Home namma chikmagalur ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಎಂಬ ನಾಟಕ…!
namma chikmagalurchikamagalurHomeLatest NewsPolitical News

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಎಂಬ ನಾಟಕ…!

Share
Share

ಚಿಕ್ಕಮಗಳೂರು: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಲು ತುದಿಗಾಲಿನಲ್ಲಿ ನಿಂತಿದ್ದವರಿಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾಗಲು ಮಾಜಿ ವಿಧಾನ ಪರಿಷತ್ ಸದಸ್ಯರಾದ ಗಾಯಿತ್ರಿ ಶಾಂತೇಗೌಡ,ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ಮತ್ತು ಹಾಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದ ಸ್ವಾಮಿ, ಕಾಂಗ್ರೆಸ್ ಜಿಲ್ಲಾ ವಕ್ತಾರ ರವೀಶ್ ಕ್ಯಾತನಬೀಡು ಮತ್ತು ವಕೀಲರು ಮತ್ತು ವಕ್ತಾರ ಸುಧೀರ್ ಕುಮಾರ್ ಮರೋಳಿ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ರೇಖಾ ಹುಲಿಯಪ್ಪಗೌಡ ಮತ್ತು ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ಹಾಗು ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್.ಅನಂತ್ ಹೀಗೆ ಪಟ್ಟಿಯೇ ಇದೆ.

ಜಿಲ್ಲಾ ಕಾಂಗ್ರೆಸ್ ಹಾಲಿ ಅಧ್ಯಕ್ಷರಾದ ಅಂಶಮಂತ್ ಕೂಡ ಕಾಂಗ್ರೆಸ್ ಭವನ ಉದ್ಘಾಟನೆಯವರೆಗೆ ಮುಂದುವರೆಯ ಬೇಕೆಂಬ ಆಸೆ ಇದೆ. ವಿಧಾನ ಪರಿಷತ್ ಸ್ಥಾನ ನನಗೆ ಮತ್ತೆ ದೊರೆಯುತ್ತದೆ ಎಂದು ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದ ಗಾಯತ್ರಿ ಸುಮ್ಮನಿದ್ದರೆ ಸರಿಯಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಗಲು ಹಟಕ್ಕೆ ಬಿದ್ದಿದಾರೆ ಹೀಗಾಗಿ ಬೇರೆ ಯಾರು ಲಾಭಿ ಮಾಡಿದರೂ ಕಷ್ಟ. ಜಿಲ್ಲೆಯ ಬಹುತೇಕ ಶಾಸಕರುಗಳು ಗಾಯಿತ್ರಿಯವರ ಬೆಂಬಲಿಸುವುದು ಖಚಿತ.ಬಂದ ವೀಕ್ಷಕರು ಷರಾ ಬರೆದು ಹೋಗುವುದು ಗ್ಯಾರಂಟಿ.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗ್ರೀನ್ ಸಿಗ್ನಲ್‌ ಕೊಡುವುದು ಖಚಿತ. ಗಾಯತ್ರಿಶಾಂತೇಗೌಡರ ಹಿಡಿತಕ್ಕೆ ಅಧ್ಯಕ್ಷ ಸ್ಥಾನ ಸಿಕ್ಕರೆ ನಮ್ಮ ಕತೆ ಏನು ನಮ್ಮ ಬೇಳೆ ಬೇಯುವುದಿಲ್ಲ ಎಂದು ಬಿ.ಎಲ್.ಶಂಕರ್ ಮೂಲಕ ಜಿಲ್ಲಾ ಕಾಂಗ್ರೆಸ್ ನ ಹಲವರು ಲಾಭಿ ನಡೆಸುವುದರ ಜೊತೆಗೆ ಡಿ.ಕೆ.ಶಿವಕುಮಾರ್ ಮೂಲಕ ಒತ್ತಡ ಹಾಕಬಹುದು. ಆದರೂ ಗಾಯತ್ರಿ ಪ್ರಬಲ ಆಕಾಂಕ್ಷಿ ಎನ್ನುವುದನ್ನು ಅವರ ವಿರೋಧಿ ಗಳು ಕೂಡ ಒಪ್ಪುತ್ತಾರೆ.

ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ಕಳೆದ ಹತ್ತು ವರ್ಷಗಳಿಂದ ಹಾಲಿ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿಯಾಗಿರುವ ಎಂ.ಸಿ.ಶಿವಾನಂದಸ್ವಾಮಿ ಜಿಲ್ಲಾ ಅಧ್ಯಕ್ಷರಾಗಲು ತೀವ್ರ ಪ್ರಯತ್ನ ನಡೆಸಿದ್ದಾರೆ.ಹಗಲು ರಾತ್ರಿ ಕಾಂಗ್ರೆಸ್ ಗಾಗಿ ದುಡಿದಿದ್ದು ಇನ್ಯಾರೋ ಬಂದರೆ ಸರಿಯಲ್ಲ ಎಂದು ಹಲವು ಮುಖಂಡರ ಮನೆ ಬಾಗಿಲು ತಟ್ಟುವುದರ ಜೊತೆಗೆ ಹಲವು ಮಠಾಧೀಶರ ಶಿಫಾರಸ್ಸು ಪತ್ರ ತಂದಿದ್ದಾರೆ.ಸೆಟ್ ದೋಸೆಯಂತಿರುವ ಇವರ ಡಾ/ ವಿಜಯಕುಮಾರ್ ರಾಷ್ಟ್ರದ ಕಾಂಗ್ರೆಸ್ ಕಾರ್ಯದರ್ಶಿ ಬಿ.ಎಂ.ಸಂದೀಪ್ ಹಾಲಿ ಅಧ್ಯಕ್ಷರು ಬೆಂಬಲಕ್ಕೆ ನಿಂತು ಬಿ.ಎಲ್.ಶಂಕರ್ ಮೂಲಕ ಒತ್ತಡ ತರುವ ಪ್ರಯತ್ನ ನಡೆದಿದೆ.ಯಾವ ಶಾಸಕರ ಬೆಂಬಲ ನೀಡುವುದು ಕಷ್ಟ. ಇವರ ವಿರೋಧಿಗಳು ಒನ್ ಮ್ಯಾನ್ ಒನ್ ಪೋಸ್ಟ್ ಸ್ಲೋಗನ್ ಶುರುಮಾಡಿದ್ದು ಮೂರು ಕೊಟ್ಟರೆ ಮಾವನ ಕಡೆ ಆರು ಕೊಟ್ಟರೆ ಅತ್ತೆ ಕಡೆ ಇರುವ ಇವರಿಗೆ ಅಧ್ಯಕ್ಷ ಸ್ಥಾನ ಬೇಕಾ ಎನ್ನುತ್ತಿದ್ದಾರೆ.

ರವೀಶ್ ಕ್ಯಾತನಬೀಡು ಹಲವು ವರ್ಷಗಳಿಂದ ಕಾಂಗ್ರೆಸ್ ನಲ್ಲಿ ಸಕ್ರಿಯವಾಗಿದ್ದು ಮಾಧ್ಯಮ ವಕ್ತಾರ ಜೊತೆಗೆ ಜಿಲ್ಲೆಯಲ್ಲಿ ಚಳುವಳಿ ಜಾಗೃತವಾಗಿರಿಸಿ ಸಾಹಿತ್ಯ, ಸಂಘಟನೆ ಕೆಲಸದಲ್ಲಿ ನಿರತರಾಗಿದ್ದು ಶಾಸಕ ತಮ್ಮಯ್ಯ ಗಟ್ಟಿಯಾಗಿ ನಿಂತರೆ ಮತ್ತು ಬಿ.ಎಲ್.ಶಂಕರ್ ಮನಸ್ಸು ಮಾಡಿದರೆ ಸಾಧ್ಯ ಇಲ್ಲ ಎಂದರೆ ಕಷ್ಟ.ವಕೀಲರು ಮತ್ತು ಕಾಂಗ್ರೆಸ್ ವಕ್ತಾರರಾದ ಸುಧೀರ್ ಕುಮಾರ್ ಮರೋಳಿ ಉತ್ತಮ ವಾಗ್ಮಿಗಳು,ಸಂಘಟಕರು ಎಲ್ಲರೊಂದಿಗೆ ಬೆರೆಯುವ ಮಾತನಾಡುವ ಸ್ವಾಭಾವವಿದೆ.ಶಾಸಕ ರಾಜೇಗೌಡ ಇವರ ಪರ ಪ್ರಬಲವಾಗಿ ನಿಲ್ಲುತ್ತಾರೆ. ಡಿ.ಕೆ.ಶಿವಕುಮಾರ್ ಒಲವುಗಳಿಸಿರುವುದರಿಂದ ಅದೃಷ್ಟ ಖುಲಾಯಿಸಬಹುದು.

ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡರು ಮತ್ತು ಮೂಡಿಗೆರೆ ಅನಂತ್ ರವರಿಗೆ ಕಷ್ಟ ಪ್ರಯತ್ನ ನಡೆಸಿದ್ದಾರೆ. ವೀಕ್ಷಕರು ನಾಮಕಾವಸ್ಥೆಗೆ ಬಂದು ಅಭಿಪ್ರಾಯ ಸಂಗ್ರಹಿಸುವ ಹೈ ಡ್ರಾಮಾ ಮಾಡಿ ಹೋಗುತ್ತಾರೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಾತಿವಾರು ಲೆಕ್ಕಾಚಾರ ಮಾಡುವುದರ ಜೊತೆಗೆ ನಮಗೆ ಬಕೆಟ್‌ ಹಿಡಿಯುವವರ ತಲಾಶ್ ನಡೆಸಿ ಫೈನಲ್ ಮಾಡುತ್ತಾರೆ ಎಂಬುದು ಬಹಿರಂಗ ಸತ್ಯ.

The drama of choosing the District Congress President…!

Share

Leave a comment

Leave a Reply

Your email address will not be published. Required fields are marked *

Don't Miss

ಜಿಲ್ಲೆಯಲ್ಲಿ ಮಳೆಯ ಆರ್ಭಟ – ಕಾಫಿಬೆಳೆ ನಾಶ – ರಸ್ತೆ ಹುಡುಕಾಡುವ ಕಾಟ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಎಡ ಬಿಡದೆ ಮಳೆ ಸುರಿಯುತ್ತಿದೆ ಅದರಲ್ಲೂ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ. ಮಳೆಯ ಆರ್ಭಟದಿಂದ ಕಾಫಿ ಕೊಳೆಯಲು ಆರಂಭವಾಗಿದೆ ಎಂದು ಕಾಫಿ ಬೆಳೆಗಾರರ...

12ನೇ ಶತಮಾನದಲ್ಲೇ ಕನ್ನಡಕ್ಕೆ ವಚನಾಕಾರಿಂದ ಬಹಳ ದೊಡ್ಡ ಕೊಡುಗೆ

ಚಿಕ್ಕಮಗಳೂರು: ವಚನಾಕಾರರು ಕನ್ನಡಕ್ಕೆ ಬಹಳ ದೊಡ್ಡ ಕೊಡುಗೆಯನ್ನು ೧೨ನೇ ಶತಮಾನದಲ್ಲೇ ನೀಡಿದ್ದಾರೆ. ಜಗಜ್ಯೋತಿ ಬಸವಣ್ಣನವರು ಕೊಟ್ಟ ಸಾಂಸ್ಕೃತಿಕ ಚಳುವಳಿ ಬದುಕಿನ ಅನುಭವಗಳು ಅನುಭಾವವಾಗಿ ಜನರ ಆಡುಭಾಷೆಯಲ್ಲಿ ಸಾಹಿತ್ಯ ರಚಿಸಿ ಇಡೀ ಜಗತ್ತಿಗೆ ನೈತಿಕ...

Related Articles

ದೊಡ್ಡ ಮನೆ ಡಿಚ್ಚಿ ಯಾರಿಗೆ – ಕೈ ಕಸರತ್ತು ? ಬಿಜೆಪಿಯಲ್ಲಿ ತಳಮಳ !

ಅಜ್ಜಂಪುರ: ಪಟ್ಟಣ ಪಂಚಾಯತಿ ಚುನಾವಣೆ ನಡೆದು ಇಪ್ಪತ್ತು ದಿನಗಳಾಗಿದೆ ಆದರೆ ಅಧ್ಯಕ್ಷ/ ಉಪಾಧ್ಯಕ್ಷರ ಚುನಾವಣೆ ವಿಳಂಬ...

ಜನರಿಗೆ ವಾಸ್ತವ ಸಂಗತಿ ಕಾಂಗ್ರೆಸ್ ಪ್ರಚಾರ ಸಮಿತಿ ರಾಜ್ಯಾದ್ಯಂತ ಪ್ರವಾಸ

ಚಿಕ್ಕಮಗಳೂರು : ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ನೀಡುತ್ತಿರುವ ಜನಪರ ಯೋಜನೆಗಳ ಪ್ರಚಾರ ಕೈಗೊಳ್ಳುವುದರೊಂದಿಗೆ ವಿರೋಧ...

ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ ಆರೋಪಿಗಳನ್ನು ಗಡಿಪಾರು ಮಾಡಬೇಕು

ಚಿಕ್ಕಮಗಳೂರು: ‘ಅಲ್ಲಂಪುರ ನಿವಾಸಿ ಓಂಕಾರಮೂರ್ತಿ ಮೇಲಿನ ಹಲ್ಲೆ ಸಂಬಂಧ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ‘ಬಿ’...

ಅಂಬೇಡ್ಕರ್ ಸಂವಿಧಾನದ ತತ್ವ ಹೊಂದಿರುವ ಪಕ್ಷ ಕಾಂಗ್ರೆಸ್

ಚಿಕ್ಕಮಗಳೂರು:  ಅಂಬೇಡ್ಕರ್ ಸಂವಿಧಾನದ ತತ್ವವನ್ನು ಹೊಂದಿರುವ ಪಕ್ಷ ಕಾಂ ಗ್ರೆಸ್. ಚುನಾವಣೆಗೆ ಮಾತ್ರ ಪಕ್ಷ ಸೀಮಿತವಾಗದೇ...