Home Latest News ಸರ್ ಎಂ ವಿ ದೇಶಕ್ಕೆ ನೀಡಿರುವ ಕೊಡುಗೆ ಮುಂದಿನ ಪೀಳಿಗೆಗೆ ಉತ್ತಮ ಸಂದೇಶ
Latest NewschikamagalurHomenamma chikmagalur

ಸರ್ ಎಂ ವಿ ದೇಶಕ್ಕೆ ನೀಡಿರುವ ಕೊಡುಗೆ ಮುಂದಿನ ಪೀಳಿಗೆಗೆ ಉತ್ತಮ ಸಂದೇಶ

Share
Share

ಚಿಕ್ಕಮಗಳೂರು : ಸರ್ ಎಂ ವಿಶ್ವೇಶ್ವರಯ್ಯನವರು ದೇಶಕ್ಕೆ ನೀಡಿರುವ ಕೊಡುಗೆಗಳು ಮುಂದಿನ ಪೀಳಿಗೆಗೆ ಸರ್ವೋತ್ತಮ ಸಂದೇಶವಾಗಿದೆ ಎಂದು ಕರ್ನಾಟಕ ಇಂಜಿನಿಯರ್‌ಗಳ ಫೆಡರೇಷನ್ ಅಧ್ಯಕ್ಷ ಹಾಗೂ ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ಎಚ್.ಎಂ.ಶಿವಪ್ರಕಾಶ್ ಹೇಳಿದರು.

ಅವರು ನಗರದ ಪಿಡಬ್ಲ್ಯೂಡಿ ಕಚೇರಿ ಆವರಣದಲ್ಲಿ ಕರ್ನಾಟಕ ಇಂಜಿನಿಯರ್‌ಗಳ ಫೆಡರೇಷನ್ ಹಾಗೂ ಇಂಜಿನಿಯರ್‌ಗಳ ಸೇವಾ ಸಂಘ ಸೋಮವಾರ ಹಮ್ಮಿಕೊಂಡಿದ್ದ ಸರ್‌ಎಂವಿ ಅವರ ೧೬೫ನೇ ಜನ್ಮದಿನಾಚರಣೆ ಯಲ್ಲಿ ವಿಶ್ವೇಶ್ವರಯ್ಯನವರ ಪುತ್ಥಳಿಗೆ ಪುಷ್ಪಾರ್ಪಣೆ ಮಾಡಿ ಮಾತನಾಡಿದರು.

ಕರ್ತವ್ಯನಿಷ್ಟೆ, ಪ್ರಾಮಾಣಿಕತೆಗೆ ಹೆಸರಾಗಿದ್ದ ವಿಶ್ವೇಶ್ವರಯ್ಯನವರ ಆದರ್ಶ ವ್ಯಕ್ತಿತ್ವವನ್ನು ಶಿಕ್ಷಣದಲ್ಲಿ ಅಳವಡಿಸಿದರೆ ಮುಂದಿನ ಪೀಳಿಗೆಯ ಮಕ್ಕಳ ಭವಿಷ್ಯ ಉಜ್ವಲವಾಗಲು ಸಹಕಾರಿಯಾಗುತ್ತದೆ. ಇಂಜಿನಿಯರಿಂಗ್ ನಲ್ಲಿ ಹೊಸ ಆವಿಷ್ಕಾರಗಳನ್ನು ತಂದು ಅದರೊಂದಿಗೆ ನೀರಾವರಿ ಯೋಜನೆಗಳು, ಬೃಹತ್ ಡ್ಯಾಂ ನಿರ್ಮಾಣ, ಇರಿಗೇಶನ್ ನಿರ್ವಹಣೆ ಮಾಡಿದಲ್ಲಿ ಇಂಜಿನಿಯರಿಂಗ್, ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಜೊತೆ ದೇಶದ ಪ್ರಗತಿಗೆ ಪೂರಕವಾಗಿರುತ್ತದೆ ಎಂದರು.

ಕೇಂದ್ರ ಸರ್ಕಾರ ಈಗಾಗಲೆ ದೇಶದಲ್ಲಿ ಉತ್ತಮ ಹೈವೇ ರಸ್ತೆಗಳನ್ನು ನಿರ್ಮಿಸುತ್ತಿದ್ದು ಈ ಸಂಬಂಧ ಭಾರತ್ ಮಾಲಾ ಯೋಜನೆಯಡಿ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೂ ಕ್ವಾಟರ್‌ಲ್ಯಾಂಗಲ್ ರಸ್ತೆಗಳನ್ನು ನಿರ್ಮಿಸಿ ಅಭಿವೃದ್ದಿಯತ್ತ ಹೆಜ್ಜೆ ಹಾಕುತ್ತಿದೆ. ಇದೇರೀತಿ ಪಶ್ಚಿಮಘಟ್ಟಗಳು ಅಭಿವೃದ್ದಿ ಹೊಂದಲು ರಾಯಚೂರು-ಮಂಗಳೂರು ಹೆದ್ದಾರಿ ಕಾರಿಡಾರ್‌ನ್ನು ನಿರ್ಮಿಸಲು ಮುಂದಾದಲ್ಲಿ ದಕ್ಷಿಣ ಭಾರತದಲ್ಲಿ ಉತ್ತಮ ಸಂಚಾರ ವ್ಯವಸ್ಥೆಗೆ ಅನುಕೂಲವಾಗಲಿದೆ.

ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲವಾಗುವಂತೆ ಸರ್ ಎಂ ವಿ ಅವರು ಹಲವಾರು ಯೋಜನೆ ಹಮ್ಮಿಕೊಂಡು ಭದ್ರಾವತಿ ಕಬ್ಬಿಣದ ಅದಿರು ಕಾರ್ಖಾನೆ ಅಭಿವೃದ್ದಿಗೆ ಒತ್ತುಕೊಟ್ಟಿದ್ದರು ಅದು ಸ್ಥಗಿತಗೊಂಡಿದ್ದರೂ ಸಹ ಪುನಃ ಅದನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಭಿಪ್ರಾಯಿಸಿದ್ದು ಎಲ್ಲೆಡೆ ರಸ್ತೆಗಳು ಅಭಿವೃದ್ದಿಯಾದಲ್ಲಿ ಶಿಕ್ಷಣ, ವೈದ್ಯಕೀಯ ಮತ್ತು ಕೃಷಿ ಅಭಿವೃದ್ದಿಗೆ ಪೂರಕವಾಗುತ್ತದೆ ಎಂದರು.

ಇಂಜಿನಿಂiiರ್‌ಗಳಾ ಇಂಜಿನಿಯರ್ ಗಳಾದ ಮಲ್ಲಿಕಾರ್ಜುನ್, ಗವಿರಂಗಪ್ಪ, ವೇಣುಗೋಪಾಲ್,ದಾವೂದ್ ಇದ್ದರು.

Sir MV’s contribution to the country is a good message for the next generation.

Share

Leave a comment

Leave a Reply

Your email address will not be published. Required fields are marked *

Don't Miss

ಇಂಧನ ನಿಗಮದ ಅಧ್ಯಕ್ಷರಾಗಿ ಟಿ.ಡಿ.ರಾಜೇಗೌಡರ ಮತ್ತೆ ನೇಮಕ

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃಧ್ಧಿ ನಿಗಮದ ಅಧ್ಯಕ್ಷ ಸ್ಥಾನದಲ್ಲಿ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡರನ್ನು ಮುಂದುವರೆಯಲು ಆದೇಶವನ್ನು ನೀಡಲಾಗಿದೆ. ರಾಜೇಗೌಡರನ್ನು 2024 ರಲ್ಲಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಎರಡು ವರ್ಷದ ಅವಧಿಯ ನೇಮಕಾತಿ...

ಸಿ.ಡಿ.ಎ ಮಾಜಿ ಅಧ್ಯಕ್ಷ ಆನಂದ್ ಮೇಲೆ ಹಲ್ಲೆ …?

ಚಿಕ್ಕಮಗಳೂರು: ಮಾಜಿ ಸಚಿವ ಸಿ.ಟಿ.ರವಿ ಆಪ್ತ ಸುದರ್ಶನ್ ಬಲಗೈ ಬಂಟ ಹಾಲಿ ಮೂಗ್ತಿಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಆನಂದ್ ನ ರಸಲೀಲೆ ನಡೆಸುತ್ತಿದ್ದಾರೆ ಎಂದು ಕೆಲವರು ಹೋಮ್ ಸ್ಟೇಗೆ ನುಗ್ಗಿ ಗಲಾಟೆ...

Related Articles

ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ನಗ-ನದದು ಕಳವು

ಚಿಕ್ಕಮಗಳೂರು : ತಾಲೂಕಿನ ಕಂಚೇನಹಳ್ಳಿಯಲ್ಲಿ ಹಾಡಹಗಲೇ ಕಳ್ಳತನ ನಡೆದಿದ್ದು ರೈತ ಉಮೇಶ್ ಎಂಬುವವರ ಮನೆಯಿಂದ ಲಕ್ಷಾಂತರ...

ಲಾಭಾಂಶ ಆಮಿಷ ಯುವಕನಿಗೆ ಲಕ್ಷಾಂತರ ರೂಪಾಯಿ ವಂಚನೆ

ಚಿಕ್ಕಮಗಳೂರು: ಟ್ರೇಡಿಂಗ್ ಹೆಸರಿನಲ್ಲಿ ಹೆಚ್ಚಿನ ಲಾಭಾಂಶ ನೀಡುವ ಆಮಿಷವೊಡ್ಡಿ ಯುವಕನೊಬ್ಬನಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ...

ಸಿಡಿಎ ಅಧ್ಯಕ್ಷರಾಗಿ ಎಚ್‌.ಪಿ. ಮಂಜೇಗೌಡ ನೇಮಕ

ಚಿಕ್ಕಮಗಳೂರು: ಚಿಕ್ಕಮಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಸಿಡಿಎ) ಚಿಕ್ಕಮಗಳೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಪಿ. ಮಂಜೇಗೌಡ ಅವರನ್ನು...

ಕಾಂಗ್ರೆಸ್ ನಲ್ಲಿ ಸಿ.ಡಿ.ಎ. ಫೈಟ್ – ಕಾಂಗ್ರೆಸ್ ನಲ್ಲಿ ಸಿ.ಡಿ.ಎ. ಫೈಟ್ – ರಾಮಚಂದ್ರ ಬಿಗಿ ಪಟ್ಟು

ಚಿಕ್ಕಮಗಳೂರು: ಹಿರೇಮಗಳೂರು ರಾಮಚಂದ್ರ ಸಿ.ಡಿ.ಎ.ಅಧ್ಯಕ್ಷ ಸ್ಥಾನ ಪಡೆಯಲು ಬಿಗಿ ಪಟ್ಟು ಹಿಡಿದು ಒತ್ತಾಯ ಮಾಡುತ್ತಿದ್ದಾರೆ. ಕಳೆದ...