Home namma chikmagalur chikamagalur ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಮೂವರು ಸಾವು
chikamagalurCrime NewsHomeLatest Newsnamma chikmagalur

ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಮೂವರು ಸಾವು

Share
Share

ಚಿಕ್ಕಮಗಳೂರು :ಜಿಲ್ಲೆಯಲ್ಲಿ ನಡೆದ ಮೂರು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಮೂವರು ಸಾವಪ್ಪಿದ್ದಾರೆ.

ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ   ಮಾವಿನಹಳ್ಳ ಗ್ರಾಮದ ಸೆರಿನಾ ಬಾರ್ನ್ ಹೋಂಸ್ಟೇನಲ್ಲಿ  ಚಂದ್ರಮ್ಮ ಕೆಲಸ ಮಾಡಿಕೊಂಡಿದ್ದರು.

ಕೆಂಪನಹಳ್ಳಿ ಯಲ್ಲಿರುವ ಮನೆಯಿಂದಲೆ  ದಿನನಿತ್ಯ ಕೆಲಸಕ್ಕೆ ಹೋಗಿ ಬರುತ್ತಿದ್ದು ದಿ:31 ರ ರಾತ್ರಿ ಹೋಂ ಸ್ಟೇನಲ್ಲಿ ಕೆಲಸ ಮಾಡುವ ಹರೀಶ ನೊಂದಿಗೆ  ಯಮಹಾ ರೇ ಝೆಡ್ ಸ್ಕೂಟಿಯಲ್ಲಿ ಹಿಂದೆ ಕುಳಿತು ಬರುತ್ತಿದ್ದರು.

ಅರಿಸಿನಗುಪ್ಪೆ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗ ಮಲ್ಲೇನಹಳ್ಳಿ ಕಡೆಯಿಂದ ಚಿಕ್ಕಮಗಳೂರು ಕಡೆಗೆ ಬರುತ್ತಿದ್ದ ಮಹೀಂದ್ರಾ ಪಿಕಪ್ ಚಾಲಕನ ಅಜಾಗರೂಕತೆಯಿಂದ ಸ್ಕೂಟಿಗೆ ಅಪ್ಪಳಿಸಿ ನಿಲ್ಲಿಸದೆ ಹೋಗಿದ್ದಾನೆ.  ರಸ್ತೆಯ ಮೇಲೆ ಬಿದ್ದ ಚಂದ್ರಮ್ಮನ ತಲೆಗೆ  ತೀವ್ರ  ಪೆಟ್ಟಾಗಿ ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ.

ಜಿ. ಮಾದಾಪುರ ಮಠದ ಬಳಿ ಅಂಗಡಿಗೆ ಹೋಗಲು ಟಿವಿಎಸ್ ಎಕ್ಸ್ ಎಲ್ ನಲ್ಲಿ  ಗಂಗೇಸರ ಸೇತುವೆ ಮೇಲೆ ಹೋಗುತ್ತಿರುವಾಗ ಟಿವಿಎಸ್ ಸ್ಕಿಡ್ ಆಗಿ ಬಿದ್ದು ರಾಜಯ್ಯ ಎಂಬುವರಿಗೆ ತೀವ್ರ ಗಾಯವಾಗಿತ್ತು.

ಮೊದಲು ಕಡೂರು ಆಸ್ಪತ್ರೆಗೆ ದಾಖಲಿಸಿದ್ದು ನಂತರ ಹಾಸನಕ್ಕೆ ಕರೆದೊಯ್ದು ಆಸ್ಪತ್ರೆಗೆ ಸೇರಿಸಿದ್ದು ಅಲ್ಲಿ ಗಾಯಾಳು ಮೃತಪಟ್ಟಿದ್ದಾರೆ ಎಂದು ಯಗಟಿ  ಪೊಲೀಸರು ತಿಳಿಸಿದ್ದಾರೆ.

ಅಂತರಘಟ್ಟೆ ಜಾತ್ರೆಗೆ ಆಟೋದಲ್ಲಿ ಭದ್ರಾವತಿ ವಾಸಿ ಹನುಮಂತ ರಾವ್, ಪ್ರಮಿಳಾ,ಪಲ್ಲವಿ , ಧನ್ಯ ಮತ್ತು ವರುಣ 9 ಶಿವು ರವರ ಆಟೋದಲ್ಲಿ ಹೋಗುತ್ತಿದ್ದರು.

ಬೀರೂರು ಅಜ್ಜಂಪುರ ಮಧ್ಯದ ದೊಗೇಹಳ್ಳಿ ಬಳಿಎದುರಿಗೆ ಬಂದ ನಾಯಿಯನ್ನು ತಪ್ಪಿಸಲು ಹೋಗಿ  ನಿಯಂತ್ರಣ ತಪ್ಪಿ ಆಟೋ ಪಲ್ಟಿ ಯಾಗಿ ಕಾಲುವೆಯಲ್ಲಿ ಮಗುಚಿ ಬಿದ್ದಿದೆ.

ಹನುಮಂತರಾವ್ ಗೆ ಎದೆಗೆ  ಪ್ರಮಿಳಾಬಾಯಿಗೆ ತಲೆಗೆ ಪಲ್ಲವಿಗೆ ಸೊಂಟಕ್ಕೆ , ಧನ್ಯಳಿಗೆ ಕುತ್ತಿಗೆ, ಕೈಗೆ , ವರುಣಳಿಗೆ ಹೊಟ್ಟೆಗೆ, ಹಾಗೂ ಆಟೋ ಚಾಲಕ ಶಿವುಗೆ ತೀವ್ರ ಪೆಟ್ಟಾಗಿರುತ್ತೆ,

ಕೂಡಲೇ ಎಲ್ಲರನ್ನು ಆಂಬುಲೆನ್ಸ್ ಲ್ಲಿ ತಕ್ಷಣ  ಬೀರೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು  ಶಿವು ಮೃತಪಟ್ಟಿರುವುದಾಗಿ ಬೀರೂರು ಪೊಲೀಸರು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Don't Miss

ಸಂಗೊಳ್ಳಿ ರಾಯಣ್ಣ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ

ಚಿಕ್ಕಮಗಳೂರು:  ಸಂಗೊಳ್ಳಿ ರಾಯಣ್ಣ ನಾಡು ಅಪ್ರತಿಮೆ ಸ್ವಾತಂತ್ರ್ಯ ಹೋರಾಟಗಾರ. ಬ್ರಿಟಿಷರ ಕಪಿಮುಷ್ಠಿಯಿಂದ ನಲುಗುತ್ತಿದ್ಧ ಭಾರತೀಯರಿಗೆ ನ್ಯಾಯ ಒದಗಿಸಲು ಪ್ರಾಣವನ್ನೆ ಅರ್ಪಿಸಿದ ಧೀ ಮಂತ ಮಹಾಪುರುಷ ಎಂದು ಶಾಸಕಿ ನಯನ ಮೋಟಮ್ಮ ಹೇಳಿದರು....

ವಿಬಿ-ಜಿ ರಾಮ್‌ಜೀ ಹೊಸ ಕಾಯ್ದೆ ನೆಲಕಚ್ಚಿಸಲು ಕಾಂಗ್ರೆಸ್ ಕುತಂತ್ರ

ಚಿಕ್ಕಮಗಳೂರು:  ಕೇಂದ್ರ ಸರ್ಕಾರದ ಹೊಸ ಕಾಯ್ದೆ ನೆಲಕಚ್ಚಿಸಲು ಕಾಂಗ್ರೆಸ್ ಪಕ್ಷ ಹ ಲವಾರು ಕುತಂತ್ರ ನಡೆಸಿ ಅಪಪ್ರಚಾರ ಮಾಡುತ್ತಿದೆ. ಕೇಂದ್ರ ಸರ್ಕಾರದ ಸತ್ಯ ದರ್ಶನ ಮಾಡಿಸಲು ರಾಜ್ಯಾ ದ್ಯಂತ ಜನಜಾಗೃತಿ ನಡೆಸಿ...

Related Articles

ಕಾಂಗ್ರೆಸ್ ನಲ್ಲಿ ಸಿ.ಡಿ.ಎ. ಫೈಟ್ – ಕಾಂಗ್ರೆಸ್ ನಲ್ಲಿ ಸಿ.ಡಿ.ಎ. ಫೈಟ್ – ರಾಮಚಂದ್ರ ಬಿಗಿ ಪಟ್ಟು

ಚಿಕ್ಕಮಗಳೂರು: ಹಿರೇಮಗಳೂರು ರಾಮಚಂದ್ರ ಸಿ.ಡಿ.ಎ.ಅಧ್ಯಕ್ಷ ಸ್ಥಾನ ಪಡೆಯಲು ಬಿಗಿ ಪಟ್ಟು ಹಿಡಿದು ಒತ್ತಾಯ ಮಾಡುತ್ತಿದ್ದಾರೆ. ಕಳೆದ...

ಸಾಮಾಜಿಕ ಪರಿವರ್ತನೆಗೆ ಮಾಚಿದೇವರ ಕೊಡುಗೆ ಅಪಾರ

ಚಿಕ್ಕಮಗಳೂರು: ಸಾಮಾಜಿಕ ಪರಿವರ್ತನೆ ಮತ್ತು ಸಾಹಿತ್ಯ ಪರಿವರ್ತನೆಗೆ ಮಡಿವಾಳ ಮಾಚಿದೇವರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ...

ಇತಿಹಾಸ ಸೃಷ್ಠಿಸಿದ ವ್ಯಕ್ತಿಗಳ ಜೀವನ ಚರಿತ್ರೆ ಓದಬೇಕು

ಚಿಕ್ಕಮಗಳೂರು: ನಾಡಪ್ರಭು ಕೆಂಪೇಗೌಡರು ತಮ್ಮ ಬದುಕನ್ನು ಓದಿಸಿಕೊಳ್ಳಲು ಯೋಗ್ಯವಾದ ರೀತಿಯಲ್ಲಿ ಬದುಕಿ ಹೋದವರು ಎಂದು ಆದಿಚುಂಚನಗಿರಿ...

ಅಪ್ಪ, ಅಜ್ಜನ ಕರ್ಮಭೂಮಿ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ

ಚಿಕ್ಕಮಗಳೂರು: ರಾಮನಗರ ನಮ್ಮ ತಂದೆಯ ಕರ್ಮಭೂಮಿ ಮತ್ತು ನಮ್ಮ ತಾತನಿಗೆ ರಾಜಕೀಯ ಮರುಜನ್ಮ ನೀಡಿದ ಪುಣ್ಯಭೂಮಿ,...