ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ನಗರ ಸೇರಿದಂತೆ ಕೆಲ ಗ್ರಾಮೀಣ ಪ್ರದೇಶದಲ್ಲಿ ಶನಿವಾರ ಸಾಮಾನ್ಯ ಮಳೆಯಾಗಿದೆ.
ಮಧ್ಯಾಹ್ನ ೧೨.೩೦ಕ್ಕೆ ಆರಂಭಗೊಂಡ ಮಳೆ ಸುಮಾರು ಅರ್ಧಗಂಟೆಗಳ ಕಾಲ ತುಂತುರು ಮಳೆಗಿಂತ ಸ್ವಲ್ಪ ಜೋರಾಗಿ ಸುರಿದಿದೆ.
ಇದರಿಂದಾಗಿ ಇಷ್ಟು ದಿನಗಳ ಕಾಲ ಬಿರು ಬಿಸಿಲಿನಿಂದ ಕಾದ ಕಾವಲಿಯಂತಾಗಿದ್ದ ನಗರ ಇದೀಗ ಸ್ವಲ್ಪ ತಣ್ಣಗಾಗಿದೆ.
ಇದೀಗ ಸುರಿದ ಮಳೆಯಿಂದಾಗಿ ಕಾಫಿ ಬೆಳೆಗಾರರಲ್ಲಿ ಮಂದಹಾಸ ಮೂಡಿದೆ. ಕಾಫಿ ಹೂವು ಬಿಡುವ ಸಮಯವಾಗಿರುವುದರಿಂದ ಬೆಳೆಗಾರರು ಸ್ಪಿಂಕ್ಲರ್ ಮೂಲಕ ತಮ್ಮ ತೋಟಗಳಿಗೆ ನೀರನ್ನು ಹಾಯಿಸುತ್ತಿದ್ದರು.
ಇದೀಗ ಮಳೆ ಆರಂಭವಾಗಿರುವುದರಿAದ ನೀರು ಹಾಯಿಸುವುದು ತಪ್ಪಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಆದರೆ ಇದೀಗ ಉತ್ತಮ ಮಳೆಯಾಗದ ಇಷ್ಟಕ್ಕೇ ಮಳೆ ನಿಂತಿz್ದೆÃ ಆದಲ್ಲಿ ಉಷ್ಣಾಂಶ ಇನ್ನಷ್ಟು ಹೆಚ್ಚುವ ಆತಂಕವೂ ಕಾಫಿನಾಡಿನ ಜನರನ್ನು ಕಾಡುತ್ತಿದೆ.
The drizzle was like a guardrail from the sun.
Leave a comment