ಚಿಕ್ಕಮಗಳೂರು : ಮೇಯಲು ಬಿಟ್ಟಿದ್ದ ಹಸುವನ್ನು ಹುಲಿಯೊಂದು ಕೊಂದು ಹಾಕಿರುವ ಘಟನೆ ಮೂಡಿಗೆರೆ ತಾಲೂಕಿನ ನಿಡುವಳೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮರ್ಕಲ್ ಗ್ರಾಮದಲ್ಲಿ ನಡೆದಿದೆ.
ಮರ್ಕಲ್ ಗ್ರಾಮದ ನರೇಂದ್ರ ಗೌಡ ತಮ್ಮ ಹಸುವನ್ನು ಅವರದ್ದೇ ತೋಟದಲ್ಲಿ ಮೇಯಲು ಬಿಟ್ಟಿದ್ದಾಗ ಹುಲಿ ದಾಳಿ ನಡೆಸಿದ್ದು ಹಸುವನ್ನು ಸಾಯಿಸಿ ಅದರ ಅರ್ಧ ದೇಹವನ್ನು ತಿಂದು ಹಾಕಿದೆ ಹಸು ಇತ್ತೀಚಿಗಷ್ಟೇ ಕರುವಿಗೆ ಜನ್ಮ ನೀಡಿತ್ತು ಕರುವಿನ ಆಕ್ರಂದನ ನೋಡುಗರ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ ಸ್ಥಳಕ್ಕೆ ಪಶು ವೈದ್ಯಾಧಿಕಾರಿ ಉದಯ್ ಅರಣ್ಯ ಅಧಿಕಾರಿ ಗಿರೀಶ್ ಮೊದಲಾದವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಮರ್ಕಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಲಿ ಚಿರತೆ ಆನೆಗಳ ಹಾವಳಿ ಹೆಚ್ಚಿದ್ದು ರಾತ್ರಿ ವೇಳೆಯಲ್ಲಿ ಜಾನುವಾರುಗಳ ಮೇಲೆ ಎರಗಿ ಭಕ್ಷಿಸುವ ಪ್ರಕರಣಗಳು ಹೆಚ್ಚುತ್ತಿದ್ದು ಜನತೆಯ ಭೀತಿ ಮತ್ತಷ್ಟು ಹೆಚ್ಚ ತೊಡಗಿದೆ.
Leave a comment