಮ್ಮಿಕ್ಕುವ ಜಲಪಾತಗಳ ಜಾರುವ ಬಂಡೆ ಮೇಲೆ ಫೋಟೋ ಶೂಟ್,ಎತ್ತರ ಕಲ್ಲುಬಂಡೆಗಳ ಮೇಲೆ ನಿಂತು ಡ್ಯಾನ್ಸ್‌ಮಾಡುವ ವೀಡಿಯೋ ಮಾಡಿಕೊಳ್ಳುವುದೂ ಸೇರಿದಂತೆ ನಿರ್ಭೀತಿಯಿಂದ ಪ್ರವಾಸಿಗರು ಹುಚ್ಚಾಟ ನಡೆಸುತ್ತಿರುವುದು ಮುಂದುವರೆದಿದೆ.

ಫೋಟೋ ಶೂಟ್ ಮಾಡಬೇಡಿ, ಬಂಡೆ ಹತ್ತಬೇಡಿ ಎಂಬ ನಾಮಫಲಕಹಾಕಿರುವ ಜಾಗದಲ್ಲೇ ಬಂಡೆ ಏರುತ್ತಿದ್ದಾರೆ.ಚಾರ್ಮಾಡಿ ಘಾಟಿಯಲ್ಲಿ ಬಣಕಲ್ ಪೊಲೀಸರು ಬೀಟ್ ಇರುತ್ತಾರೆ. ಇಡೀ ದಿನ ಓಡಾಡುತ್ತಿರು ತ್ತಾರೆ. ಆದರೆ, ಕೆಲ ಪ್ರವಾಸಿಗರು ಪೊಲೀಸರ ಕಣ್ತಪ್ಪಿಸಿ ಈ ರೀತಿ ಹುಚ್ಚಾಟ ಮೆರೆಯುತ್ತಿದ್ದಾರೆ.

ವರ್ಷ ಪೂರ್ತಿ ಸುರಿದ ನಿರಂತರ ಮಳೆಯಿಂದ ಚಾರ್ಮಾಡಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಸುಂದರ ತಾಣ. ೨೨ ಕಿ.ಮೀ. ವ್ಯಾಪ್ತಿಯ ರಸ್ತೆ ತಿರುವುದಗಳಿಂದ ಕೂಡಿದ್ದು ರಸ್ತೆಯ ಇಕ್ಕೆಲಗಳಲ್ಲಿ ಒಂದೆಡೆ ಪಾತಾಳ, ಮತ್ತೊಂದೆ ಡೆ ಮುಗಿಲೆತ್ತರದ ಬೆಟ್ಟಗುಡ್ಡಗಳು. ಇಂತಹ ಸುಂದರ ಹಾಗೂ ಅಪಾಯದ ತಾಣದಲ್ಲಿ ಪ್ರವಾಸಿಗರು ಹೇಳೋರು-ಕೇಳೋರಿಲ್ಲದೆ ಹುಚ್ಚಾಟ ಮೆರೆಯುತ್ತಿದ್ದಾರೆ.

ರಸ್ತೆ ಬದಿ ಎಲ್ಲೆಂದರಲ್ಲಿ ವಾಹನಗಳನ್ನ ಪಾರ್ಕ್ ಮಾಡುವ ಪ್ರವಾಸಿಗರು ಹತ್ತಾರು ಅಡಿ ಎತ್ತರ ಕಲ್ಲುಬಂಡೆಗಳ ಮೇಲೆ ನಿಂತು ಡ್ಯಾನ್ಸ್ ಮಾಡುತ್ತಾ ಫೋಟೋ ಕ್ಲಿಕ್ಕಿಸಿಕೊಳ್ಳುವ ಕ್ರೇಜಿಗೆ ಮುಂದಾಗಿದ್ದಾರೆ. ಈ ಕಲ್ಲುಬಂಡೆ ಹಾಗೂ ಗುಡ್ಡಗಳನ್ನು ಏರಿ ಇಳಿಯುವಾಗ ಒಂಚೂರು ಬ್ಯಾಲೆನ್ಸ್ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ.

ಈಗಾಗಲೇ ಇಂತಹ ಅಪಾಯಕಾರಿ ಜಾಗದಿಂದ ಬಿದ್ದು ಕೈ-ಕಾಲು ಮುರಿದುಕೊಂಡು, ತಲೆ ಒಡೆದುಕೊಂಡು ತಿಂಗಳುಗಟ್ಟಲೇ ಹಾಸಿಗೆ ಹಿಡಿದಿರುವವರು ಇದ್ದಾರೆ. ಆದರೆ, ಇಂತಹಾ ಅಪಾಯಕಾರಿ ಸ್ಥಳಗಳಲ್ಲಿ ಪ್ರವಾಸಿಗರ ಮೋಜಿನ ಬೇಜವಾಬ್ದಾರಿ ವರ್ತನೆ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

ಹುಚ್ಚಾಟಮೆರೆಯುವ ಪ್ರವಾಸಿಗರ ವಾಹನಗಳನ್ನು ಸೀಜ್ ಮಾಡಬೇಕು. ಕೇಸ್ ದಾಖಲಿಸಬೇಕು. ಗದರಿಸಿ ಕಳಿಸಿದರೆ ಮತ್ತೆ ಅದೇ ಕೆಲಸ ಮಾಡುತ್ತಾರೆ ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.

Tourists flock to Charmadi Ghat

Share

Leave a comment

Leave a Reply

Your email address will not be published. Required fields are marked *

Don't Miss

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ-ಜಿಲ್ಲಾಧಿಕಾರಿ

ಚಿಕ್ಕಮಗಳೂರು: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಇದೇ ಮಾರ್ಚ್ ೧೮ ರಿಂದ ಪ್ರಾರಂಭವಾಗಲಿದ್ದು, ಪರೀಕ್ಷೆಗಳು ಸುಸೂತ್ರವಾಗಿ ನಡೆಯಲು ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ತಿಳಿಸಿದರು. ಜಿ.ಪಂ.ನ ಅಬ್ದುಲ್...

ಜಿಲ್ಲೆಯಲ್ಲಿ ಗೃಹಬಳಕೆ ಸಿಲಿಂಡರ್‌ಗೆ ಕೊರತೆ ಇಲ್ಲ

ಚಿಕ್ಕಮಗಳೂರು, ಮಾ.೧೩: ಜಿಲ್ಲೆಯಲ್ಲಿ ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳ ಸಮರ್ಪಕ ಸಂಗ್ರಹ ಮತ್ತು ಸರಬರಾಜು ಲಭ್ಯವಿರುವುದನ್ನು ದೃಢಪಡಿಸಿ ಎಂದಿನಂತೆ ಎಲ್‌ಪಿಜಿ ವಿತರಕರು ಗ್ರಾಹಕರ ಮನೆಬಾಗಿಲಿಗೆ ಸರಬರಾಜು ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ...

Related Articles

ವಿದ್ಯುತ್ ಸ್ಪರ್ಶಕ್ಕೆ ಯುವಕನ ಧಾರುಣ ಸಾವು

ಅಜ್ಜಂಪುರ: ವಿದ್ಯುತ್ ಸ್ಪರ್ಶದಿಂದ ಪ್ರವೀಣ್ ಎಂಬ ಯುವಕ ಮೃತಪಟ್ಟಿದ್ದಾನೆ ಸೊಕ್ಕೆ ಪರಮೇಶಣ್ಣ ಅವರ ಮಗ. ಹೆಬ್ಬೂರು...

ಏಕಲವ್ಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ಮನಸೋಇಚ್ಛೆ ಹಲ್ಲೆ

ಮೂಡಿಗೆರೆ:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದಲ್ಲಿರುವ ಏಕಲವ್ಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ...

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ 25ಕ್ಕೂ ಹೆಚ್ಚುಕಡೆ ಬೆಂಕಿ

ಚಿಕ್ಕಮಗಳೂರು: ಬಿಸಿಲ ಬೇಗೆಗೆ ಅಪರೂಪದ ಶೋಲಾ ಹುಲ್ಲುಗಾವಲು  ಹೊತ್ತಿ ಉರಿಯುತ್ತಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ...

3.50 ಕೋಟಿ ರೂ ವೆಚ್ಚದ ವಿವಿಧ ರಸ್ತೆಗಳ ಲೋಕಾರ್ಪಣೆ

ಚಿಕ್ಕಮಗಳೂರು:  ಬಡವರ ಬಗ್ಗೆ ಕಾಳಜಿ ಇಲ್ಲದ ಕೇಂದ್ರ ಸರ್ಕಾರ ಧರ್ಮ ಧರ್ಮಗಳ ಮಧ್ಯೆ ವಿಷಬೀಜ ಬಿತ್ತಿ...