ಚಿಕ್ಕಮಗಳೂರು :
ಎಸ್.ಎಲ್.ಬೋಜೇಗೌಡ ಎರಡನೇ ಭಾರಿ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿ ಚುನಾಯಿತರಾಗಿ ದಾಖಲೆ ಮಾಡಿದ್ದಾರೆ.ಮಂಗಳೂರಿನವರಿಗೆ ಮಾತ್ರ ಸೀಮಿತವಾಗಿದ್ದ ಈ ಕ್ಷೇತ್ರದಲ್ಲಿ ಚಿಕ್ಕಮಗಳೂರಿನವರು ಅದರಲ್ಲೂ ಜನತಾದಳದ ಎಸ್.ಎಲ್.ಬಿ.ಜಯಭೇರಿ ಬಾರಿಸಿದ್ದು ಮಾತ್ರ ದಾಖಲೆ.
ನಗರಸಭೆ ಅಧ್ಯಕ್ಷರಾಗಿ ಅವಧಿಯನ್ನು ಮುಗಿಸದೆ ಅವಿಶ್ವಾಸದಿಂದ ಅಧಿಕಾರ ಕಳೆದುಕೊಂಡಿದ್ದ ಬೋಜೇಗೌಡ ಇನ್ನೂ ಯಾವ ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎಂದವರೇ ಹೆಚ್ಚು ವಿಧಾನ ಸಭಾ ಚುನಾವಣೆಯಲ್ಲಿ ಸೋತಿದ್ದರು ಜೊತೆಗೆ ರಾಜಕೀಯ ವಿರೋಧಿಗಳ ಪಡೆ ಇದರ ಮಧ್ಯೆ ಮಂಗಳೂರಿನ ಬುದ್ದಿವಂತ ಜನರ ಮಧ್ಯೆ ಒರಟು ನಡೆಯ ಬೋಜೇಗೌಡ ಯಶಸ್ವಿ ರಾಜಕಾರಣ ನಡೆಸುತ್ತಿರುವುದನ್ನು ಮೆಚ್ಚಲೇ ಬೇಕು.
ಕೇಂದ್ರ ಸಚಿವ ಕುಮಾರಸ್ವಾಮಿಯವರ ಒಡ್ಡೋಲಗ ಬಳಗದ ಖಾಯಂ ಸದಸ್ಯರು ಆದರೆ ಇತ್ತೀಚಿಗೆ ಅಷ್ಟಾಗಿ ಠಳಾಯಿಸುತ್ತಿಲ್ಲ ಅಂತರ ಕಾಯ್ದುಕೊಂಡಂತೆ ಕಾಣುತ್ತಿದ್ದಾರೆ.
ವೈಯುಕ್ತಿಕವಾಗಿ ರಾಜಕಾರಣದಲ್ಲಿ ಬಲಿಷ್ಠರಾದರೂ ಜಿಲ್ಲೆಯಲ್ಲಿ ಜನತಾದಳ ನೆಲಕಚ್ಚತ್ತಿರುವಾಗ ಇದಕ್ಕೂ ನನಗೂ ಸಂಬಂಧ ಇಲ್ಲವೇನೋ ಎಂಬಂತೆ ಇರುವುದು ಸೋಜಿಗದ ಸಂಗತಿ ಎನ್ನವ ಇವರ ರಾಜಕೀಯ ವಿರೋಧಿಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ.ಆಡಳಿತ ಪಕ್ಷದವರಿಗಿಂತ ಬೋಜೇಗೌಡರ ಧ್ವನಿಗೆ ಅಧಿಕಾರಿಗಳು ಮತ್ತು ಸರ್ಕಾರಿ ವ್ಯವಸ್ಥೆ ನಡುಗುವುದನ್ನು ಯಾರು ತಳ್ಳಿಹಾಕುವಂತಿಲ್ಲ.ಬಿಜೆಪಿ ಅಧಿಕಾರದಲ್ಲಿ ಇರಲಿ ಪ್ರಸ್ತುತ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರೂ ಬೋಜೇಗೌಡರ ದಾಳಕ್ಕೆ ಮಹತ್ವ ಸಿಗುವಂತಹ ವಾತಾವರಣ ನಿರ್ಮಿಸಿಕೊಂಡಿರುವ ಬೋಜೇಗೌಡರ ಕುದುರೆನ ಕಟ್ಟಿ ಹಾಕುವ ಜೀನಾವು ಸದ್ಯಕ್ಕೆ ಸಿಗುತ್ತಿಲ್ಲ.
Leave a comment