Home namma chikmagalur chikamagalur ಶಾರ್ಟ್ ಸರ್ಕ್ಯೂಟ್ ಗೆ ಬೆಂಕಿ-ಫರ್ನಿಚರ್ ಅಂಗಡಿಗೆ ಬೆಂಕಿ
chikamagalurHomeLatest Newsnamma chikmagalur

ಶಾರ್ಟ್ ಸರ್ಕ್ಯೂಟ್ ಗೆ ಬೆಂಕಿ-ಫರ್ನಿಚರ್ ಅಂಗಡಿಗೆ ಬೆಂಕಿ

Share
Share

ಚಿಕ್ಕಮಗಳೂರು: ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮವಾಗಿ ಫರ್ನಿಚರ್ ಅಂಗಡಿಯೊಂದು ಬೆಂಕಿಗಾಹುತಿಯಾಗಿರುವ ಘಟನೆ ಚಿಕ್ಕಮಗಳೂರು ನಗರದ ಐಜಿ ರಸ್ತೆಯಲ್ಲಿ ನಡೆದಿದೆ.

ಈ ಆಕಸ್ಮಿಕ ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಪೀಠೋಪಕರಣಗಳು ಸುಟ್ಟು ಕರಕಲಾಗಿದ್ದು, ಅಂಗಡಿಯಲ್ಲಿದ್ದ ಹಾಸಿಗೆ, ಬೀರು, ಕುಷನ್, ಸೋಫಾಸೆಟ್ ಹಾಗೂ ದಿವಾನ್ ಕಾಟ್ಗಳು ಬೆಂಕಿಯ ಜ್ವಾಲೆಗೆ ಸಿಲುಕಿ ನಶಿಸಿಹೋಗಿವೆ.

ಅಂಗಡಿಯಲ್ಲಿ ಹಾಸಿಗೆ ಮತ್ತು ಕುಷನ್‌ನಂತಹ ಬೇಗನೇ ಬೆಂಕಿ ಹತ್ತಿಕೊಳ್ಳುವ ವಸ್ತುಗಳಿದ್ದ ಕಾರಣ ಜ್ವಾಲೆಯು ಕ್ಷಣಾರ್ಧದಲ್ಲಿ ವ್ಯಾಪಿಸಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಅಂಗಡಿಯ ಮಾಲೀಕರು ಮತ್ತು ಸ್ಥಳೀಯರು ಸಾಧ್ಯವಾದಷ್ಟು ವಸ್ತುಗಳನ್ನು ರಸ್ತೆಗೆ ತಂದಿರಿಸುವ ಮೂಲಕ ಉಳಿಸಿಕೊಳ್ಳುವ ಪ್ರಯತ್ನ ಮಾಡಿದರು.

ಅದೃಷ್ಟವಶಾತ್ ಇಡೀ ರಾತ್ರಿ ಸಾಧಾರಣ ಮಳೆಯಾಗಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸುವುದು ತಪ್ಪಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಎರಡು ವಾಹನಗಳ ಸಹಾಯದಿಂದ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Short circuit causes fire in furniture shop

Share

Leave a comment

Leave a Reply

Your email address will not be published. Required fields are marked *

Don't Miss

ಸರ್ಕಾರಿ ಶಾಲೆಗಳ ವಿಲೀನ ವಿರೋಧಿಸಿ ಪ್ರತಿಭಟನೆ

ಚಿಕ್ಕಮಗಳೂರು: ತಾಲೂಕಿನ ಅಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಸರಿಕೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಮೈಲಿಮನೆ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ವಿಲೀನಗೊಳಿಸುವುದನ್ನು ವಿರೋಧಿಸಿ ಬುಧವಾರ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ಕೆಸರಿಕೆಯ...

ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ಧರಣಿ

ಚಿಕ್ಕಮಗಳೂರು:  ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ ಮತ್ತು ಕಾರ್ಮಿಕ ಕಲ್ಯಾಣ ಮಂಡಳಿಗೆ ಮಾಡುತ್ತಿರುವ ದ್ರೋಹವನ್ನು ಸರಿಪಡಿಸುವಂತೆ ಆಗ್ರಹಿಸಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಬುಧವಾರ ಕಾರ್ಮಿಕರು ಪ್ರತಿಭಟನೆ...

Related Articles

ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದವರ ಬಂಧನ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮತಾಂತರದ ಭೂತ ಮತ್ತೆ ದರ್ಶನ ನೀಡಿದೆ. ವಾರದ ಸಂತೆಯಲ್ಲಿ ವ್ಯಾಪಾರಕ್ಕೆ ಬಂದಿದ್ದ...

ಏ.2ಕ್ಕೆ ಕಡೂರಿನಲ್ಲಿ ದೇವರದಾಸಿಮಯ್ಯ ಜಯಂತಿ

ಚಿಕ್ಕಮಗಳೂರು: ಜಿಲ್ಲಾ ಮಟ್ಟದ ೧೦೪೬ನೇ ಶ್ರೀ ದೇವರ ದಾಸಿಮಯ್ಯನವರ ಜಯಂತಿ ಮತ್ತು ದೇವಾಂಗ ಜನಜಾಗೃತಿ ಹಾಗೂ...

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಉಳಿಸುವಂತೆ ಆಗ್ರಹಿಸಿ ಧರಣಿ

ಚಿಕ್ಕಮಗಳುರು: ಸರ್ಕಾರಿ ಶಾಲೆಗಳನ್ನು ಮುಚ್ಚುವ ಮೂಲಕ ಬಡ, ರೈತ, ಕೂಲಿ ಕಾರ್ಮಿಕ ಮಕ್ಕಳನ್ನು ಶಿಕ್ಷಣದಿಂದ ವಂಚಿಸಲಾಗುತ್ತಿದೆ...

ಗ್ಯಾಸ್ ಏಜೆನ್ಸಿ-ಗೋದಾಮಿನಿಂದ ಸಿಲಿಂಡರ್ ವಿತರಣೆ ಇಲ್ಲ

ಚಿಕ್ಕಮಗಳೂರು:  ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ಎಂದಿನಂತೆ ಜೇಷ್ಠತೆ ಆಧಾರದ ಮೇಲೆ ಗ್ರಾಹಕರ ಮನೆಗಳಿಗೆ ಸಂಬಂಧಿಸಿದ ಗ್ಯಾಸ್...