Home namma chikmagalur chikamagalur ಮಹಾನೀಯರ ತ್ಯಾಗ ಯುವಜನತೆಗೆ ಸ್ಪೂರ್ತಿ
chikamagalurHomeLatest Newsnamma chikmagalur

ಮಹಾನೀಯರ ತ್ಯಾಗ ಯುವಜನತೆಗೆ ಸ್ಪೂರ್ತಿ

Share
??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Share

ಚಿಕ್ಕಮಗಳೂರು:  ವಿವೇಕಾನಂದರು ಮತ್ತು ಸುಭಾಷ್‌ಚಂದ್ರ ಬೋಸ್‌ರವರ ತ್ಯಾಗ, ಬ ಲಿದಾನದ ಪರಿಣಾಮ ಇಂದಿನ ಯುವಜನತೆ ಸನ್ನಡತೆ ದಾರಿಯಲ್ಲಿ ಸಾಗುತ್ತಿದೆ. ಅವರ ಆದರ್ಶಗಳು ಸ ಮಾಜದ ಒಳಿತಿಗೆ ಸ್ಪೂರ್ತಿ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನು ಮಂತಪ್ಪ ಹೇಳಿದರು.

ನಗರದ ಡಾ|| ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸೋಮವಾರ ಭೂಮಿಕಾ ಟಿವಿ ವಾರ್ಷಿಕೋತ್ಸವ ಪ್ರ ಯುಕ್ತ ಸ್ವಾಮಿ ವಿವೇಕಾನಂದ ಮತ್ತು ನೇತಾಜಿ ಸುಭಾಷ್‌ಚಂದ್ರ ಬೋಸ್ ಜಯಂತ್ಯೋತ್ಸವ ಜಯಂತಿ ಹಾ ಗೂ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ರಾಷ್ಟ್ರದ ಹಿತಚಿಂತನೆಗಾಗಿ ತಮ್ಮ ಸರ್ವಸ್ವ ಜೀವನವನ್ನು ಮುಡಿಪಿಟ್ಟ ವಿವೇಕಾನಂದ, ಬೋಸ್ ಅವರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿ ದೇಶದ ಉಜ್ವಲ ಭವಿಷ್ಯಕ್ಕೆ ತಮ್ಮದೇ ಶೈಲಿಯಲ್ಲಿ ಹೋರಾಡಿದ ವರು. ಇವರ ತ್ಯಾಗ, ಬಲಿದಾನವು ಇಂದಿನ ಯುವಜನತೆಗೆ ಆದರ್ಶವಾಗಿದ್ದು ಈ ಮಹಾನೀಯರ ಸಿದ್ದಾಂ ತವು ಪ್ರೇರಣೆಯಾಗಬೇಕು ಎಂದರು.

ದೇಶದ ನಾಲ್ಕನೇ ಅಂಗ ಪತ್ರಿಕಾರಂಗ. ಈ ಕ್ಷೇತ್ರವು ಜನಸಾಮಾನ್ಯರಿಗೆ ಸ್ಪಂದಿಸಲು ಪ್ರಾಮಾಣಿಕ, ನಿಷ್ಟೆ ಯಿಂದ ಕರ್ತವ್ಯ ನಿರ್ವಹಿಸಬೇಕು. ಆದರೆ ಕೆಲವು ಮಾಧ್ಯಮಗಳು ಒಂದು ಪಕ್ಷ, ಧರ್ಮ ಹಾಗೂ ಸಮುದಾ ಯಕ್ಕೆ ಸೀಮಿತವಾಗಿವೆ. ಈ ಹೊರತಾಗಿ ಜನರ ಕಷ್ಟ-ಸುಖಗಳಿಗೆ ಸಹಕರಿಸಲು ನೈಜ ಸುದ್ದಿ ಪ್ರಸಾರಗೊಳಿಸಿ ನ್ಯಾಯ ಒದಗಿಸುವುದು ಪತ್ರಿಕಾಧರ್ಮ ಎಂದು ಹೇಳಿದರು.

ಪತ್ರಿಕಾ ವೃತ್ತಿಯಲ್ಲಿ ಕಾರ್ಯನಿರ್ವಹಿಸುವವರು ಜನರ ಸಮಸ್ಯೆಗೆ ಗಮನ ಸೆಳೆಯಬೇಕು, ಸಾಮಾನ್ಯರ ಕುಂದು-ಕೊರತೆಗಳನ್ನು ನ್ಯಾಯಬದ್ಧವಾಗಿ ಪರಿಹರಿಸಲು ಪ್ರಾಮಾಣಿಕ ಪ್ರಯತ್ನವಿರಬೇಕು. ಸಮಾಜವನ್ನು ತಿದ್ದುವ ಪತ್ರಕರ್ತರು ಆಮಿಷಕ್ಕೆ ಒಳಗಾಗದೇ ನ್ಯಾಯ ಸಮಂಜಸವಾಗಿ ಪರಿಶೀಲಿಸಿ ನೊಂದವರ ಪಾಲಿಗೆ ನ್ಯಾಯ ಒದಗಿಸಿ ಇತ್ಯರ್ಥಗೊಳಿಸಬೇಕು ಎಂದರು.

ಜಿಲ್ಲಾಸ್ಪತ್ರೆ ಸರ್ಜನ್ ಡಾ|| ಚಂದ್ರಶೇಖರ್ ಮಾತನಾಡಿ ವಿವೇಕಾನಂದರು ಮತ್ತು ಸುಭಾಶ್‌ಚಂದ್ರ ಅವ ರು ಅಗರ್ಭ ಶ್ರೀಮಂತಿಕೆ ಕುಟುಂಬದಲ್ಲಿ ಜನಿಸಿದರೂ ರಾಷ್ಟ್ರದ ಏಕತೆಗಾಗಿ ಶ್ರೀಮಂತಿ ಜೀವನ ತ್ಯಜಿಸಿ ಸ್ವಾ ತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ ಶ್ರೇಷ್ಟಮಾನ್ಯರು ಎಂದು ಬಣ್ಣಿಸಿದರು.

ಹದಿನೆಂಟನೇ ಶತಮಾನದಲ್ಲಿ ವಿವೇಕಾನಂದರು ಅಮೇರಿಕದ ಸರ್ವಸಮ್ಮೇಳನ ತೆರಳೀ ಭಾರತೀಯ ಧರ್ಮಪರಂಪರೆ ಇಡೀ ಜಗತ್ತಿಗೆ ಪರಿಚಯಿಸಿದರು. ಸುಭಾಶ್‌ಚಂದ್ರ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮದೇ ಸೈನಿಕ ತಂಡವನ್ನು ಕಟ್ಟಿಕೊಂಡು ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ ಅಪರೂಪದ ನಾಯಕ ಎಂದು ತಿಳಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ|| ಸೀಮಾ ಮಾತನಾಡಿ ಆರೋಗ್ಯ ತಪಾಸಣೆ ಪ್ರತಿ ವ್ಯಕ್ತಿಗೂ ಅತ್ಯವ ಶ್ಯಕ. ಕನಿಷ್ಟ ಆರು ತಿಂಗಳಿಗೊಮ್ಮೆ ಮಧುಮೇಹ ತಪಾಸಣೆ, ಮೂರು ತಿಂಗಳಿಮ್ಮೆ ಆರೋಗ್ಯವಂತ ಮಾನವ ರಕ್ತದಾನ ಮಾಡಿದರೆ, ಶರೀರವು ಹಲವು ರೋಗರುಜಿನಿಗಳನ್ನು ತಡೆಗಟ್ಟಿ ರಕ್ತದಾನಿಗಳು ಆರೋಗ್ಯ ಜೀವನ ಡೆಸಬಹುದು ಎಂದು ಕಿವಿಮಾತು ಹೇಳಿದರು.

ಬ್ರಹ್ಮಕುಮಾರೀಸ್ ಜಿಲ್ಲಾ ಸಂಚಾಲಕಿ ಎನ್.ಕೆ.ಭಾಗ್ಯಲಕ್ಷ್ಮೀ ಮಾತನಾಡಿ ಮಾನವ ಜೀವನ ಒಂದಿಲ್ಲೊ ಂದು ಒತ್ತಡದಿಂದ ಬಳಲಿ ಆರೋಗ್ಯವನ್ನು ಹದಗೆಡಿಸಿಕೊಂಡಿದ್ದಾನೆ. ಉತ್ತಮ ಆರೋಗ್ಯ ಮತ್ತು ಒತ್ತಡ ನಿವಾರಣೆಗಾಗಿ ವ್ಯಾಯಮ ಜೊತೆಗೆ ಆಧಾತ್ಮಕ ಜ್ಞಾನ ಬೆಳೆಸಿಕೊಳ್ಳಬೇಕು. ಇದು ಮನುಷ್ಯನ ಮಾನಸಿಕ ಖಿನ್ನ ತೆಯಿಂದ ಹೊರತರಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಭೂಮಿಕಾಟಿವಿ ಸಂಸ್ಥಾಪಕ ಅನಿಲ್‌ಆನಂದ್ ರಾಷ್ಟ್ರದ ಮಹಾನೀಯರ ಜಯಂತಿಯಂದು ಸಾರ್ವಜನಿಕರಿಗೆ ಅನುಕೂಲವಾಗಲು ಉಚಿತ ಆರೋಗ್ಯ ತಪಾಸಣೆ, ನೇತ್ರದಾನ, ದೇಹದಾನ ನೋಂದಣಿ, ರಕ್ತದಾನ ಶಿಬಿರ ಹಾಗೂ ಉಚಿತ ಕನ್ನಡ ಮತ್ತು ಔಷಧಿ ವಿತರಣೆ ನಡೆಸಿ ಸಾಮಾಜಿಕ ಕಾರ್ಯಕ್ರಮವನ್ನು ಕಳೆದ ನಾಲ್ಕು ವರ್ಷಗಳಿಂದ ನಡೆಸಲಾಗುತ್ತಿದೆ ಎಂದರು.

ಇದೇ ವೇಳೆ ವಿವಿಧ ತಪಾಸಣೆಯಲ್ಲಿ ೨೫೦ಕ್ಕೂ ಮಂದಿ ಭಾಗವಹಿಸಿದ್ದರು. ಬಳಿಕ ಅವಶ್ಯವುಳ್ಳ ದೃಷ್ಟಿ ದೋಷದವರಿಗೆ ಕನ್ನಡದ ವ್ಯವಸ್ಥೆ ಕಲ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಅಧಿಕಾರಿ ಹರೀ ಶ್‌ಬಾಬು, ಪ್ರೆಸ್ ಕ್ಲಬ್ ಅಧ್ಯಕ್ಷ ಚಂದ್ರೇಗೌಡ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್.ಮೋಹನ್, ಮಹಾಲಕ್ಷ್ಮೀ ಮಂಜಪ್ಪ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮಂಜುನಾಥ್, ದಿ ಆಸ್ಪತ್ರೆ ಮುಖ್ಯಸ್ಥ ರಮೇಶ್, ಮುಖ ಂಡರಾದ ಕುಮಾರ್‌ಶೆಟ್ಟಿ, ಹುಣಸೇಮಕ್ಕಿ ಲಕ್ಷ್ಮಣ್, ಪೂರ್ಣಿಮಾ, ಅನ್ವರ್, ಪೂರ್ಣಿಮಾ, ಕಬ್ಬಿಕೆರೆ ಮೋಹ ನ್‌ಕುಮಾರ್, ಅಂಬುಲೆನ್ಸ್ ಪುನೀತ್, ಸತೀಶ್ ಉಪಸ್ಥಿತರಿದ್ದರು.

The sacrifices of great men are an inspiration to the youth.

Share

Leave a comment

Leave a Reply

Your email address will not be published. Required fields are marked *

Don't Miss

ಹುಲಿ ಗಣತಿಯ ಸಿಬ್ಬಂದಿಗಳಿಗೆ ಹುಲಿಯ ಮೃತದೇಹ ಪತ್ತೆ

ಚಿಕ್ಕಮಗಳೂರು:  ಭದ್ರಾ ಹುಲಿ ಸಂರಕ್ಷಿತ ಪ್ರದೇಶದ,ಹೆಬ್ಬೆ ವಲಯದ ಗಂಗೆಗಿರಿ ಸರ್ವೇ ನಂಬರ್ 15 ರ ಶಿರಗುಳ ಮೀಸಲು ಅರಣ್ಯದಲ್ಲಿ ದಿನಾಂಕ 6ನೆ ತಾರೀಕು ಬೆಳಿಗ್ಗೆ ಹುಲಿ ಗಣತಿಯ ಸಿಬ್ಬಂದಿಗಳಿಗೆ ಹುಲಿಯ ಮೃತದೇಹ...

ಕಾಫಿ ಕಳ್ಳತನ : ಆರೋಪಿಗಳ ಸೆರೆ- 2 ಕಾರು ವಶ

ಮೂಡಿಗೆರೆ: ತಾಲೂಕಿನ ಗೋಣಿಬೀಡು ಸಮೀಪ ರಂಗಸ್ವಾಮಿ ಅವರ ಕಾಫಿ ತೋಟದಲ್ಲಿ ಕಾಫಿ ಕಳ್ಳತನ ಮಾಡಿದ್ದ ೬ ಮಂದಿ ಆರೋಪಿಗಳನ್ನು ಗೋಣಿಬೀಡು ಪೊಲೀಸರು ಬಂಧಿಸಿ, ಸುಮಾರು ೩.೫೦ ಲಕ್ಷ ರೂ ಮೌಲ್ಯದ ಕಾಫಿ...

Related Articles

ವಾಯುಭಾರ ಕುಸಿತದ ಪರಿಣಾಮ ಜಿಲ್ಲೆಯಲ್ಲಿ ಸಾಧಾರಣ ಮಳೆ ಸಾಧ್ಯತೆ

ಚಿಕ್ಕಮಗಳೂರು: ಕಳೆದ ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಮೋಡಕವಿದ ವಾತಾವರಣವಿದ್ದು, ಬಂಗಾಳ ಉಪಸಾಗರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ...

ಕಾಫಿನಾಡಿನ ಗಿರಿಭಾಗದಲ್ಲಿ ದಟ್ಟ ಮಂಜು

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸೂರ್ಯನ ದರ್ಶನವೇ ಇಲ್ಲದಂತಾಗಿದ್ದು, ಥಂಡಿ ವಾತಾವರಣ ಉಂಟಾಗಿದ್ದು,...

ಜಿಎಸ್‌ಬಿ ಯಿಂದ ಸಂಕ್ರಾಂತಿ ಸಂಭ್ರಮ

ಚಿಕ್ಕಮಗಳೂರು: ಸಂಕ್ರಾಂತಿ ಹಿನ್ನೆಲೆಯಲ್ಲಿ ಗೌಡಸಾರಸ್ವತ ಬ್ರಾಹ್ಮಣ ಸಮಾಜದಿಂದ ನಡೆಯುವ ಕೇಳ್ ಮೇಳ್ ಸಾಂಸ್ಕೃತಿಕ ಕಾರ್ಯಕ್ರಮ ನಗರದಲ್ಲಿ...

ಗಾಳಿಪಟ ಹಾರಾಟಕ್ಕೆ ಮನಸೋತ ಜನ

ಚಿಕ್ಕಮಗಳೂರು: ಆಕಾಶದಲ್ಲಿ ಹಾರುತ್ತಿದ್ದ ಹುಲಿ, ಜಿಂಕೆ, ಆನೆ, ಸಿಂಹ, ಚಿಟ್ಟೆಗಳು, ಪಕ್ಷಿಗಳು, ಗಿಡಮರಗಳು ಸೇರಿದಂತೆ ವಿವಿಧ...