ಚಿಕ್ಕಮಗಳೂರು : ಮೂಡಿಗೆರೆ ಅಬಕಾರಿ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಪಟ್ಟಣದ ಬೇಲೂರು ರಸ್ತೆಯ ಪೃಥ್ವಿ ಎಂ ಗೌಡ ಬಿನ್ ಮಹಿಪಾಲ್ ಮನೆಯಲ್ಲಿ ಅಕ್ರಮವಾಗಿ ಗಾಂಜಾ ಗಿಡವನ್ನು ಬೆಳೆದಿರುವುದನ್ನು ಪತ್ತೆ ಮಾಡಿ ಸುಮಾರು 707 ಗ್ರಾಂ ಅನ್ನು ವಶ ಪಡಿಸಿಕೊಂಡು ಸದರಿ ಆರೋಪಿಯನ್ನು ಎನ್ ಡಿ ಪಿ ಎಸ್ ಕಾಯ್ದೆ ಅಡಿ ಬಂಧಿಸಿ ಪ್ರಕರಣವನ್ನು ದಾಖಲಿಸಿ ಚಿಕ್ಕಮಗಳೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗಕ್ಕೆ ಬಂಧನಕ್ಕೆ ಒಪ್ಪಿಸಲಾಗಿದೆ.
ಅಬಕಾರಿ ಉಪ ಅಧೀಕ್ಷಕರಾದ ಕೀರ್ತಿ ಕುಮಾರ್ , ಅಬಕಾರಿ ನಿರೀಕ್ಷಕರಾದ ಲೋಕೇಶ ಸಿ ಸಿಬ್ಬಂದಿಗಳಾದ ರಮೇಶ್
ತುಳಜಣ್ಣನವರ್, ಶಂಕರ ಗುರುವ ,ಮತ್ತು ವಾಹನ ಚಾಲಕರಾದ ಪ್ರವೀಣ್ ಇವರು ಭಾಗಿಯಾಗಿರುತ್ತಾರೆ ಪ್ರಕರಣವನ್ನು ಅಬಕಾರಿ ನಿರೀಕ್ಷಕರು ಮೂಡಿಗೆರೆ ಉಪ ವಿಭಾಗ ಇವರು ದಾಖಲಿಸಿರುತ್ತಾರೆ.
Leave a comment