ತರೀಕೆರೆ : ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಇ ಖಾತಾ ಸಮಸ್ಯೆ ಬಹು ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಈ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರದ ಗಮನ ಸೆಳೆಯುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ಶಾಸಕ ಜಿ.ಹೆಚ್. ಶ್ರೀನಿವಾಸ್ ಹೇಳಿದರು.
ಅವರು ತಾಲ್ಲೂಕಿನ ಕುಡ್ಲೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಭಾರತ್ ನಿರ್ಮಾಣ್ ಸೇವಾ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಕುಡ್ಲೂರು ಗ್ರಾಮದಲ್ಲಿ ಈ ಹಿಂದೆ ಇದ್ದ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ನೂರಾರು ವ?ಗಳಿಂದ ಉತ್ತಮ ಆಡಳಿತ ಮಾಡುತ್ತಾ ಬಂದಿರುವುದು ಶ್ಲಾಘನೀಯ. ನೂತನ ಕಟ್ಟಡದಲ್ಲಿ ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ಸೇವೆ ದೊರೆಯುವಂತಾಗಬೇಕು. ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಘಟಕಕ್ಕೆ ಸ್ಥಳದ ಕೊರತೆ ಇದ್ದು, ಅರಣ್ಯಾಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದೆಂದರು.
ರಾಜ್ಯ ವ್ಯಾಪಿ ಇ ಖಾತಾ ಸಮಸ್ಯೆ ಪರಿಹಾರಕ್ಕೆ ಸರ್ಕಾರದ ಆದೇಶದ ಪ್ರಕಾರ ಪ್ರಕ್ರಿಯೆ ಆರಂಭವಾಗಿದೆ. ಮೂರು ಇಲಾಖೆಗಳ ಸಹಕಾರದೊಂದಿಗೆ ಕೆಲಸ ನಿರ್ವಹಿಸಲಾಗುತ್ತಿದ್ದು, ಕೇತ್ರದ ಕುಡ್ಲೂರು, ಬಗ್ಗವಳ್ಳಿ ಹಾಗೂ ಬಾವಿಕೆರೆ ಗ್ರಾಮಗಳನ್ನು ಪ್ರಾಯೋಗಿಕವಾಗಿ ಉಪಗ್ರಾಮ/ಕಂದಾಯ ಗ್ರಾಮಗಳನ್ನಾಗಿ ಮಾಡಲು ಕ್ರಮ ತೆಗೆದುಕೊಳ್ಳಲಾಗಿದ್ದು, ಒಟ್ಟು ೧೮೭ ಗ್ರಾಮಗಳು ಈ ವ್ಯಾಪ್ತಿಗೆ ಬರಲಿದ್ದು, ಎಲ್ಲಾ ಗ್ರಾಮಗಳು ಉಪಗ್ರಾಮ/ಕಂದಾಯ ಗ್ರಾಮಗಳಾದಾಗ ಇ ಖಾತಾ ದೊರೆಯಲಿದೆ ಎಂದರು.
ಕುಡ್ಲೂರು ಕೆರೆಗಳಿಗೆ ಭದ್ರಾ ಜಲಾಯಶಯದಿಂದ ನೀರು ಕೊಡುವ ವ್ಯವಸ್ಥೆ ಮಾಡಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲ ಜೀವನ್ ಮಿ?ನ್ ಯೋಜನೆಯಡಿ ಪೈಪ್ ಲೈನ್ ಕಾಮಗಾರಿಯನ್ನು ಕಳಪೆ ಮಾಡಲಾಗಿದ್ದು, ಎ???ಸಿ ನೀಡದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿ, ಸೂಕ್ತ ಕ್ರಮ ಕೈಗೊಳ್ಳಲು ಸಿಇಓಗೆ ಪತ್ರ ಬರೆಯಲು ಅಧ್ಯಕ್ಷರಿಗೆ ತಿಳಿಸಿದರು.
ಮಾಜಿ ಗ್ರಾಪಂ ಅಧ್ಯಕ್ಷ ಕೆ.ಜಿ. ಸುರೇಶ್ ಮಾತನಾಡಿ ಸ್ವಾತಂತ್ರ ಪೂರ್ವದಲ್ಲಿ ನಿರ್ಮಾಣವಾದ ಹಳೆಯ ಕಟ್ಟಡ ಆರಂಭದಲ್ಲಿ ಶಾಲೆಯಾಗಿ ಅನೇಕರಿಗೆ ವಿದ್ಯೆಯನ್ನು ನೀಡಿದೆ. ಈ ಕಟ್ಟಡದಿಂದ ಹಲವರು ಉನ್ನತ ಹುದ್ದೆಗಳನ್ನು ಪಡೆದು ಸಾಮಾಜದಲ್ಲಿ ಗೌರವಯುತ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ನಂತರದ ದಿನಗಳಲ್ಲಿ ಆಸ್ಪತ್ರೆಯಾಗಿ ಮಾರ್ಪಟ್ಟು ಸಹಸ್ರಾರು ಜನರ ಪ್ರಾಣ ಕಾಪಾಡುವಲ್ಲಿ ಈ ಕಟ್ಟಡ ಇಂದಿಗೂ ಜೀವಂತಿಕೆಯನ್ನು ಉಳಿಸಿಕೊಂಡಿದೆ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸಾವಿತ್ರಮ್ಮ ಮಾತನಾಡಿ ನರೇಗಾದಿಂದ ಅವಕಾಶವಾದ ಕಾರಣ ಈ ಕಟ್ಟಡ ನಿರ್ಮಿಸಲು ಸಾಧ್ಯವಾಯಿತು. ಹಳೇ ಕಟ್ಟಡ ಶಿಥಿಲಗೊಂಡು ಮಳೆಯಿಂದ ಸೋರುತ್ತಿತ್ತು. ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ದಾಖಲೆಗಳನ್ನು ಸಂರಕ್ಷಿಸಲು ಹರಸಾಹಸಪಡುತ್ತಿದ್ದರು. ಈ ನೂತನ ಕಟ್ಟಡ ನಿರ್ಮಾಣದಿಂದಾಗಿ ಎಲ್ಲಾ ಸಮಸ್ಯೆಗಳು ಬಗೆಹರಿದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋದಮ್ಮ ರಂಗನಾಥ್, ಮಾಜಿ ಜಿ.ಪಂ. ಸದಸ್ಯೆ ರಾಧಮ್ಮ ಚಂದ್ರಮೌಳಿ, ಕೃಷಿಕ ಸಮಾಜದ ತಾಲ್ಲೂಕು ಅಧ್ಯಕ್ಷ ಎಂ.ಆರ್. ಚಂದ್ರಮೌಳಿ, ನರೆಗಾ ಯೋಜನಾ ಸಹಾಯಕ ನಿರ್ಧೇಶಕ ಸಿ.ಟಿ. ಯೋಗೀಶ್, ಗ್ರಾ.ಪಂ. ಉಪಾಧ್ಯಕ್ಷೆ ಮಹೇಶ್ವರಮ್ಮ, ಸದಸ್ಯರಾದ ಕೆ.ಎಸ್.ಶೈಲಾ, ರಮೇಶ್ ಕೆ.ಎಸ್., ಶಕುಂತಳ, ಸರೋಜಮ್ಮ, ದಯಾಮಣಿ, ಗಿರಿರಾಜು ಎಂ.ಜಿ., ಅಶೋಕ್, ಮಹೇ???ಂ.ಟಿ., ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಕಾಂತ ನಾಗರಾಳ, ಕಾರ್ಯದರ್ಶಿ ಹರ್ಷಿತ ಕೆ.ಎಸ್. ಹಾಗೂ ಗ್ರಾಮಸ್ಥರು ಇದ್ದರು.
Solution to the e-Khata problem in Gram Panchayats
Leave a comment