Home namma chikmagalur ಎರಡನೇ ದಿನವೂ ದೇವೀರಮ್ಮ ಬೆಟ್ಟಕ್ಕೆ ಸಾವಿರಾರು ಭಕ್ತರ ಭೇಟಿ
namma chikmagalurchikamagalurHomeLatest News

ಎರಡನೇ ದಿನವೂ ದೇವೀರಮ್ಮ ಬೆಟ್ಟಕ್ಕೆ ಸಾವಿರಾರು ಭಕ್ತರ ಭೇಟಿ

Share
Share

ಚಿಕ್ಕಮಗಳೂರು: ಬಿಂಡಿಗ ಮಲ್ಲೇನಹಳ್ಳಿಯ ದೇವೀರಮ್ಮ ದೀಪ ಮತ್ತು ಜಾತ್ರಮಹೋತ್ಸವದ ಎರಡನೇ ದಿನವಾದ ಸೋಮವಾರ ಸಾವಿರಾರು ಭಕ್ತರು ದೇವೀರಮ್ಮ ಬೆಟ್ಟವನ್ನು ಹತ್ತುವ ಮೂಲಕ ದೇವಿಯ ದರ್ಶನ ಪಡೆದು ಪುನೀತರಾದರು. ಈ ವೇಳೆ ಮೂವರು ಭಕ್ತರು ಅಸ್ವಸ್ಥಗೊಂಡಿದ್ದು, ಅವರನ್ನು ಅಗ್ನಿಶಾಮಕ ದಶಳದ ಸಿಬ್ಬಂದಿ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ.

ಭಕ್ತರ ನೂಕುನುಗ್ಗಲನ್ನು ತಪ್ಪಿಸುವ ಸಲುವಾಗಿ ದೇವೀರಮ್ಮ ದೇವಾಲಯ ಅಭಿವೃದ್ಧಿ ಟ್ರಸ್ಟ್ ಅಮ್ಮನ ಅಪ್ಪಣೆ ಮೇರೆಗೆ ಭಕ್ತರಿಗೆ ಎರಡು ದಿವಸ ಬೆಟ್ಟವನ್ನು ಹತ್ತಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಸೋಮವಾರವೂ ಸುಮಾರು ೫೦ ಸಾವಿರ ಮಂದಿ ದೇವಿಯ ದರ್ಶನ ಪಡೆದುಕೊಂಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲುಪಾಲಾಗಿದ್ದರೆ, ಇತ್ತ ಅವರ ಅಭಿಮಾನಿಗಳು ದರ್ಶನ್ ಫೋಟೊ ಹಿಡಿದುಕೊಂಡು ದೇವೀರಮ್ಮ ಬೆಟ್ಟ ಹತ್ತುವ ಮೂಲಕ ಅಭಿಮಾನವನ್ನು ಪ್ರದರ್ಶಿಸಿದ್ದಾರೆ. ದರ್ಶನ ಫೋಟೋ ಹಿಡಿದು ಬೆಟ್ಟ ಹತ್ತುವ ಅನಿವಾರ್ಯತೆ ಇತ್ತೇ ಎಂದು ಕೆಲವರು ಪ್ರಶ್ನಿಸಿದ್ದಾರೆ. ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಒಳ್ಳೆದಾಗಲಿ ಎಂದು ದೇವಿಯ ಬಳಿ ಬೇಡಿಕೊಳ್ಳುವುದು ಸರ್ವೆ ಸಾಮಾನ್ಯ ಆದರೆ ಎರಡನೇ ದಿನವಾದ ಸೋಮವಾರ ದರ್ಶನ ಅಭಿಮಾನಿಗಳು ದರ್ಶನ್ ಪೋಟೊ ಹಿಡಿದು ಬೆಟ್ಟವನ್ನೇರಿರುವುದು ವಿಶೇಷ.

ಅಕ್ಟೋಬರ್ ೨೧ರಂದು ಬೆಳಗ್ಗೆ ೮ ಗಂಟೆಗೆ ದೇವೀರಮ್ಮನ ದೇವಾಲಯದಲ್ಲಿ ದೇವಿಯವರಿಗೆ ಉಡುಗೆ, ಪೂಜೆ ನೆರವೇರಲಿದೆ. ಸಂಜೆ ೬.೩೦ಕ್ಕೆ ಬೆಣ್ಣೆ ಬಟ್ಟೆ ಸುಡುವುದು. ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗವಿದೆ. ಅ. ೨೨ರಂದು ಬೆಳಗ್ಗೆ ೮ರಿಂದ ದೇವೀರಮ್ಮನವರಿಗೆ ಮಹಾಮಂಗಳಾರತಿ ಪೂಜಾ ಕಾರ್ಯಕ್ರಮವಿದೆ. ರಾತ್ರಿ ದೇವಿಯವರ ಸನ್ನಿಧಿಯಲ್ಲಿ ಮಹಾಗಣಪತಿ ಪೂಜೆ, ಪುಣ್ಯಾಹ, ಅಗ್ನಿಕುಂಡ ಪೂಜೆ, ಕಳಸ ಸ್ಥಾಪನೆ, ಕುಂಕುಮಾರ್ಚನೆ ನಡೆಯಲಿದೆ.

ವರ್ಷಕ್ಕೊಮ್ಮೆ ದೀಪಾವಳಿಯಲ್ಲಿ ಮಾತ್ರ ದರ್ಶನ ನೀಡುವ ಇತಿಹಾಸ ಪ್ರಸಿದ್ದ ಬಿಂಡಿಗ ದೇವಿರಮ್ಮ ಬೆಟ್ಟದ ಮೇಲೆ ಮೂವರು ಭಕ್ತರು ಅಸ್ವಸ್ಥರಾದ ಘಟನೆ ಸೋಮವಾರ ನಡೆದಿದೆ. ದೇವಿರಮ್ಮ ಬೆಟ್ಟ ಹತ್ತಲು ಹೋದ ಯುವತಿಯೊಬ್ಬಳು ಅಸ್ವಸ್ಥಗೊಂಡಿದ್ದು, ಈ ವೇಳೆ ಅಗ್ನಿಶಾಮಕ ಸಿಬ್ಬಂದಿಗಳು ಯುವತಿಯ ರಕ್ಷಣೆಗೆ ಧಾವಿಸಿ ಕಡಿದಾದ ಮಾರ್ಗದ ಮೂಲಕ ಯುವತಿಯನ್ನು ಹೊತ್ತು ತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ.
೬ ಸಾವಿರ ಅಡಿ ಎತ್ತರದ ಬೆಟ್ಟದ ಮೇಲೆ ಅಸ್ವಸ್ಥಗೊಂಡಿದ್ದ ಭಕ್ತರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಬೆಟ್ಟದಿಂದ ಕೆಳಗೆ ಸಾಗಿಸಿದ್ದಾರೆ. ಓರ್ವ ವ್ಯಕ್ತಿಯ ಕಾಲು ಮುರಿತವಾಗಿದೆ ಎನ್ನಲಾಗುತ್ತಿದೆ. ಮತ್ತಿಬ್ಬರು ಮಹಿಳೆಯರು ಅಸ್ವಸ್ಥ ಗೊಂಡಿದ್ದಾರೆ. ಸ್ಥಳದಲ್ಲೇ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಚಿಕ್ಕಮಗಳೂರು ನಗರದ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ.

ಚಿಕ್ಕಮಗಳೂರು ನಗರ ಸೇರಿದಂತೆ ಸುತ್ತಮುತ್ತಲಿನ ಪಟ್ಟಣ ಹಾಗೂ ಊರಿನ ಜನರು ಬಿಂಡಿಗ ದೇವೀರಮ್ಮ ದೇವಾಲಯದಲ್ಲಿ ದೀಪೋತ್ಸವ ಆಗುವವರೆಗೆ ದೀಪಾವಳಿ ಹಬ್ಬವನ್ನು ಆರಂಭಿಸುವುದಿಲ್ಲ. ಹೌದು. ನರಕನ ಚರ್ತದಶಿಯ ದಿನ ಸಂಜೆ ಬಿಂಡಿಗ ದೇವಿರಮಮ್ಮ ದೇವಾಲಯದಲ್ಲಿ ದೀಪೋತ್ಸವವಾಗುತ್ತದೆ. ಇಲ್ಲಿನ ದೀಪೋತ್ಸವ ಚಿಕ್ಕಮಗಳೂರು ಸೇರಿದಂತೆ ಅಕ್ಕಪಕ್ಕದ ಎಲ್ಲ ಗ್ರಾಮಗಳಿಗೂ ಕಾಣಿಸುತ್ತದೆ. ಈ ದೀಪವನ್ನು ನೋಡಿದ ಭಕ್ತರು ತಮ್ಮ ಮನೆಯಲ್ಲಿಯೂ ದೇವಿಗೆ ದೀಪ ಬೆಳಗಿ ತಮ್ಮ ಮನೆಯಲ್ಲಿ ಹಬ್ಬವನ್ನು ಆರಂಭಿಸುತ್ತಾರೆ. ದೇವೀರಮ್ಮನ ದೀಪೋತ್ಸವ ನೋಡುವವರೆಗೆ ಈ ದೇವಿಗೆ ನಡೆದುಕೊಳ್ಳುವವರು ಪಟಾಕಿಯನ್ನೂ ಸಿಡಿಸದಿರುವುದು ಇನ್ನೊಂದು ವಿಶೇಷ.

ದೂರದ ಮೈಸೂರು ಅರಸರಿಗೂ ಹಾಗೂ ಬಿಂಡಿಗ ಶ್ರೀದೇವೀರಮ್ಮ ದೇವಿಗೂ ನಂಟಿದೆ ಎನ್ನುವುದು ವಿಶೇಷ. ಮೈಸೂರು ಅರಸರು ಬಿಂಡಿಗ ದೇವೀರಮ್ಮ ದೇವಿಗೆ ನಡೆದುಕೊಳ್ಳಲು ಆರಂಭಿಸಿದ ಸನ್ನಿವೇಶವೇ ವಿಶೇಷ. ರಾಜರ ಕಾಲದಲ್ಲಿ ದೇವೀರಮ್ಮ ದೇವಿಗೆ ನಡೆದುಕೊಳ್ಳುವ ಕೆಲ ಭಕ್ತರು ಯಾವುದೋ ಪ್ರಕರಣದಲ್ಲಿ ಸಿಲುಕಿ ಮೈಸೂರು ಜೈಲಿನಲ್ಲಿರುತ್ತದೆ. ಹೀಗಿರುವಾಗ ಎಂದಿನAತೆ ನರಕ ಚರ್ತುದಶಿಯಂದು ಅವರಿಗೆ ಜೈಲು ಸಿಬ್ಬಂದಿ ಊಟ ನೀಡುತ್ತಾರೆ. ಆದರೆ ಆ ಕೈದಿಗಳು ಇಂದು ದೇವೀರಮ್ಮನ ದೀಪೋತ್ಸವವಿದೆ. ನಾವು ದೀಪೋತ್ಸವದ ಬಳಿಕವೇ ಊಟ ಮಾಡುತ್ತೇವೆ ಎಂದು ಹೇಳುತ್ತಾರೆ.

ವಿಷಯ ತಿಳಿದ ಮೈಸೂರು ರಾಜರು ಬಿಂಡಿಗ ದೇವೀರಮ್ಮ ಬಗ್ಗೆ ಮಾಹಿತಿ ಪಡೆದು ಮರು ವರ್ಷದಿಂದಲೇ ದೇವಿರಮ್ಮ ತಾಯಿಗೆ ಜಾತ್ರೋತ್ಸವದಂದು ಬಾಗೀನ ಕಳುಹಿಸಲು ಆರಂಭಿಸಿದ್ದರು. ಹೀಗೆ ಆರಂಭಗೊAಡ ಸಂಪ್ರದಾಯ ಕೆಲ ವರ್ಷದಿಂದ ಸ್ಥಗಿತಗೊಂಡಿತ್ತು. ಆದರೆ ಯದುವೀರ್ ಓಡೆಯರ್ ಬಿಂಡಿಗ ದೇವೀರಮ್ಮ ತಾಯಿಯ ದರ್ಶನ ಪಡೆದಾಗ ಅಲ್ಲಿದ್ದವರು ಹಿಂದಿದ್ದ ಸಂಪ್ರದಾಯದ ಬಗ್ಗೆ ತಿಳಿಸುತ್ತಾರೆ. ಹೀಗಾಗಿ ಎರಡು ವರ್ಷದಿಂದ ಮತ್ತೆ ಮೈಸೂರು ಅರಸರಿಂದ ದೇವಿಗೆ ಬಾಗೀನ ಕಳುಹಿಸುವ ಸಂಪ್ರದಾಯ ಆರಂಭಗೊAಡಿದೆ.

ನರಕಚರ್ತುದಶಿ ದಿನದಂದು ದೇವೀರಮ್ಮ ಬೆಟ್ಟದ ಮೇಲಿರುವ ಮೂಲ ದೇವಸ್ಥಾನದಲ್ಲಿ ಭಕ್ತರಿಗೆ ದರ್ಶನ ನೀಡುವ ತಾಯಿ ಇನ್ನು ಒಂದು ವರ್ಷಗಳ ಕಾಲ ಭಕ್ತರಿಗೆ ಮೂಲ ದೇವಸ್ಥಾನದಲ್ಲಿ ದರ್ಶನ ನೀಡುವುದಿಲ್ಲ. ಬದಲಿಗೆ ಬೆಟ್ಟದ ಕೆಳಭಾಗದಲ್ಲಿರುವ ದೇವಾಲಯದಲ್ಲಿ ವರ್ಷಪೂರ್ತಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ.

ಮಂಗಳವಾರ ಗಾಳಿಯ ಮೂಲಕ ದೇವೀರಮ್ಮ ಬೆಟ್ಟದ ಕೆಳಗಿರುವ ದೇವಾಲಯಕ್ಕೆ ಪ್ರವೇಶ ಮಾಡಲಿದ್ದಾಳೆ. ದೇವಾಲಯದ ಬಾಗಿಲಿಗೆ ಪರದೆ ಹಾಕಿರುತ್ತಾರೆ. ಆ ಪರದೆಯನ್ನು ಸರಿಸಿಕೊಂಡು ತಾಯಿ ದೇವಾಲಯಕ್ಕೆ ಮಂಗಳವಾರ ಬೆಳಗ್ಗೆ ಒಂಭತ್ತು ಗಂಟೆ ಒಳಗೆ ಗಾಳಿ ರೂಪದಲ್ಲಿ ಪ್ರವೇಶ ಮಾಡಲಿದ್ದಾಳೆ. ಈ ದೃಷ್ಯ ಕಣ್ತುಂಬಿಕೊಳ್ಳಲು ನೂರಾರು ಭಕ್ತರು ಭಾಗಿಯಾಗಲಿದ್ದಾರೆ.

Thousands of devotees visit Deviramma Hill for the second day

Share

Leave a comment

Leave a Reply

Your email address will not be published. Required fields are marked *

Don't Miss

ಅಮಾನವೀಯ ಜಾನುವಾರು ಸಾಗಾಟ – ಮೂವರ ಬಂಧನ

ಎನ್.ಆರ್. ಪುರ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಹಾಗೂ ಅಮಾನವೀಯ ಜಾನುವಾರು ಸಾಗಾಟ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಿ, ವಾಹನ ಮತ್ತು ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ...

ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಧ್ಯಮಗಳು ಮಾಡಬೇಕು

ಚಿಕ್ಕಮಗಳೂರು: ಬಡವರ ಕಷ್ಟಗಳನ್ನು, ಸಮಸ್ಯೆಗಳನ್ನು ಸಮಾಜದ ಮತ್ತು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸಲಹೆ ಮಾಡಿದರು. ಹೊನ್ನ ಬಿತ್ತೇವು ಹೊಲಕೆಲ್ಲ ಮತ್ತು ನ್ಯೂಸ್ ಕಿಂಗ್...

Related Articles

ನೀರುಗಂಟಿ ಆತ್ಮಹತ್ಯೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲು

ಚಿಕ್ಕಮಗಳೂರು: ಅಣೂರು ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ರಮೇಶ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ,...

ಹೇಮಾವತಿ ನದಿಯ ಅಕ್ರಮವಾಗಿ ಮರಳು ಸಾಗಣೆ ಪ್ರಕರಣ ಪತ್ತೆ

ಮೂಡಿಗೆರೆ: ಜೀವನದಿ ಹೇಮಾವತಿಯ ಒಡಲಿಗೆ ಕನ್ನ ಹಾಕಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಜಾಲದ ಮೇಲೆ ಗೋಣಿಬೀಡು...

ಕಾಫಿನಾಡಿನಲ್ಲಿ ರಂಜಾನ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆ

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಪವಿತ್ರ ರಂಜಾನ್ ಹಬ್ಬದ ಸಂಭ್ರಮವು ಸಡಗರ ಹಾಗೂ ಸೌಹಾರ್ದತೆಯಿಂದ ಕಳೆಗಟ್ಟಿತ್ತು. ಕೆಂಪನಹಳ್ಳಿಯ...

ಕಾಫಿ ತೋಟದಲ್ಲಿ ಮರಗಸಿ – ಕಾರ್ಮಿಕನ ಸಾವು

ಚಿಕ್ಕಮಗಳೂರು : ಕಾಫಿ ತೋಟದ ಮಾಲೀಕರು ಮತ್ತು ಮೇಸ್ತ್ರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ಕಾರ್ಮಿಕನೊಬ್ಬ ಬಲಿಯಾದ ದಾರುಣ...