ಚಿಕ್ಕಮಗಳೂರು :
ಕಾಫಿನಾಡಿನಲ್ಲಿ ಇಂದಿನಿಂದ ದತ್ತಮಾಲಾ ಅಭಿಯಾನದ ಸಂಭ್ರಮ ಏರ್ಪಟ್ಟಿದೆ. ಶ್ರೀರಾಮ ಸೇನೆ ವತಿಯಿಂದ ನಡೆಯುವ 21 ನೇ ವರ್ಷದ ದತ್ತಮಾಲಾ ಅಭಿಯಾನಕ್ಕೆ ಇದರೊಂದಿಗೆ ಅಧಿಕೃತ ಚಾಲನೆ ದೊರೆತಿದೆ.
ಕರ್ನಾಟಕದ ಅಯೋಧ್ಯೆ ಎನಿಸಿರುವ ವಿವಾದಿತ ದತ್ತಪೀಠದಲ್ಲಿ ನಡೆಯಲಿರುವ ದತ್ತಮಾಲಾ ಅಭಿಯಾನದ ಪ್ರಯುಕ್ತ, ಮಾಲಾಧಾರಣೆ ಮಾಡುವ ಮೂಲಕ ದತ್ತಮಾಲಾ ಅಭಿಯಾನ ಆರಂಭಗೊಂಡಿದೆ.
ಚಿಕ್ಕಮಗಳೂರು ನಗರದ ಶಂಕರಮಠದಲ್ಲಿ ಮಾಲಾಧಾರಣೆ ಮಾಡಲಾಯಿತು. ಇಂದಿನಿಂದ ನವೆಂಬರ್ 10 ವರೆಗೆ ನಡೆಯಲಿರುವ ದತ್ತಮಾಲಾ ಅಭಿಯಾನಕ್ಕೆ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಸೇರಿ ಹಲವರಿಂದ ಮಾಲಾಧಾರಣೆ ಹಾಕಲಾಯಿತು. ಹಿಂದೂಗಳಿಗೆ ದತ್ತಪೀಠ ನೀಡಬೇಕು ಎಂಬ ಪ್ರಮುಖ ಆಗ್ರಹದೊಂದಿಗೆ ಈ ಬಾರಿಯ ದತ್ತಮಾಲಾ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ. ನವೆಂಬರ್ 10ರಂದು ದತ್ತಪೀಠದಲ್ಲಿ ದತ್ತಪಾದುಕೆ ದರ್ಶನಕ್ಕೆ ಮಾಲಾಧಾರಿಗಳು ತೆರಳಲಿದ್ದಾರೆ.
2 ದಶಕದ ನಂತರ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಯಿಂದ ಈ ಬಾರಿಯ ಅಭಿಯಾನಕ್ಕೆ ಸಾಥ್ ದೊರೆತಿದೆ. ಇದರೊಂದಿಗೆ ಒಗ್ಗಟ್ಟಿನ ಮಂತ್ರವನ್ನು ಈ ಬಾರಿ ನಡೆಯಲಿರುವ ದತ್ತಮಾಲಾ ಅಭಿಯಾನ ಪಡೆದುಕೊಂಡಿದೆ. ಜಿಲ್ಲೆ ಸೇರಿ ರಾಜ್ಯಾದ್ಯಂತ ಇಂದು ದತ್ತ ಭಕ್ತರು ದತ್ತಮಾಲಾಧಾರಣೆ ಮಾಡಿದ್ದಾರೆ. ಚಿಕ್ಕಮಗಳೂರು ತಾಲೂಕಿನ ವಿವಾದಿತ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ಸ್ವಾಮಿ ದರ್ಗಾ ಸುತ್ತಮುತ್ತ ಕೇಸರಿ ಮಯಗೊಳ್ಳಲಿದೆ
Leave a comment