Home namma chikmagalur chikamagalur ಮಕ್ಕಳಿಗೆ ವಿದ್ಯಾದಾನ ಶಿಕ್ಷಕ ವೃತ್ತಿ ಪವಿತ್ರವಾದದು
chikamagalurHomeLatest Newsnamma chikmagalur

ಮಕ್ಕಳಿಗೆ ವಿದ್ಯಾದಾನ ಶಿಕ್ಷಕ ವೃತ್ತಿ ಪವಿತ್ರವಾದದು

Share
Share

ಚಿಕ್ಕಮಗಳೂರು: ಸಾವಿರಾರು ಗ್ರಾಮೀಣ ಮಕ್ಕಳಿಗೆ ವಿದ್ಯಾದಾನ ಮಾಡುವ ಶಿಕ್ಷಕರ ವೃತ್ತಿ ಶ್ರೇಷ್ಟವಾದದು. ಈ ಸವಿನೆನಪನ್ನು ಮರುಸೃಷ್ಟಿಸುವ ಕೆಲಸದಲ್ಲಿ ಹಳೇ ವಿದ್ಯಾರ್ಥಿಗಳ ಕಾರ್ಯ ನಿಜಕ್ಕೂ ಸಾರ್ಥಕತೆ ತಂದಿದೆ ಎಂದು ನಿವೃತ್ತ ಶಿಕ್ಷಕ ಬಿ.ಸಿ.ಮಲ್ಲಿಕಾರ್ಜುನಸ್ವಾಮಿ ಹೇಳಿದರು.

ತಾಲ್ಲೂಕಿನ ಮೈಲಿಮನೆ ಗ್ರಾಮದಲ್ಲಿ ಶನಿವಾರ ಹಳೇ ವಿದ್ಯಾರ್ಥಿಗಳಿಂದ ಆಯೋಜಿಸಿದ್ಧ ಗುರುವಂ ದನ ಹಾಗೂ ೧೯೯೭-೯೮ನೇ ಸಾಲಿನ ಪ್ರೌಢಶಾಲಾ ಹಳೇ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

ಅಂದಿನ ೯೦ರ ಇಸವಿಯಲ್ಲಿ ಮಕ್ಕಳಿಗೆ ಶಿಸ್ತು, ಶ್ರದ್ದೆ ಕಲಿಸಲು ಹಲವಾರು ಶಿಕ್ಷಕರು ಶಾಲಾಮಕ್ಕಳನ್ನು ಸ್ವಂತ ಮಕ್ಕಳಂತೆ ಬುದ್ದಿ ಕಲಿಸಿದ್ದಾರೆ. ಹಳೇ ಗಾಧೆಯಂತೆ ಬೈದು ಬುದ್ದಿಹೇಳುವವರು ಒಳ್ಳೆಯದು ಬಯಸಿ ದರೆ, ನಗುತ್ತಲೇ ಹೇಳುವವರು ಕೆಡುಕನ್ನು ಬಯಸುತ್ತಾರೆ. ಅಂದಿನ ಮಕ್ಕಳು ಪೆಟ್ಟು ತಿಂದಿದ್ದಕ್ಕೆ ಇಂದು ರಾಷ್ಟ್ರ ದ ಉತ್ತಮ ಸತ್ರ್ಪಜೆಗಳಾಗಿದ್ದಾರೆ ಎಂದರು.

ಎಲ್ಲಾ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ನಿವೃತ್ತಗೊಂಡರೂ ನೆನಪಿಸಿಕೊಂಡು ಗುರುವಂದನೆ ಸಲ್ಲಿಸಿ ರುವುದು ಆನಂದದ ಕಣ್ಣೀರು ಚಿಮ್ಮಿದೆ. ಹಳೇ ವಿದ್ಯಾರ್ಥಿಗಳ ಮರೆಯಲಾಗದ ಈ ಕ್ಷಣ ಎಲ್ಲವನ್ನು ಮೀರಿಸಿ ದೆ. ಬಾಲ್ಯದ ಹುಡುಕರನ್ನು ಇಂದು ದೊಡ್ಡವರಾಗಿ ನಮ್ಮ ಮುಂದಿರುವ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಯಶ ಸ್ಸು ಸಾಧಿಸಿರುವುದು ಹೆಮ್ಮೆ ತಂದಿದೆ ಎಂದು ಹೇಳಿದರು.

ನಿವೃತ್ತ ಶಿಕ್ಷಕಿ ಎಲ್.ಎನ್.ಲೀಲಾವತಿ ಮಾತನಾಡಿ ಹಳೇ ವಿದ್ಯಾರ್ಥಿಗಳ ಬಾಲ್ಯದ ಸವಿನೆನಪು ತುಂಬಾ ನೇ ಪ್ರೀತಿ ತಂದಿದೆ. ಶಾಲೆಗಳಿಗೆ ಗುರು ಆಗಮಿಸುತ್ತಿದ್ದಂತೆ ಓಡಿಹೋಗಿ ಶಾಲಾ ಕೊಠಡಿಯಲ್ಲಿ ಕುಳಿತುಕೊ ಳ್ಳುವುದು. ಹೋಂವರ್ಕ್ ಕೆಲವೊಮ್ಮೆ ಮಾಡದಿದ್ದರೂ ತಾವು ದಂಡಿಸುತ್ತಿರಲಿಲ್ಲ. ಆ ಗ್ರಾಮೀಣ ಮಕ್ಕಳ ಮು ಗ್ದ ಮನಸ್ಸು ಒಲವು ಹೃದಯವನ್ನು ತಟ್ಟಿದೆ ಎಂದರು.

ಅಂತಿಮ ಪರೀಕ್ಷೆಗಳಲ್ಲಿ ಕೆಲವೊಮ್ಮೆ ವಿದ್ಯಾರ್ಥಿಗಳು ಇತರೆ ವಿಷಯಗಳಲ್ಲಿ ಅಂಕ ಕಡಿಮೆಗೊಂಡರೂ ಕನ್ನಡದಲ್ಲಿ ಮಾತ್ರ ಅಧಿಕವಿರುತ್ತಿತ್ತು. ೯೦ರ ಇಸವಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಹೆಚ್ಚಿನ ಪ್ರಮಾಣದಲ್ಲಿ ಇರಲಿಲ್ಲ. ಕೆಲವು ಮಕ್ಕಳು ಸೀಮೆಎಣ್ಣೆ ದೀಪದಲ್ಲೇ ವ್ಯಾಸಂಗ ಮಾಡಿದ್ದಾರೆ. ಇವೆಲ್ಲವು ಮುಂ ದಿನ ಮಕ್ಕಳಿಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.

ನಿವೃತ್ತ ಶಿಕ್ಷಕ ಸಿ.ಚಂದ್ರಶೇಖರಯ್ಯ ಮಾತನಾಡಿ ಶಾಲೆಯಲ್ಲಿ ತುಂಟಾಟ, ಕ್ರೀಡಾ ಚಟುವಟಿಕೆಗಳಲ್ಲಿ ಪ್ರ ಶಸ್ತಿ ಗಳಿಸಿರುವುದು, ಶಾಲಾವರಣದಲ್ಲಿ ಶಿಸ್ತಿನ ವಾತಾವರಣವು ಸದಾ ಚಿರಸ್ಥಾಯಿ. ಈ ಎಲ್ಲಾ ನೆನಪುಗಳನ ನ್ನು ಮತ್ತೊಮ್ಮೆ ಶಾಲೆಗೆ ಕರೆಸಿ ಗೌರವ ಸಲ್ಲಿಸಿರುವ ಹಳೇ ವಿದ್ಯಾರ್ಥಿಗಳ ಮನಸ್ಸು ಪ್ರೀತಿದಾಯಕವಾಗಿದೆ ಎಂದು ತಿಳಿಸಿದರು.

ಹಳೇ ವಿದ್ಯಾರ್ಥಿಗಳು ಮಾತನಾಡಿ ಅಂದಿನ ಅನೇಕ ಶಾಲಾ ಶಿಕ್ಷಕರು ಬಹಳಷ್ಟು ಶಿಸ್ತಿನಿಂದ ಕೂಡಿದ್ದ ರೂ. ಆ ಕಾಲದ ಶಿಸ್ತೇ ಇಂದು ಬುದ್ದಿವಂತರಾಗಲು ಸಾಧ್ಯವಾಗಿದೆ. ವಿಶೇಷವಾಗಿ ಕನ್ನಡವನ್ನು ಸ್ಪಷ್ಟವಾಗಿ ಉಚ್ಚರಿಸಲು ಕನ್ನಡ ಶಿಕ್ಷಕಿಯ ಕೊಡುಗೆ ಅಪಾರವಿದೆ. ಅವರ ಬೋಧನೆಯೇ ನಮ್ಮಗೆಲ್ಲ ಸ್ಪೂರ್ತಿ ತಂದಿದೆ ಎಂದು ಸಂತೋಷ ಹಂಚಿಕೊಂಡರು.

ಇದೇ ವೇಳೆ ನಿವೃತ್ತ ಶಿಕ್ಷಕರಾದ ಎಂ.ಎಸ್.ಶಿವಪ್ಪ, ಬಿ.ಸಿ.ಮಲ್ಲಿಕಾರ್ಜನ್, ಎಲ್.ಎನ್.ಲೀಲಾವತಿ, ಅಂ ಜುಮಾನ್ ಬಾನು, ಸಿ.ಚಂದ್ರಶೇಖರಯ್ಯ, ಜಾವೀದ್ ಅವರಿಗೆ ಹಳೇ ವಿದ್ಯಾರ್ಥಿಗಳು ನೆನಪಿನ ಕಾಣಿಕೆ, ಹ ಣ್ಣು ಹಂಪಲು ನೀಡುವ ಮೂಲಕ ಗೌರವ ಸಮರ್ಪಿಸಿದರು. ಬಳಿಕ ಹಳೇ ವಿದ್ಯಾರ್ಥಿಗಳಿಂದ ಊಟದ ವ್ಯವಸ್ಥೆ ಮಾಡಲಾ ಯಿತು.

ಕಾರ್ಯಕ್ರಮದಲ್ಲಿ ಶಾಲಾ ಕಟ್ಟಡ ದಾನಿ ಹೆಚ್.ಆರ್.ಗುರುನಾಥೇಗೌಡ, ಜಿಲ್ಲಾ ಉಸ್ತುವರಿ ಸಚಿವ ಆಪ್ತ ಸಹಾಯಕ ಕೆ.ಬಿ.ಮೊಗಯ್ಯ, ಎ.ಎಲ್.ಟಿ.ಎಂ. ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಎಂ.ಬಿ.ಚಂದ್ರೇಗೌಡ, ಕಾಲೇಜು ಅಭೀವೃದ್ದಿ ಸದಸ್ಯರಾದ ಪೂರ್ಣೇಶ್, ಹಳೇ ವಿದ್ಯಾರ್ಥಿ ಅಬ್ದುಲ್ ಕರೀಂ, ಸುನೀಲ್‌ಕುಮಾರ್, ಮುಳ್ಳೇಶ್, ಪ್ರತಿಮಾ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಜಯಚಂದ್ರ, ಉಪಸ್ಥಿತರಿ ದ್ದರು. ಹಳೇ ವಿದ್ಯಾರ್ಥಿ ಗಳಾದ ಡೇವಿಡ್ ಸ್ವಾಗತಿಸಿದರು. ಮಹಮ್ಮದ್ ಖತೀಬ್ ವಂದಿಸಿದರು. ಡಾ|| ಕೆ.ಎಂ. ಮಂಜುನಾಥ ನಿರೂಪಿಸಿದರು. ಎಂ.ಎಸ್.ಪುಷ್ಪ ಸಂಗಡಿಗರು ಪ್ರಾರ್ಥಿಸಿದರು.

The profession of teaching is sacred educating children.

Share

Leave a comment

Leave a Reply

Your email address will not be published. Required fields are marked *

Don't Miss

ಅಮಾನವೀಯ ಜಾನುವಾರು ಸಾಗಾಟ – ಮೂವರ ಬಂಧನ

ಎನ್.ಆರ್. ಪುರ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಹಾಗೂ ಅಮಾನವೀಯ ಜಾನುವಾರು ಸಾಗಾಟ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಿ, ವಾಹನ ಮತ್ತು ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ...

ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಧ್ಯಮಗಳು ಮಾಡಬೇಕು

ಚಿಕ್ಕಮಗಳೂರು: ಬಡವರ ಕಷ್ಟಗಳನ್ನು, ಸಮಸ್ಯೆಗಳನ್ನು ಸಮಾಜದ ಮತ್ತು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸಲಹೆ ಮಾಡಿದರು. ಹೊನ್ನ ಬಿತ್ತೇವು ಹೊಲಕೆಲ್ಲ ಮತ್ತು ನ್ಯೂಸ್ ಕಿಂಗ್...

Related Articles

ನೀರುಗಂಟಿ ಆತ್ಮಹತ್ಯೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲು

ಚಿಕ್ಕಮಗಳೂರು: ಅಣೂರು ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ರಮೇಶ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ,...

ಹೇಮಾವತಿ ನದಿಯ ಅಕ್ರಮವಾಗಿ ಮರಳು ಸಾಗಣೆ ಪ್ರಕರಣ ಪತ್ತೆ

ಮೂಡಿಗೆರೆ: ಜೀವನದಿ ಹೇಮಾವತಿಯ ಒಡಲಿಗೆ ಕನ್ನ ಹಾಕಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಜಾಲದ ಮೇಲೆ ಗೋಣಿಬೀಡು...

ಕಾಫಿನಾಡಿನಲ್ಲಿ ರಂಜಾನ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆ

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಪವಿತ್ರ ರಂಜಾನ್ ಹಬ್ಬದ ಸಂಭ್ರಮವು ಸಡಗರ ಹಾಗೂ ಸೌಹಾರ್ದತೆಯಿಂದ ಕಳೆಗಟ್ಟಿತ್ತು. ಕೆಂಪನಹಳ್ಳಿಯ...

ಕಾಫಿ ತೋಟದಲ್ಲಿ ಮರಗಸಿ – ಕಾರ್ಮಿಕನ ಸಾವು

ಚಿಕ್ಕಮಗಳೂರು : ಕಾಫಿ ತೋಟದ ಮಾಲೀಕರು ಮತ್ತು ಮೇಸ್ತ್ರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ಕಾರ್ಮಿಕನೊಬ್ಬ ಬಲಿಯಾದ ದಾರುಣ...