Home namma chikmagalur set dosas:ಕಾಂಗ್ರೆಸ್ ನಲ್ಲಿರುವ ಸೆಟ್ ದೋಸೆಗಳು !
namma chikmagalurHome

set dosas:ಕಾಂಗ್ರೆಸ್ ನಲ್ಲಿರುವ ಸೆಟ್ ದೋಸೆಗಳು !

Share
Share

ಚಿಕ್ಕಮಗಳೂರು:  ಜಿಲ್ಲಾ ಕಾಂಗ್ರೆಸ್ ನಲ್ಲಿ ಸೆಟ್ ದೋಸೆಗಳೆಂದು ಮಾಜಿ ಜಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ವಿಜಯ್ ಕುಮಾರ್ ರಾಷ್ಟ್ರೀಯ ಕಾರ್ಯದರ್ಶಿ ಸಂದೀಪ್ ಮತ್ತು ಗ್ಯಾರಂಟಿ ಅಧ್ಯಕ್ಷ ಮತ್ತು ಶಾಶ್ವತ ಪ್ರದಾನ ಕಾರ್ಯದರ್ಶಿ ಶಿವಾನಂದ ಸ್ವಾಮಿರವರನ್ನು ಸೆಟ್ ದೋಸೆ ಗಳು ಎಂದು ಅವರ ವಿರೋಧಿ ಗಳು ಗೇಲಿ ಮಾಡುತ್ತಾರೆ.

ಕಳೆದ ಹದಿನೈದು ವರ್ಷಗಳಿಂದ ಕಾಂಗ್ರೆಸ್ ನಲ್ಲಿ ಒಂದಲ್ಲೂಂದು ಸ್ಥಾನ ಪಡೆದಿರುವ ಇವರುಗಳಿಂದ ಕಾಂಗ್ರೆಸ್ ಗೆ ಲಾಭವಾಗಿಲ್ಲ. ವಿಜಯ್ ಕುಮಾರ್ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಸೋತವರು.ಸಂದೀಪ್ ಒಮ್ಮೆ ನಗರಸಭೆಯ ಸದಸ್ಯರಾದರೆ ಶಿವಾನಂದ ಸ್ವಾಮಿ ಮೂರು ವರ್ಷ ಡಿಸಿಸಿ ಬ್ಯಾಂಕ್ ನಿರ್ದೇಶಕ ಪ್ರಸ್ತುತ ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷರಾಗಿ ಸರ್ಕಾರದಿಂದ ನೇಮಕವಾಗಿದ್ದಾರೆ.

ಸೆಟ್ ದೋಸೆ ಎಂದು ಏಕೆ ಕರೆಯುತ್ತಿರಿ ಎಂದು ಕೇಳಿದರೆ ಇವರು ಯಾವುದೇ ತೀರ್ಮಾನ ಕೈಗೊಳ್ಳುವ ನಿರ್ಧಾರ ಮತ್ತು ಹೊಂದಾಣಿಕೆ ಇರುತ್ತದೆ ಎನ್ನುತ್ತಾರೆ. ಬಿ.ಎಲ್.ಶಂಕರ್ ಕೃಪೆಯಿಂದ ಎರಡು ಬಾರಿ ಜಿಲ್ಲಾ ಅಧ್ಯಕ್ಷರಾದ ವಿಜಯ್ ಕುಮಾರ್ ಕಾಲದಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಭರ್ಜರಿಯಾಗಿ ಬೆಳೆಯಿತು ಒಮ್ಮೆ ತರೀಕೆರೆ ಮತ್ತೊಮ್ಮೆ ಶೃಂಗೇರಿಯಲ್ಲಿ ಶಾಸಕರು ಗೆದ್ದಿದ್ದು ಬಿಟ್ಟರೆ ಜಿ,ಪಂ ನಲ್ಲಿ ನೆಲಕಚ್ಚಿತು ಎನ್ನುತ್ತಾರೆ .

ಇನ್ನೂ ಸಂದೀಪ್ ಎರಡನೇ ಬಾರಿ ಕಾಂಗ್ರೆಸ್ ನ ರಾಷ್ಟ್ರೀಯ ಕಾರ್ಯದರ್ಶಿ ಶಂಕರ್ ಬಲಗೈ ಎನ್ನುವಾಗಲೇ ರಾಷ್ಟ್ರೀಯ ಕಾರ್ಯದರ್ಶಿ ಆಗಿದ್ದು ವಿಶೇಷ. ಇವರು ಒಮ್ಮೆ ನಗರಸಭೆಯ ಸದಸ್ಯರಾಗಿದ್ದು ಬಿಟ್ಟರೆ ಜಿಲ್ಲೆಯಲ್ಲಿ ಹಿಡಿತ ಸಾಧಿಸಲು ಸಾಧ್ಯವಾಗಿಲ್ಲ .ಮಹಾರಾಷ್ಟ್ರ ದ ಉಸ್ತುವಾರಿ ಕಳೆದ ಬಾರಿ ಕಿಚುಡಿ ಸರ್ಕಾರ ರಚನೆಯಾದರು ಹೆಚ್ಚು ದಿನ ಉಳಿಯಲಿಲ್ಲ ಈ ಬಾರಿ ಕಾಂಗ್ರೆಸ್ ನೆಲಕಚ್ಚಿ ಹೋಯಿತು ಎಂದು ಗೇಲಿ ಮಾಡುತ್ತಾರೆ.

ಇನ್ನೂ ಶಿವಾನಂದ ಸ್ವಾಮಿ ಕತೆ ಇದಕ್ಕಿಂತ ಭಿನ್ನವಾಗಿಲ್ಲ. ಹತ್ತಾರು ವರ್ಷಗಳಿಂದ ಕಾಂಗ್ರೆಸ್ ಜಿಲ್ಲಾ ಪ್ರದಾನ ಕಾರ್ಯದರ್ಶಿ ಹಲವು ಸಂಘಗಳಿಗೆ ಪ್ರ,ಕಾ ಆಗಿದ್ದಾರೆ.ಮೃದು ಮಾತಲ್ಲೇ ಕೊಯ್ಯುವ ಬುದ್ದಿ ಇದೆ ಎಂದು ಕಾಂಗ್ರೆಸ್ ನಲ್ಲಿ ಇರುವ ಲಿಂಗಯಿತ ಮುಖಂಡರ ದೂರು ನಾವು ಕಷ್ಟಪಟ್ಟು ಯಾರಾದರೂ ಬಂದು ಸೇರಿಕೊಂಡರೆ ಎಂಬ ಭಯದ ಧೋರಣೆ ಇಟ್ಟು ಕೊಂಡಿರುವ ಇವರಿಗೆ ಯಾವುದು ಶಾಶ್ವತವಲ್ಲ ಎಂಬ ಬುದ್ದಿ ಬರಲಿ ಎನ್ನುತ್ತಾರೆ.

ಹೀಗಾಗಿ ಮೂರು ಜನರ ತೀರ್ಮಾನವನ್ನು ನೋಡಿ ಸೆಟ್ ದೋಸೆ ಎಂಬುದು ಮಾತ್ರ ನಿಜ ಎನ್ನಲೇ?

The set dosas in Congress!

Share

Leave a comment

Leave a Reply

Your email address will not be published. Required fields are marked *

Don't Miss

ಹಣ ದೋಚಿದ್ದ ಇಬ್ಬರು ಅಂತರ್ ಜಿಲ್ಲಾ ದರೋಡೆಕೋರರ ಬಂಧನ

ಚಿಕ್ಕಮಗಳೂರು : ಮನುಷ್ಯತ್ವಕ್ಕೆ ಮಸಿ ಬಳಿಯುವಂತೆ ವೃದ್ಧ ರೈತರೊಬ್ಬರ ಮೇಲೆ ಹಲ್ಲೆ ನಡೆಸಿ ಹಣ ದೋಚಿದ್ದ ಇಬ್ಬರು ಅಂತರ್ ಜಿಲ್ಲಾ ದರೋಡೆಕೋರರನ್ನು ಚಿಕ್ಕಮಗಳೂರು ನಗರ ಪೊಲೀಸರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕುರಿಚಿಕ್ಕನಹಳ್ಳಿಯ ನಿಂಗೇಗೌಡ...

ಹೋಂ ಸ್ಟೇ’ನಲ್ಲಿ ಯುವತಿ ಸಾವು-ಮಾಲೀಕ ವಿರುದ್ಧ ಪ್ರಕರಣ ದಾಖಲು

ಚಿಕ್ಕಮಗಳೂರು : ತಾಲೂಕಿನ ಹಾಂದಿ ಗ್ರಾಮದ ‘ಹಿಪ್ಲಾ ಹೋಂ ಸ್ಟೇ’ನಲ್ಲಿ ನಡೆದಿದ್ದ ಯುವತಿಯ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾಲ್ಕು ತಿಂಗಳ ಬಳಿಕ ಮಾಲೀಕ ಸುಧಾಕರ್ ವಿರುದ್ಧ ಅಲ್ಲೂರು ಪೊಲೀಸ್ ಠಾಣೆಯಲ್ಲಿ...

Related Articles

ಇಂದಿನಿಂದ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ

ಚಿಕ್ಕಮಗಳೂರು : ಶನಿವಾರದಿಂದ ರಾಜ್ಯಾದ್ಯಂತ 2025 26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗುತ್ತಿದ್ದು ಇದಕ್ಕೆ...

ಸಾವಿನ ಹೆಣ ಇಟ್ಟುಕೊಂಡು ಕೀಳು ಮಟ್ಟದ ರಾಜಕೀಯ

ಚಿಕ್ಕಮಗಳೂರು: ಇತ್ತೀಚೆಗೆ ನಡೆದ ಆನೆ ದಾಳಿಯಿಂದಾದ ಸಾವು ಮತ್ತು ಅದರ ಸುತ್ತ ನಡೆಯುತ್ತಿರುವ ಬೆಳವಣಿಗೆಗಳ ಕುರಿತು...

ವೃದ್ಧ ಮಹಿಳೆಯೊಬ್ಬರ ಚಿನ್ನದ ಸರ ಕಳವು

ಚಿಕ್ಕಮಗಳೂರು: ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಯುವಿಹಾರಕ್ಕೆ ತೆರಳಿದ್ದ ವೃದ್ಧ ಮಹಿಳೆಯೊಬ್ಬರನ್ನು ಅಡ್ಡಗಟ್ಟಿ, ಹಲ್ಲೆ ನಡೆಸಿ...

ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಚಿನ್ನಾಭರಣ ಕಳ್ಳತನ

ಚಿಕ್ಕಮಗಳೂರು: ಕೆ.ಎಂ. ರಸ್ತೆಯ ಕತ್ರಿಮಾರಮ್ಮ ದೇವಸ್ಥಾನದ ಸಮೀಪವಿರುವ ಬಸ್ ನಿಲ್ದಾಣದಿಂದ ಸಖರಾಯಪಟ್ಟಣಕ್ಕೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ...