ಚಿಕ್ಕಮಗಳೂರು: ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಮಹಿಳಾ ಪದವಿ ಪೂರ್ವ ಕಾಲೇಜಿನ ಕುಮಾರಿ ಚಂದನ ಹಾಗೂ ಕುಮಾರಿ ತನುಶ್ರೀ ಇವರುಗಳು ರಾಜ್ಯಮಟ್ಟದ ಕಬ್ಬಡ್ಡಿಯಲ್ಲಿ ಜಯಗಳಿಸಿ ರಾಷ್ಟ್ರೀಯ ಮಟ್ಟದ ಕಬ್ಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆಯಾಗಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಶಾಲೆಯ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಡಾ. ವಿನಾಯಕ ಸಿಂದಿಗೆರೆ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಇಬ್ಬರು ವಿದ್ಯಾರ್ಥಿನಿಯರನ್ನು ಪರಮ ಪೂಜ್ಯ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಅಭಿನಂದಿಸಿ ಆಶಿರ್ವದಿಸಿದ್ದಾರೆ ಎಂದರು.
ಭುವನೇಶ್ವರಿ ಪ್ರೌಢಶಾಲೆಯ ೧೦ನೇ ತರಗತಿಯ ವರ್ಷ, ೮ನೇ ತರಗತಿಯ ಸಿಂಚನ, ೯ನೇ ತರಗತಿ ಅಂಕಿತ ಇವರುಗಳು ಮಿನಿ ಒಲಂಪಿಕ್‌ನಲ್ಲಿ ಗೆಲುವು ಸಾಧಿಸಿದ್ದು, ಬಿ.ಎಲ್ ಪ್ರಿಯಾಂಕ ಇವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆಂದು ಹೇಳಿದರು.
ಈ ವಿದ್ಯಾರ್ಥಿನಿಯರ ಸಾಧನೆಗೆ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕರಾಗಿರುವ ಕೆ.ಟಿ.ವೆಂಕಟೇಶ್, ಎನ್.ಎಂ ನಾಗರಾಜ್, ಕಬ್ಬಡ್ಡಿ ತರಬೇತುದಾರರಾದ ಮಂಜುನಾಥ್ ಹಾಗೂ ಪಿ.ಮಹೇಶ್ ಇವರುಗಳ ನಿರಂತರ ತರಬೇತಿ ಕಾರಣವಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಭಾಗದ ಪ್ರತಿಭೆಗಳು ಉತ್ತಮ ತರಬೇತಿ ಮತ್ತು ಮಾರ್ಗದರ್ಶನ ದೊರಕಿದರೆ ರಾಷ್ಟ್ರಮಟ್ಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸುತ್ತಾರೆಂಬುದಕ್ಕೆ ಈ ಬಾಲಕಿಯರು ಸ್ಪಷ್ಟ ನಿದರ್ಶನವಾಗಿದ್ದು, ಈ ಸಾಧನೆಗೆ ಶಾಲೆಯ ಎಲ್ಲಾ ಶಿಕ್ಷಕರು, ಪ್ರಾಂಶುಪಾಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆಂದರು.
ಈ ವಿದ್ಯಾರ್ಥಿನಿಯರು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಜಯಗಳಿಸಿ ಜಿಲ್ಲೆಗೆ, ಕಾಲೇಜಿಗೆ, ಪೋಷಕರಿಗೆ ಕೀರ್ತಿ ತರಲಿ ಎಂದು ಶುಭ ಹಾರೈಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಾಚಾರ್ಯ ಶಿವನಗೌಡ ಕೆ ಸುರಕೋಡ, ಆಶಾಮಲ್ಲೇಶ್, ಭಾರತಿ, ಬಿ. ಚೇತನ, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
STJ College students selected for national level kabaddi tournament
Leave a comment