ಶೃಂಗೇರಿ: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಭೀಕರ ಯುದ್ಧವು ಇದೀಗ ಕಾಫಿನಾಡಿನ ವ್ಯಾಪಾರಸ್ಥರಿಗೂ ಬಿಸಿ ಮುಟ್ಟಿಸಿದೆ. ಯುದ್ಧದ ಹಿನ್ನೆಲೆಯಲ್ಲಿ ವಿದೇಶಗಳಿಂದ ಆಮದಾಗುವ ಡ್ರೈಫೂಟ್ಸ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದ್ದು, ಮಾರುಕಟ್ಟೆಯಲ್ಲಿ ಇವುಗಳ ಬೆಲೆ ಗಗನಕ್ಕೇರಿದೆ.
ಈ ಬೆಲೆ ಏರಿಕೆಯ ನಡುವೆಯೇ ಶೃಂಗೇರಿಯಲ್ಲಿ ವಿಚಿತ್ರ ಕಳ್ಳತನವೊಂದು ಸಂಭವಿಸಿದೆ. ಶೃಂಗೇರಿ ಶಾರದಾಂಬೆ ದೇವಾಲಯದ ಪಾರ್ಕಿಂಗ್ ಆವರಣದಲ್ಲಿರುವ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳನೋರ್ವ ಕೇವಲ ನಗದಷ್ಟೇ ಅಲ್ಲದೆ ಬೆಲೆಬಾಳುವ ಡೈಪೂಟ್‌ಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಸುಮಾರು 80 ಸಾವಿರ ರೂಪಾಯಿ ನಗದು ಹಣದ ಜೊತೆಗೆ, 10 ಕೆಜಿಗಿಂತಲೂ ಅಧಿಕ ತೂಕದ ಬಾದಾಮಿ, ಪಿಸ್ತಾ ಹಾಗೂ ಗೋಡಂಬಿಯನ್ನು ಕಳ್ಳತನ ಮಾಡಲಾಗಿದೆ.
ವ್ಯಾಪಾರಿಗಳು ದಿನವಿಡೀ ಕಷ್ಟಪಟ್ಟು ದುಡಿದ ಹಣವನ್ನು ಸುರಕ್ಷತೆಯ ದೃಷ್ಟಿಯಿಂದ ಅಂಗಡಿಯಲ್ಲೇ ಇಟ್ಟು ತೆರಳುತ್ತಿದ್ದರು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಖದೀಮರೇ ಈ ಕೃತ್ಯ ಎಸಗಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ.
ದೇವರಿಗೆ ಮುಡಿಪಾಗಿಟ್ಟಿದ್ದ ಹಣವನ್ನೂ ಬಿಡದ ಕಳ್ಳರು, ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿರುವ ಡೈಫೂಟ್ಸ್ ಗಳನ್ನು ಹೊತ್ತೊಯ್ದಿರುವುದು ಆಶ್ಚರ್ಯ ಮೂಡಿಸಿದೆ. ಈ ಕುರಿತು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಮಾರುಕಟ್ಟೆಯಲ್ಲಿ ಡೈ ಪೂಟ್ಸ್ ಕೊರತೆ ಮತ್ತು ಬೆಲೆ ಏರಿಕೆ ಇರುವುದೇ ಕಳ್ಳರು ಈ ವಸ್ತುವನ್ನು ಆಯ್ದುಕೊಳ್ಳಲು ಕಾರಣವಿರಬಹುದು ಎಂದು ಹೇಳಲಾಗುತ್ತಿದೆ.
Thief steals valuable dry goods
Leave a comment