ಚಿಕ್ಕಮಗಳೂರು :ಮೂಡಿಗೆರೆಯಲ್ಲಿ ರಾಜ್ಯಮಟ್ಟದ ಕವಿ ಕಾವ್ಯ ಸಮ್ಮೇಳನ*
ಸಾಹಿತಿ ಶಿಕ್ಷಕ ಮೇಕನಗದ್ದೆ ಲಕ್ಷ್ಮಣಗೌಡರಿಗೆ ಸಮ್ಮೇಳನದ
*ಮೂಡಿಗೆರೆಯಲ್ಲಿ ರಾಜ್ಯಮಟ್ಟದ ಕವಿ ಕಾವ್ಯ ಸಮ್ಮೇಳನ*
ಸಾಹಿತಿ ಶಿಕ್ಷಕ ಮೇಕನಗದ್ದೆ ಲಕ್ಷ್ಮಣಗೌಡರಿಗೆ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ.
ರಾಜದಾದ್ಯಂತ 71 ಕವಿಗಳು ಕವಿಗೋಷ್ಠಿಯಲ್ಲಿ ಭಾಗಿ.
ಕವಿ ಮತ್ತು ಕವಿತ್ವಕ್ಕೆ ಇರುವ ಶಕ್ತಿ ಅತೀ ದೊಡ್ಡದು. ಇಂತಹ ಕವಿತ್ವಕ್ಕೆ ಒಂದು ದೊಡ್ಡ ಬನಾದಿ ಹಾಕಿ ಪೂರ್ಣಾರ್ಥದೊಂದಿಗೆ ಬಹುತ್ವದ ರೂಪ ನೀಡಿ ಬುನಾದಿಯಾದ ಅನೇಕ ಮೇರು ಕವಿಗಳಲ್ಲಿ ಕನ್ನಡಿಗರದ್ದು ಕೊಡ ಸಿಂಹ ಪಾಲು ಇದೆ ಎಂಬುದು ಹೆಗ್ಗಳಿಕೆ ವಿಚಾರ.ಇದರಲ್ಲಿ ಆದಿಕವಿ ಪಂಪ ಬಹಳ ಪ್ರಮುಖವಾದ ಸ್ಥಾನ ಪಡೆದಿದ್ದಾನೆ ಎನ್ನಬಹುದು.
ಕಲೆ ಸಾಹಿತ್ಯ ಸಂಸ್ಕೃತಿ ಒಂದು ಜನ ಸಮುದಾಯವನ್ನು ಕಟ್ಟುವ ಪ್ರಮುಖ ಸಾಧನಗಳು.
ಅನೇಕ ಸಂದರ್ಭಗಳಲ್ಲಿ ಇಂತಹ ಸಾಧನಗಳು ಜನಚರಿತೆಯಾಗಿ ಹೊರಹೊಮ್ಮಿವೆ, ಯಾವತ್ತು ನಶಿಸಿ ಹೋಗದಂತಹ ಸಾಕ್ಷಿ ಕಲ್ಲುಗಳಂತೆ ಕಾವ್ಯಗಳು ಈ ನೆಲದೊಳಗಿಂದ ಎದ್ದು ನಿಂತಿವೆ.
ಎಲ್ಲರೊಳಗೊಂದು ಕವಿತೆ ಇದ್ದೇ ಇರುತ್ತದೆ, ಅದನ್ನು ಕಟ್ಟುವ ಪರಿಯನ್ನು ರೂಡಿಸಿಕೊಳ್ಳಬೇಕು, ಕಟ್ಟುವವರಿಗೆ ವೇದಿಕೆ ನಿರ್ಮಾಣ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯವನ್ನು ಮತ್ತಷ್ಟು ಗಟ್ಟಿಮಾಡುವ ಅವಶ್ಯಕತೆ ಇದೆ. ವಿಶೇಷವಾಗಿ ಮಕ್ಕಳಲ್ಲಿ ಕನ್ನಡ ಪ್ರೇಮವನ್ನು ನಾವು ಬೆಳೆಸದೆ ಹೋದರೆ ಭಾಷಾ ಬಳಕೆ ಕಡಿಮೆಯಾಗಿ, ಅ ಭಾಷೆಯೊಳಗಿರುವ ಶ್ರೇಷ್ಠ ಸಂಸ್ಕೃತಿ, ಆ ಸಂಸ್ಕೃತಿ ಒಳಗೆ ಹಾಸುಹೊಕ್ಕಾಗಿರುವ ಜ್ಞಾನ ಕೈ ತಪ್ಪಿ ಹೋಗುವ ಸಂಭವವಿದೆ, ತಲತಲಾಂತರದಿಂದ ನಮ್ಮ ಜನಪದರು ರೂಡಿಗತವಾಗಿ ಬೆಳೆಸಿಕೊಂಡು ಬಂದ ನಮ್ಮದೇ ಭಾಷೆಯೊಂದನ್ನು, ಆಧುನಿಕ ಜಗತ್ತಿನ ಭಾಗವಾಗಿರುವ ನಾವುಗಳು ಉಳಿಸಿಕೊಳ್ಳಲು ಸಾಧ್ಯವಾಗದೆ ಹೋದರೆ ಮುಂದಿನ ಜನಾಂಗಕ್ಕೆ ನಾವೆಲ್ಲ ಶಾಪಗ್ರಸ್ತರಂತೆ ಕಾಣುತ್ತೇವೆ.
ಈ ಎಲ್ಲ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ ಸುಮಾರು 71 ಕವಿಗಳು ತಮ್ಮ ತಮ್ಮ ಕವಿತೆಗಳ ಮೂಲಕ ಕರೆ ಕೊಟ್ಟಿದ್ದು ಈ ನೆಲ ಜಲ ಬದುಕು ಪ್ರಕೃತಿ ಭಾಷೆ ಸಂಸ್ಕೃತಿ ಜಾತಿ ಧರ್ಮ ಮತ ಪಂಥ ಅಸಮಾನತೆ ಸಮಾನತೆ ಮಾನವೀಯ ಮೌಲ್ಯದ ಪ್ರತಿಪಾದಯನ್ನು ತಮ್ಮ ಕವಿತೆಗಳ ಮೂಲಕ ಪ್ರತಿಪಾದಿಸಿರು.
ಮೂಡಿಗೆರೆಯ ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ದೀನ್ ದಯಾಳ್ ಉಪಾಧ್ಯಾಯ ಸಭಾಭವನದಲ್ಲಿ ಜರುಗಿದ ಕವಿ ಕಾವ್ಯ ರಾಜ್ಯ ಸಮ್ಮೇಳನದ ಸಮಾರೋಪದ ಅಧ್ಯಕ್ಷತೆಯನ್ನು ಕರ್ನಾಟಕ ಸಾಹಿತ್ಯ ಸಂಭ್ರಮ ಬಳಗದ ರಾಜ್ಯಾಧ್ಯಕ್ಷರಾದ ಎಂ ಎಸ್ ನಾಗರಾಜ್ ವಹಿಸಿದ್ದರು. ಮೇಕನಗದ್ದೆ ಲಕ್ಷ್ಮಣ ಗೌಡರು ಸರ್ವಾಧ್ಯಕ್ಷತೆಯನ್ನು ವಹಿಸಿ ಸಾಹಿತ್ಯ ಬಳಗದ ಗೌರವ ಸ್ವೀಕರಿಸಿ ಮಾತನಾಡಿದರು. ಸಾಹಿತಿ ಕಲ್ಕಟ್ಟೆ ನಾಗರಾಜ್ ರಾವ್ ಕವಿಗೋಷ್ಠಿ ಅಧ್ಯಕ್ಷತೆಯನ್ನು ವಹಿಸಿಕೊಂಡು ವಾಚನ ಮಾಡಿದ ಎಲ್ಲ ಕವಿತೆಗಳ ಬಗ್ಗೆ ವಿಮರ್ಶೆನೆ ಮಾಡಿದರು.
ವೇದಿಕೆಯಲ್ಲಿ ಕವಿ ಕಲಾವಿದರು ಸಾಹಿತಿಗಳು ಸಂಘಟಕರು ಉಪಸ್ಥಿತರಿದ್ದು, ಶಿಕ್ಷಕಿ ಚಂಪಾ ಸ್ವಾಗತಿಸಿ ನವೀನ್ ನಿರೂಪಣೆ ಮಾಡಿ ವಂದಿಸಿದರು.
••••••••••••••••••••••••••••••✒️
ವರದಿ ಡಿ.ಎಂ ಮಂಜುನಾಥ್
Leave a comment