ಚಿಕ್ಕಮಗಳೂರು : ತರೀಕೆರೆ ಪಿ.ಎಲ್.ಡಿ ಬ್ಯಾಂಕ್ ಸಹಕಾರ ಭಾರತಿ ತೆಕ್ಕೆಗೆ ಬಂದಿದೆ, ತರೀಕೆರೆಯ ಭೂ ಅಭಿವೃದ್ಧಿ ಬ್ಯಾಂಕ್ ನ ಚುನಾವಣೆ ನಡೆದಿದ್ದು 2025 ರಿಂದ 2030 ವರೆಗಿನ ಅಡಳಿತ ಮಂಡಳಿಗೆ ಹನ್ನೊಂದು ಜನ ಅವಿರೋಧವಾಗಿ ಆಯ್ಕೆಯಾದರೆ ಇನ್ನುಳಿದ ಎರಡು ಸ್ಥಾನಕ್ಕೆ ಚುನಾವಣೆ ನಡೆಯಿತು.
ಲಿಂಗದಹಳ್ಳಿ ಕ್ಷೇತ್ರದಿಂದ ಪಿ.ಎಸ್. ನಂಜುಂಡಸ್ವಾಮಿ
ಉಡೇವದ ತಮ್ಮಯ್ಯ ಅಮೃತಾಪುರ ಕ್ಷೇತ್ರದಿಂದ
ಚಂದ್ರಶೇಖರಪ್ಪ ಮತ್ತು ಹೇಮಲತಾ ಲಕ್ಕವಳ್ಳಿ ಕ್ಷೇತ್ರದಿಂದ ಟಿ.ಟಿ. ಗೋವಿಂದಪ್ಪ ಮತ್ತು ಎಚ್.ಎಂ. ಕಿರಣ್ ಕುಮಾರ್, ಅಜ್ಜಂಪುರ ಕ್ಷೇತ್ರದಿಂದ ಎ.ಎಂ.ಯೋಗೀಶ್ ನಾಗರಾಜ್, ಶಿವನಿ ಕ್ಷೇತ್ರದಿಂದ ಪ್ರೀತಮ್ ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಬೇಗೂರು ನಾಗರಾಜ್ ಅವಿರೋಧವಾಗಿ ಆಯ್ಕೆಯಾದರೆ, ಅಜ್ಜಂಪುರ ಬಿ ಕ್ಷೇತ್ರದಿಂದ ಹಾಲಸಿದ್ದಪ್ಪ ಶಿವನಿ ಬಿ ಕ್ಷೇತ್ರದಿಂದ ದಿವಾಕರ ಮೂರ್ತಿ ಚುನಾವಣೆಲಿ, ಜಯಗಳಿಸಿದ್ದಾರೆ. ತರೀಕೆರೆ ಮಾಜಿ ಶಾಸಕ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಿ.ಎಸ್.ಸರೇಶ್ ಮತ್ತು ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಲ್. ರಮೇಶ್ ನೇತೃತ್ವದಲ್ಲಿ ಚುನಾವಣೆ ನಡೆದಿದ್ದು,, ಕಳೆದ ಇಪ್ಪತ್ತು ವರ್ಷಗಳಿಂದ ಪೀ ಕಾರ್ಡ್ ಬ್ಯಾಂಕ್ ನಲ್ಲಿ ಹಿಡಿತ ಸಾಧಿಸಿದ್ದಾರೆ. ಆಡಳಿತ ಮಂಡಳಿ ನಿರ್ದೇಶಕರುಗಳ ಚುನಾವಣೆಯಲ್ಲಿ ಸಹಕಾರ ಭಾರತಿ ತರೀಕೆರೆ ಘಟಕ ಮತ್ತು ಡಿಎಸ್ ಸುರೇಶ್ ಮಾಜಿ ಶಾಸಕರು ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಇವರ ನೇತೃತ್ವದಲ್ಲಿ ಜಯಿಸಿದ 13 ನಿರ್ದೇಶಕರುಗಳಿಗೆ ಸಹಕಾರ ಭಾರತಿ ಚಿಕ್ಕಮಗಳೂರು ಪ್ರಧಾನ ಕಾರ್ಯದರ್ಶಿಯಾದ ಟಿ.ಎಲ್. ರಮೇಶ್ DCC ಬ್ಯಾಂಕ್ ನಿರ್ದೇಶಕರು ಅಭಿನಂದಿಸಿದ್ದಾರೆ.
Leave a comment