Home namma chikmagalur chikamagalur ಸರ್ಕಾರಿ ನೌಕರರ ಒತ್ತಡಮುಕ್ತ ಸೇವೆಗೆ ಕ್ರೀಡಾಕೂಟ ಸಹಕಾರಿ
chikamagalurHomeLatest Newsnamma chikmagalur

ಸರ್ಕಾರಿ ನೌಕರರ ಒತ್ತಡಮುಕ್ತ ಸೇವೆಗೆ ಕ್ರೀಡಾಕೂಟ ಸಹಕಾರಿ

Share
Share

ಚಿಕ್ಕಮಗಳೂರು:  ಸರ್ಕಾರಿ ನೌಕರರ ಒತ್ತಡಮುಕ್ತ ಸೇವೆಗೆ ಕ್ರೀಡಾಕೂಟಗಳು ಸಹಕಾರಿಯಾಗಿದ್ದು, ನಿಮ್ಮ ಜೀವನದಲ್ಲಿ ಈ ಕ್ರೀಡಾಕೂಟ ಮರೆಯಲಾಗದ ಕ್ಷಣವಾಗಲಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನ ಶುಭ ಹಾರೈಸಿದರು.

ಅವರು ಇಂದು ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಮೂರು ದಿನಗಳ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ೨೦೨೫-೨೬ ರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರಿ ಸೇವೆ ಸಲ್ಲಿಸುವಾಗ ಸಮಯ ಸಿಗುವುದಿಲ್ಲ, ಈ ಮೂರು ದಿನ ಬಿಡುವು ಮಾಡಿಕೊಂಡು ಮುಕ್ತ ಮನಸ್ಸಿನಿಂದ ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಸದೃಢ ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ಬೇರೆಯವರೊಂದಿಗೆ ಪರಸ್ಪರ ಸಹಕಾರ ಮತ್ತು ಸಂಯಮ ಬೆಳೆಸಲು ಪೂರಕವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಸ್ಪರ್ಧಾ ಮನೋಭಾವದಿಂದ ಭಾಗವಹಿಸಿ ಎಂದು ಹೇಳಿದರು.

ಈ ಕ್ರೀಡಾಕೂಟಕ್ಕೆ ೬.೫೦ ಲಕ್ಷ ರೂ ಸಿಎಸ್‌ಆರ್ ಅನುದಾನ ನೀಡಿದ್ದು, ಆಕರ್ಷಕ ಬಹುಮಾನಗಳನ್ನು ಖರೀದಿಸಲಾಗಿದೆ. ಕ್ರೀಡೆಯಲ್ಲಿ ಭಾಗವಹಿಸಿದವರಿಗೆ ವೈಯಕ್ತಿಕ ಬಹುಮಾನ, ಗ್ರೂಪ್ ಬಹುಮಾನ, ರೋಲಿಂಗ್ ಟ್ರೋಫಿ ಜೊತೆಗೆ ಬಹುಮಾನ ನೀಡಲಾಗುವುದು ಎಂದರು.

ಕ್ರೀಡಾಕೂಟವನ್ನು ಉದ್ಘಾಟಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಮಾತನಾಡಿ, ಕ್ರೀಡೆಗಳು ಒತ್ತಡವನ್ನು ಮುಕ್ತಗೊಳಿಸುವ ಜೊತೆಗೆ ಉತ್ತಮ ಬಾಂಧವ್ಯ ಹೊಂದಲು ಪೂರಕವಾಗಿದ್ದು, ಸರ್ಕಾರಿ ನೌಕರರು ಮೂರು ದಿನಗಳ ಈ ಕ್ರೀಡಾಕೂಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ಎಂದು ಶುಭ ಹಾರೈಸಿದರು.

ಕ್ರೀಡಾ ಜ್ಯೋತಿ ಸ್ವೀಕರಿಸಿದ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ ಮಾತನಾಡಿ, ಕ್ರೀಡೆಗಳು ಮನುಷ್ಯನ ಬದುಕಿನಲ್ಲಿ ಅನಿವಾರ್ಯ ಮತ್ತು ಅಗತ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಬೇಕು, ದೈಹಿಕ, ಮಾನಸಿಕ ಕ್ರೀಡೆ ಬದುಕಿನ ತೊಳಲಾಟ ಇವೆಲ್ಲವನ್ನೂ ಕ್ರೀಡೆ ಎಂದು ಪರಿಗಣಿಸಿದಾಗ ಮಾತ್ರ ಒತ್ತಡದಿಂದ ಹೊರಬರಲು ಸಾಧ್ಯ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸುಮಾರು ೨ ಸಾವಿರಕ್ಕೂ ಹೆಚ್ಚು ನೌಕರರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಜಿ.ಪಂ, ತಾ.ಪಂ. ಚುನಾಯಿತ ಪ್ರತಿನಿಧಿಗಳು ಇಲ್ಲದಿದ್ದರೂ ಸಿಇಓ ನೇತೃತ್ವದಲ್ಲಿ ಸಮರ್ಪಕ ಸೇವೆ ಸಲ್ಲಿಸುತ್ತಿದ್ದೀರಿ ಎಂದು ಶ್ಲಾಘಿಸಿದರು.

ಹೆಣ್ಣುಮಕ್ಕಳು ಚಿಕ್ಕ ವಯಸ್ಸಿನಲ್ಲಿ ಹೇಗೆ ಇರಬೇಕೆಂಬ ಕನಸನ್ನು ಜಿಲ್ಲಾ ಪಂಚಾಯಿತಿಯಿಂದ ಕೈಗೊಂಡ ಭದ್ರ ಬಾಲ್ಯ ಯೋಜನೆ ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಿರುವ ಜೊತೆಗೆ, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸಮರ್ಪಕ ಕರವಸೂಲಿ ನಡೆಸಿದ ಪರಿಣಾಮ ರಾಜ್ಯದಲ್ಲೇ ೨ನೇ ಸ್ಥಾನವನ್ನು ಜಿಲ್ಲೆ ಪಡೆದಿದ್ದು, ಇದಕ್ಕೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರಪ್ಪ ಮಾತನಾಡಿದರು. ಸಹಾಯಕ ನಿರ್ದೇಶಕ ಯೋಗೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಯೋಗೀಶ್ ಮಾತನಾಡಿ ಕಳೆದ ೩ ವರ್ಷಗಳಿಂದ ಈ ಕ್ರೀಡಾಕೂಟ ಆಯೋಜನೆ ಮಾಡಲಾಗುತ್ತಿದ್ದು, ಎಲ್ಲರೂ ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಮನಸ್ಸಿನ ಒತ್ತಡ ಕಡಿಮೆ ಮಾಡಿಕೊಳ್ಳುವುದರ ಜೊತೆಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಸಿಎಫ್ ಆಕಾಶ್, ಜಿ.ಪಂ ಉಪಕಾರ್ಯದರ್ಶಿ(ಆಡಳಿತ) ಶಂಕರ್ ಕೊರವರ್, ಕೆಆರ್‌ಡಿಎಲ್ ಕಾರ್ಯಪಾಲಕ ಅಭಿಯಂತರರಾದ ಅಶ್ವಿನಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರಾದ ಮಂಜುಳ ಹುಲ್ಲಳ್ಳಿ, ರಾಜಗೋಪಾಲ್, ನರೇಂದ್ರಕುಮಾರ್, ಸುಜಾತ, ವಿಜಯ್‌ಕುಮಾರ್, ನವೀನ್‌ಕುಮಾರ್, ಪ್ರವೀಣ್‌ಕುಮಾರ್, ಸುದೀಪ್, ದಯಾವತಿ, ವಿನುತ ಉಪಸ್ಥಿತರಿದ್ದರು.

Sports event helps government employees to serve stress-free

Share

Leave a comment

Leave a Reply

Your email address will not be published. Required fields are marked *

Don't Miss

ಹುಲಿ ಗಣತಿಯ ಸಿಬ್ಬಂದಿಗಳಿಗೆ ಹುಲಿಯ ಮೃತದೇಹ ಪತ್ತೆ

ಚಿಕ್ಕಮಗಳೂರು:  ಭದ್ರಾ ಹುಲಿ ಸಂರಕ್ಷಿತ ಪ್ರದೇಶದ,ಹೆಬ್ಬೆ ವಲಯದ ಗಂಗೆಗಿರಿ ಸರ್ವೇ ನಂಬರ್ 15 ರ ಶಿರಗುಳ ಮೀಸಲು ಅರಣ್ಯದಲ್ಲಿ ದಿನಾಂಕ 6ನೆ ತಾರೀಕು ಬೆಳಿಗ್ಗೆ ಹುಲಿ ಗಣತಿಯ ಸಿಬ್ಬಂದಿಗಳಿಗೆ ಹುಲಿಯ ಮೃತದೇಹ...

ಕಾಫಿ ಕಳ್ಳತನ : ಆರೋಪಿಗಳ ಸೆರೆ- 2 ಕಾರು ವಶ

ಮೂಡಿಗೆರೆ: ತಾಲೂಕಿನ ಗೋಣಿಬೀಡು ಸಮೀಪ ರಂಗಸ್ವಾಮಿ ಅವರ ಕಾಫಿ ತೋಟದಲ್ಲಿ ಕಾಫಿ ಕಳ್ಳತನ ಮಾಡಿದ್ದ ೬ ಮಂದಿ ಆರೋಪಿಗಳನ್ನು ಗೋಣಿಬೀಡು ಪೊಲೀಸರು ಬಂಧಿಸಿ, ಸುಮಾರು ೩.೫೦ ಲಕ್ಷ ರೂ ಮೌಲ್ಯದ ಕಾಫಿ...

Related Articles

ವಾಯುಭಾರ ಕುಸಿತದ ಪರಿಣಾಮ ಜಿಲ್ಲೆಯಲ್ಲಿ ಸಾಧಾರಣ ಮಳೆ ಸಾಧ್ಯತೆ

ಚಿಕ್ಕಮಗಳೂರು: ಕಳೆದ ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಮೋಡಕವಿದ ವಾತಾವರಣವಿದ್ದು, ಬಂಗಾಳ ಉಪಸಾಗರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ...

ಕಾಫಿನಾಡಿನ ಗಿರಿಭಾಗದಲ್ಲಿ ದಟ್ಟ ಮಂಜು

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸೂರ್ಯನ ದರ್ಶನವೇ ಇಲ್ಲದಂತಾಗಿದ್ದು, ಥಂಡಿ ವಾತಾವರಣ ಉಂಟಾಗಿದ್ದು,...

ಜಿಎಸ್‌ಬಿ ಯಿಂದ ಸಂಕ್ರಾಂತಿ ಸಂಭ್ರಮ

ಚಿಕ್ಕಮಗಳೂರು: ಸಂಕ್ರಾಂತಿ ಹಿನ್ನೆಲೆಯಲ್ಲಿ ಗೌಡಸಾರಸ್ವತ ಬ್ರಾಹ್ಮಣ ಸಮಾಜದಿಂದ ನಡೆಯುವ ಕೇಳ್ ಮೇಳ್ ಸಾಂಸ್ಕೃತಿಕ ಕಾರ್ಯಕ್ರಮ ನಗರದಲ್ಲಿ...

ಗಾಳಿಪಟ ಹಾರಾಟಕ್ಕೆ ಮನಸೋತ ಜನ

ಚಿಕ್ಕಮಗಳೂರು: ಆಕಾಶದಲ್ಲಿ ಹಾರುತ್ತಿದ್ದ ಹುಲಿ, ಜಿಂಕೆ, ಆನೆ, ಸಿಂಹ, ಚಿಟ್ಟೆಗಳು, ಪಕ್ಷಿಗಳು, ಗಿಡಮರಗಳು ಸೇರಿದಂತೆ ವಿವಿಧ...