ಚಿಕ್ಕಮಗಳೂರು: ಭದ್ರಾ ಹುಲಿ ಸಂರಕ್ಷಿತ ಪ್ರದೇಶದ,ಹೆಬ್ಬೆ ವಲಯದ ಗಂಗೆಗಿರಿ ಸರ್ವೇ ನಂಬರ್ 15 ರ ಶಿರಗುಳ ಮೀಸಲು ಅರಣ್ಯದಲ್ಲಿ ದಿನಾಂಕ 6ನೆ ತಾರೀಕು ಬೆಳಿಗ್ಗೆ ಹುಲಿ ಗಣತಿಯ ಸಿಬ್ಬಂದಿಗಳಿಗೆ ಹುಲಿಯ ಮೃತದೇಹ ಸಿಕ್ಕಿದ್ದು.ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಪುಲ್ಕಿತ್ ಮೀನ ಬೇಟಿ ನೀಡಿ. ಹುಲಿ ಸಂರಕ್ಷಣಾ ಪ್ರಾಧಿಕಾರದ ನಿಮಯಾನುಸಾರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
8 ರಿಂದ 10 ವರ್ಷದ ಗಂಡು ಹುಲಿಯಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.ಹುಲಿಯ ಮುಂಗಲಿನ ಕುತ್ತಿಗೆ ಭಾಗದಲ್ಲಿ ಇನ್ನೊಂದು ಹುಲಿ ಹೊಡೆದಿರುವ ಉಗುರಿನ ಗುರುತುಗಳು ಪತ್ತೆಯಾಗಿವೆ.ಎರಡು ಬಲಿಷ್ಟ ಹುಲಿಗಳು ಕಾದಾಟದಲ್ಲಿ ಈ ಹುಲಿ ಸತ್ತಿದೆ.
ಹುಲಿಯ ಉಗುರುಗಳು ಮತ್ತು ಹಲ್ಲುಗಳು ಹಾಗೆ ಇವೆ.
ಪಶುವೈದ್ಯಾಧಿಕಾರಿ ಸಚಿನ್ ನಾಯಕ್ ಮತ್ತು ಶಿವಕುಮಾರ್ ತಂಡ ಮರಣೋತ್ತರ ಪರೀಕ್ಷೆ ನಡೆಸಿದರು. ಸ್ಥಳದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವರಾತ್ರೀಶ್ವರ ಸ್ವಾಮಿ ,ವಲಯ ಅರಣ್ಯಾಧಿಕಾರಿ ಗೌರವ, ಹುಲಿ ಸಂರಕ್ಷಣ ಪ್ರಾಧಿಕಾರದ ಪ್ರತಿನಿಧಿ ವೀರೇಶ್ ಜಿ, ವೈಲ್ಡ್ ಕೇರ್ ಸಂಸ್ಥೆಯ ಅಧ್ಯಕ್ಷ ಮಧು ಮೂಗುತಿಹಳ್ಳಿ, ಒನ್ ಅರ್ಥ್ ಸಂಸ್ಥೆಯ ಮುಖಂಡ ಭರತ್ ಸಿ ವಿ ,ಇತರೆ ಸ್ಥಳೀಯ ಪ್ರತಿನಿಧಿಗಳು ಗ್ರಾಮಸ್ಥರು ಸ್ಥಳದಲ್ಲಿ ಮರಣೋತ್ತರ ಪಂಚನಾಮೆ ಪ್ರಕ್ರಿಯೆಯಲ್ಲಿ ಸಹಕರಿಸಿದರು .
ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಹುಲಿಯ ಮೃತದೇಹ ಸುಡಲಾಯಿತು.
Tiger census staff discover tiger carcass
Leave a comment