ಚಿಕ್ಕಮಗಳೂರು : ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಗೆದ್ದು ಬೀಗಿದ ದೇವೇಂದ್ರ ಅವರಿಗೆ ಎಂಎಲ್.ಸಿ ಭೋಜೇಗೌಡರ ಗುಮ್ಮ ಕಾಡುತ್ತಿದೆ. ಪೈಪೋಟಿ ಭರಾಟೆಯಲ್ಲಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿದ್ದ ದೇವೇಂದ್ರ ಭೋಜೇಗೌಡರ ಮೇಲೆ ಮಾಡಿದ ಆರೋಪಗಳು ಇದೀಗ ಅವರಿಗೆ ಮುಳುವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮಾಹಿತಿಯೊಂದರ ಪ್ರಕಾರ ಸರ್ಕಾರಿ ಉಪನ್ಯಾಸಕರಾಗಿ ರುವ ದೇವೇಂದ್ರರಿಗೆ ನೋಟೀಸ್ ಕೊಟ್ಟಿದೆ ಎನ್ನಲಾಗಿದೆ.
ಮಳೆ ಬಿಟ್ಟರು ಮರದ ಹನಿ ನಿಂತಿಲ್ಲ ಎಂಬ ಮಾತಿನಂತೆ ನೌಕರರ ಚುನಾವಣೆ ಮುಗಿದರೂ ನೂತನ ಅಧ್ಯಕ್ಷರಿಗೆ ಕಾಟ ತಪ್ಪಲಾರದು ಎಂಬಂತಾಗಿದೆ, ಎರಡನೇ ಬಾರಿ ಅಯ್ಕೆ ಆಗಿರುವ ದೇವೇಂದ್ರರವರಿಗೆ ಪಿ.ಯು.ಬೋರ್ಡ್ ನಿಂದ ನೋಟಿಸ್ ನೀಡಿದೆ ಎಂಬ ಮಾಹಿತಿ ತಿಳಿದು ಬಂದಿದ್ದು ದೇವೇಂದ್ರ ದಿಢೀರ್ ಬೆಂಗಳೂರಿಗೆ ದೌಡಾಯಿಸಿದ್ದಾರಡೆ
ನೌಕರರ ಚುನಾವಣೆ ವೇಳೆ ಪತ್ರಿಕಾ ಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ರನ್ನು ನಿಂದಿಸಿದ್ದು, ಸರ್ಕಾರಿ ನೌಕರರಾಗಿ ಜನಪ್ರತಿನಿಧಿಗಳಿಗೆ ಅವಮಾನ ಮಾಡಿರುವ ನಿಮ್ಮ ಮೇಲೆ ಏಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಎಂದು ಕಾರಣ ಕೇಳಿ ಶೊಕಾಸ್ ನೋಟಿಸ್ ನೀಡಲಾಗಿದೆ ಎಂದು ನೌಕರರು ಮಾತನಾಡುತ್ತಿದ್ದಾರೆ. ಈ ನಡುವೆ ಭೋಜೇಗೌಡ ಹಠಕ್ಕೆ ಬೀದಿದ್ದು ದೇವೇಂದ್ರ ವಿರುದ್ಧ ಕಾನೂನು ಹೋರಾಟ ಮಾಡಲು ಮುಂದಾಗಿದ್ದಾರೆ
Leave a comment