ಮೂಡಿಗೆರೆ: ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮತದಾರರು ಕೈಗೊಂಡ ನಿರ್ಣಯಕ್ಕೆ ತಲೆ ಬಾಗುತ್ತೇನೆ. ಆದರೆ ತನ್ನ ಗೆಲುವಿಗೆ ವ್ಯವಸ್ಥಿತ ಷಡ್ಯಂತರ ನಡೆದಿದ್ದರಿಂದ ಸೋಲು ಅನುಭವಿಸುಂತಾಯಿತು ಎಂದು ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳ ಗೆಲುವಿಗಾಗಿ ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ಎಂಎಲ್‌ಸಿ ಸಿ.ಟಿ.ರವಿ ಸೇರಿದಂತೆ ಎನ್‌ಡಿಎ ಮುಖಂಡರು ಮತ್ತು ಕಾರ್ಯಕರ್ತರು ಕೆಲಸ ಮಾಡಿರುವುದು ಸರ್ವೆ ಸಾಮಾನ್ಯ ಎಂದರು.
ಆದರೆ ಸಹಕಾರ ಸಂಘದಲ್ಲಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರ ಸಂಖ್ಯೆ ಕಡಿಮೆ ಇದೆ. ಆದರೂ ಕಾಂಗ್ರೆಸ್‌ನ ಎಲ್ಲಾ ಎಂಎಲ್‌ಎ ಹಾಗೂ ಮುಖಂಡರು ಕೂಡ ಗೆಲುವಿಗಾಗಿ ಶ್ರಮಿಸಿದ್ದರೂ, ಚುನಾವಣೆಯನ್ನು ಇನ್ನಷ್ಟು ಗಂಭೀರವಾಗಿ ತೆಗೆದುಕೊಂಡಿದ್ದರೆ ಗೆಲುವು ಸಾಧ್ಯವಾಗುತ್ತಿತ್ತು ಎಂದು ಹೇಳಿದರು.
ಇಂತಹ ಚುನಾವಣೆಯಲ್ಲಿ ರಾಜಕೀಯ ಮುಖಂಡರು ಪಾಲ್ಗೊಂಡಿರುವ ಬಗ್ಗೆ ತಾನು ಪ್ರತಿಕ್ರಿಯೆ ನೀಡುವುದಿಲ್ಲ. ಇದಕ್ಕೆ ಉತ್ತರ ಅವರಿಂದಲೇ ಪಡೆಯಿರಿ. ತಾನು ಎಲ್ಲರಿಗೂ ಚಿರಪರಿಚಿತನಾಗಿದ್ದೇನೆ.
ರೈತರ ಪರವಾಗಿ ಕಾಳಜಿ ಇಟ್ಟುಕೊಂಡು ವಿಧಾನಸೌಧದ ಮುಂದೆ ಧರಣಿ ಕುಳಿತಿದ್ದೆ. ಹಾಗಾಗಿ ಮಲೆನಾಡು, ಬಯಲುಸೀಮೆ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಚುನಾವಣೆ ಸ್ಪರ್ಧಿಸಿದ್ದೆ. ಆದರೆ ಲೋಕಪ್ಪಗೌಡ ಎಂಬುವರು ಮತದಾರರ ದಿಕ್ಕು ತಪ್ಪಿಸಿದ್ದ ಕಾರಣ ತನಗೆ ಸೋಲು ಉಂಟಾಗಿದೆ ಎಂದು ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸಹಕಾರಿ ಸಂಘಗಳ ಚುನಾವಣೆಗೆ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತರಿಗೆ ಅವಕಾಶ ಸಿಗುವಂತೆ ಸದನದಲ್ಲಿ ಮಂಡನೆಯಾಗಿರುವುದಕ್ಕೆ ರಾಜ್ಯಪಾಲರು ಸಹಿ ಹಾಕಬೇಕೆಂದು ಒತ್ತಾಯಿಸಿದರು.
The conspiracy led to the election being lost.
Leave a comment