ಚಿಕ್ಕಮಗಳೂರು : ನನ್ನನ್ನು ಬಂಧಿಸಿದಾಗ ಸವದತ್ತಿ ಯಲ್ಲಮ್ಮನ ದೇವಸ್ಥಾನದ ಎದುರಿಗೆ ಕರೆದುಕೊಂಡು ಹೋದರು ಈ ಸಂಕಷ್ಟದ ಪರಿಸ್ಥಿತಿಯಲ್ಲಿ ನನ್ನನ್ನು ಕಾಪಾಡು ಎಂದು ಯಲ್ಲಮ್ಮನಿಗೆ ಹರಕೆ ಹೊತ್ತಿದ್ದೇನೆ ಮುಂದಿನ ದಿನಗಳಲ್ಲಿ ಆಣೆ ಪ್ರಮಾಣಕ್ಕೆ ಧರ್ಮಸ್ಥಳಕ್ಕೂ ಹೋಗುತ್ತೇನೆ, ಸವದತ್ತಿ ಯಲ್ಲಮ್ಮನ ಬಳಿಯೂ ಹೋಗಿ ಹರಕೆ ತೀರಿಸುತ್ತೇನೆ ಎಂದು ಸಿ.ಟಿ ರವಿ ಹೇಳಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸದನದಲ್ಲಿ ನಡೆದ ಘಟನೆಯ ವೇಳೆ ಹಾಗೂ ಸಿಸಿಟಿವಿ ವಿಡಿಯೋ ಎಲ್ಲಾ ಇದೆ. ವಿಡಿಯೋ ಮಾಡಿದವರು ಯಾರು ಅಪರಿಚಿತರಲ್ಲ, ಎಲ್ಲರೂ ಲಕ್ಷ್ಮಿ ಹೆಬ್ಬಾಳ್ಕರ್ ಪಿಎ ಅವರ ಜೊತೆ ಇದ್ದವರೆ ಹಲ್ಲೆ ಮಾಡಿದ್ದು, ನಾನು ಕಳೆದ ಡಿಸೆಂಬರ್ 19ರ ದಿನವೇ ದೂರು ನೀಡಿದ್ದೇನೆ ಈವರೆಗೂ ಎಫ್ಐಆರ್ ಆಗಿಲ್ಲ ಅಂದರೆ ಕಮಿಷನರ್ ಅಮಾನತ್ತಾಗಬೇಕು. ಸೆಕ್ಷನ್ 135 (a) ಶಾಸಕರಿಗೆ ವಿಶೇಷ ಸವಲತ್ತು ಇದೆ ಆದರೆ ಯಾವುದೇ ನೋಟಿಸ್ ಕೊಡದೆ ಬೆಳಗಾವಿ ಧಾರವಾಡ ಹುಬ್ಬಳ್ಳಿ ಸೇರಿದಂತೆ ಸುಮಾರು ನಾಲ್ಕು ನೂರು ಕಿಲೋಮೀಟರ್ ನನ್ನನ್ನು ಸುಖ ಸುಮ್ಮನೆ ಸುತ್ತಿಸಿದ್ರು. ಊಟ ನೀರು ಚಿಕಿತ್ಸೆ ಕೊಡದೆ ಚಿತ್ರಹಿಂಸೆ ನೀಡಿದರು ಎಂದರು.
ಇದೆ ವೇಳೆ ಬೆಳಗಾವಿಯ ಖಾನಾಪುರ ಸಿಪಿಐ ಅಮಾನತ್ತು ಹಿನ್ನೆಲೆ ಮಾತನಾಡಿದ ಅವರು ಅಮಾನತ್ತು ಆಗಿರುವ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ಅಮಾನತ್ತು ಮಾಡಬೇಕಾಗಿರೋದು ಶಾರೀರಿಕ ಹಾಗೂ ಮಾನಸಿಕ ದೌರ್ಜನ್ಯ ಮಾಡಿದವರನ್ನು, ಪೊಲೀಸ್ ಠಾಣೆಯಲ್ಲಿ ಯಾವುದೇ ಬಿಜೆಪಿಯ ಸಭೆ ನಡೆದಿಲ್ಲ ಘಟನೆಯ ಬಳಿಕ ಠಾಣೆಗೆ ಆಗಮಿಸಿದ ಬಿಜೆಪಿ ನಾಯಕರು ಹಾಗೂ ಮುಖಂಡರು ಇದ್ದರು. ಅಲ್ಲಿ ಕಮಿಷನರ್ ಹಾಗೂ ವಿಪಕ್ಷ ನಾಯಕರು ಶಾಸಕರು ಬಂದಿದ್ದರು. ಅದನ್ನ ಬಿಜೆಪಿ ಸಭೆ ಅನ್ನೋದು ಸರ್ಕಾರದ ಪೂರ್ವಗ್ರಹ ಪೀಡಿತ ಎಂದು ಪೊಲೀಸ್ ಅಧಿಕಾರಿಯನ್ನು ಅಮಾನತ್ತು ಮಾಡಿರುವುದು ಸರಿಯಲ್ಲ, ನಿಜವಾಗಿಯೂ ಕ್ರಮ ಆಗಬೇಕಿರೋದು ಎಸ್.ಪಿ ಹಾಗೂ ಕಮಿಷನರ್ ಮೇಲೆ ಎಂದು ಖಂಡಿಸಿದರು.
ಸದನದಲ್ಲಿ ನಡೆದ ಘಟನೆ ಜಾತಿ ಸಂಘರ್ಷಕ್ಕೆ ತಿರುಗಿದೆ ಎಂಬ ಹೇಳಿಕೆಯ ವಿರುದ್ಧ ಮಾತನಾಡಿದ ಸಿ.ಟಿ ರವಿ ನಾನು ಹಿಂದುತ್ವವಾದಿ ಹಿಂದುತ್ವ ಕಾಗಿಯೇ ಬಂದವನು. ಜಾತಿ ಮಾಡಿಲ್ಲ ಮುಂದೆಯೂ ಮಾಡಲ್ಲ ಎಂದರು.
ಇದೇ ವೇಳೆ ಮಾತನಾಡಿದ ರವಿ ಶಾಸಕ ಮುನಿರತ್ನ ಮೇಲಿನ ಹಲ್ಲೆಗೆ ಸಿ.ಟಿ ರವಿ ಖಂಡನೆ ವ್ಯಕ್ತಪಡಿಸಿದ್ದು
ಇದೊಂದು ಗೂಂಡಾ ರಾಜ್ಯ ಎಂದು ಆಕ್ರೋಶಿಸಿದರು, ಮುನಿರತ್ನ ಅವರ ಮೇಲೆ ಹಲ್ಲೆ ಆಗಿರುವುದು ಕಂಡು ಬಂದಿದೆ. ಗೂಂಡ ರಾಜ್ಯವಾಗಿ ಮಾರ್ಪಾಡಾಗುತ್ತಿದೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ತುರ್ತು ಪರಿಸ್ಥಿತಿಯನ್ನೇ ಎದುರಿಸಿದ್ದೇನೆ ಈ ಗುಂಡಗಿರಿಗೆಲ್ಲ ಬಿಜೆಪಿ ಹಾಗೂ ನಾವು ಹೆದರುವುದಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಬಳಿಕ ಮುನಿರತ್ನಾಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಸಿ.ಟಿ ರವಿ, ನಾವೆಲ್ಲರೂ ನಿಮ್ಮ ಜೊತೆ ಇದ್ದೇವೆ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಆತ್ಮಸ್ಥೈರ್ಯ ತುಂಬಿದರು.
Leave a comment