ತರೀಕೆರೆ ಉಪವಿಭಾಗಧಿಕಾರಿ ಕಾಂತರಾಜ್ ವಕೀಲರೊಂದಿಗೆ ನೆಡೆಸಿದ ದುರ್ವರ್ತನೆಗೆ ಜಿಲ್ಲೆಯ ವಕೀಲ ವೃಂದ ಕೆರಳಿ ಕೆಂಡವಾಗಿದೆ.
ನಿನ್ನೆ ಸಂಜೆ ಕಛೇರಿಯಲ್ಲಿ ಕಾತರಾಜ್ ಏಕವಚನದಲ್ಲಿ ವಕೀಲ ನಾಗರಾಜ್ ಎಂಬುವವರೊಂದಿಗೆ ವಾಗ್ವಾದ ನಡೆಸಿದ್ದು ವಿಷಯ ತಿಳಿದು ತರೀಕೆರೆ ವಕೀಲರು ಎಸಿ ಕಛೇರಿಗೆ ತೆರಳಿ ಪ್ರಶ್ನಿಸಿದ್ದು ಇದಕ್ಕೂ ಮಣೆ ಹಾಕದ ಕಾಂತರಾಜ್ ಮೇಲೆ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿ ಅವರ ಕಛೇರಿಯಲ್ಲಿ ನಡೆಯುವ ಕೇಸ್ ಗಳಿಗೆ ಹಾಜರಾಗದೆ ಬಹಿಷ್ಕಾರ ಹಾಕಿದ್ದಾರೆ.
ಕಾಂತರಾಜ್ ಮೇಲೆ ವ್ಯಾಪಕ ದೂರುಗಳಿದ್ದು ಈ ಸಂಬಂಧ ಲೋಕಯುಕ್ತ ಮತ್ತು ಇಲಾಖೆ ದೂರು ನೀಡಲಾಗಿದೆ ಎಂದು ವಕೀಲ ನಾಗರಾಜ್ ತಿಳಿಸಿದ್ದಾರೆ.
ಚಿಕ್ಕಮಗಳೂರು ತಹಶಿಲ್ದಾರ ಆಗಿದ್ದಾಗಲು ವ್ಯಾಪಕ ದೂರುಗಳಿದ್ದು ಉಡಾಪೆಯಿಂದ ವರ್ತಿಸುತ್ತಾರೆ ಹೀಗಾಗಿ ತರೀಕೆರೆ, ಕಡೂರು ಮತ್ತು ಚಿಕ್ಕಮಗಳೂರು ವಕೀಲರ ಸಂಘದವರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿ ತನಿಖೆಗೆ ಒತ್ತಯಿಸುವ ತೀರ್ಮಾನ ತೆಗೆದುಕೊಂಡಿದ್ದಾರೆ.
ಅಂತ ಅಂತವರೆ ಸೇರಿ ಅಂತರಘಟ್ಟೆ ಜಾತ್ರೆ ಮಾಡಿದರು ಎಂಬಂತಹ ವಾತಾವರಣ ಸೃಷ್ಟಿ ಮಾಡಿದ್ದಾರೆ .
Sub-Divisional Officer Kantaraj Misbehavior Advocate Boycott
Leave a comment