ಚಿಕ್ಕಮಗಳೂರು: ಅರಣ್ಯ ಸಚಿವರಿಗೆ ಮಲ್ನಾಡು ಭಾಗಕ್ಕೂ ಹಾಗೂ ಬಯಲು ಸೀಮೆಗೂ ಇರೋ ವ್ಯತ್ಯಾಸ ಗೊತ್ತಿಲ್ಲ. ನಿರಂತರವಾಗಿ ಈ ಭಾಗದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿವೆ ಇದಕ್ಕೆ ಶಾಶ್ವತವಾಗಿ ಪರಿಹಾರ ಒದಗಿಸಬೇಕೆಂದು ನಿಖಿಲ್ ಕುಮಾರಸ್ವಾಮಿ ಅವರು ಒತ್ತಾಯಿಸಿದರು.
ಇನ್ನು ಪ್ರತಿಭಟನೆಯಲ್ಲಿ ಪಾಲ್ಗೊಂಡು ಅರಣ್ಯ ಸಚಿವ ಈಶ್ವರ್ ಖಂಡ್ರೆ ವಿರುದ್ಧ ನಿಖಿಲ್ ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದರು.
ಜಿಲ್ಲೆಯಲ್ಲಿ ಕಾಡಾನೆ ದಾಳಿಯಿಂದ ಮಹಿಳೆ ಸಾವು ಖಂಡಿಸಿ ಬಾಳೆಹೊನ್ನೂರು ಉಪ ವಿಭಾಗ ವಲಯ ಅರಣ್ಯಾಧಿಕಾರಿಗಳ ಕಚೇರಿ ಬಳಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಪಾಲ್ಗೊಂಡರು
ಕೂಡಲೇ ಅರಣ್ಯ ಸಚಿವರು ಸ್ಥಳಕ್ಕಾಗಮಿಸಿ ಪರಿಶೀಲನೆ ಮಾಡಬೇಕು ಬೇಕೆಂದು ಒತ್ತಾಯಿಸಿದರು.ನಿರಂತರವಾಗಿ ಈ ಭಾಗದ ರೈತರು ಆನೆದಾಳಿಯಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕೂಡಲೇ ಕಾಡನೆಯನ್ನ ಹಿಡಿದು ಆನೆ ಶಿಬಿರಕ್ಕೆ ಬಿಡಬೇಕು ಎಂದು ಆಗ್ರಹಿಸಿದರು.
ಒಂದು ಕಡೆ ಮೃತಪಟ್ಟ ಕುಟುಂಬಗಳಿಗೆ ಸರ್ಕಾರ ಪರಿಹಾರ ಘೋಷಿಸಲು ಒಂದು ಭಾಗ
ಮೃತಪಟ್ಟ ಕುಟುಂಬ ಯಾರು ಕೂಡ ನೀವು ಕೊಡುವಂತ ಪರಿಹಾರವನ್ನು ನಂಬಿಕೊಂಡು ಜೀವನ ನಡೆಸುತ್ತಿಲ್ಲ. ಈ ಕೂಡಲೇ ಅರಣ್ಯ ಸಚಿವರು ಸ್ಥಳಕ್ಕೆ ಆಗಮಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಇಲ್ಲಿನ ಅರಣ್ಯ ಅಧಿಕಾರಿಗಳು ಹಾಗೂ ಸರ್ವ ಪಕ್ಷದ ಮುಖಂಡರ ಜೊತೆ ಸಭೆ ನಡೆಸಬೇಕು ಎಂದು ಹೇಳಿದರು.
ಈ ಭಾಗದಲ್ಲಿ ಕಾಡನೆ ಸಮಸ್ಯೆಗಗಳಿಂದ ಶಾಶ್ವತವಾಗಿ ಪರಿಹಾರ ಘೋಷಿಸಬೇಕೆಂದು. ಈ ಹೋರಾಟವನ್ನು ದೊಡ್ಡ ಮಟ್ಟದಲ್ಲಿ ನಡೆಸುತ್ತವೆ. ಇದನ್ನ ವಿಧಾನಮಂಡಲದಲ್ಲೂ ಸರ್ಕಾರದ ಗಮನ ಸೆಳೆಯುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಏಳುವರೆ ಕೋಟಿ ಕನ್ನಡಿಗರನ್ನ
ಕೈ ಬಿಟ್ಟಿದೆ. ಇವತ್ತು ಒಬ್ಬರು ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನೊಬ್ಬರು ಡಿಸಿಎಂ, ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ. ಮತ್ತೆ ಡಿಸಿಎಂ ಕುರ್ಚಿ ಖಾಲಿ ಅದ್ರೆ ಅಧ್ಯಕ್ಷರು ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು. ಕುರ್ಚಿ ಉಳಿಸಿಕೊಳ್ಳುವ ಜಂಜಾಟದಲ್ಲಿ ರಾಜ್ಯದ ಜನ ದೇಶಕ್ಕೆ ಹೋಗಿದ್ದಾರೆ ಎಂದು ಕಿಡಿಕಾರಿದರು.
ಇದಕ್ಕೂ ಮುನ್ನ ಇತ್ತೀಚೆಗೆ ನಿಧನರಾಗಿದ್ದ ಪಕ್ಷದ ಹಿರಿಯ ಮುಖಂಡರಾದ ಹೆಚ್.ಟಿ. ರಾಜೇಂದ್ರ ಅವರ ನಿವಾಸಕ್ಕೆ ತೆರಳಿ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ರಂಜನ್ ಅಜಿತ್ ಕುಮಾರ್, ರಾಜ್ಯ ಉಪಾಧ್ಯಕ್ಷರಾದ ಸುಧಾಕರ್ ಶೆಟ್ಟಿ , ಮುಖಂಡರಾದ ವಿನಯ್ ಕಣಿವೆ, ಕೊಪ್ಪ, ಎನ್.ಆರ್. ಪುರ ಕ್ಷೇತ್ರದ ಮುಖಂಡರುಗಳು ಜೊತೆಯಲ್ಲಿದ್ದರು.
The Forest Minister does not know the difference between the mountains and the plains.
Leave a comment