ಚಿಕ್ಕಮಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆ ಕಳೆದ ಮೂರು ವರ್ಷಗಳ ಹಿಂದೆ ನಡೆದಿತ್ತು ಅದರಲ್ಲಿ ಕೇವಲ ಆರು ಮತಗಳ ಅಂತರದಿಂದ ಬಿಜೆಪಿಯ ಎಂ.ಕೆ. ಪ್ರಾಣೇಶ್ ಜಯಗಳಿಸಿ ಕಾಂಗ್ರೆಸ್ ನ ಗಾಯತ್ರಿ ಶಾಂತೇಗೌಡ ಸೋಲು ಅನುಭವಿಸಿದ್ದರು.
ಈ ಸಂಬಂಧ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಗಾಯಿತ್ರಿಯವರು ಚುನಾವಣಾ ತಕರಾರು ಸಲ್ಲಿಸಿದ್ದು ಇದು ಸುಪ್ರೀಂ ಕೋರ್ಟ್ ಅಂಗಳ ತಲುಪಿತ್ತು .ಆದರೆ ಸುಪ್ರೀಂ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿ ಯಾವ ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದೀರಿ ಅಲ್ಲೆ ಬಗೆಹರಿಸಿ ಕೊಳ್ಳಿ ಎಂದು ನಿರ್ದೇಶನದ ಮೇರೆಗೆ ಹೈಕೋರ್ಟ್ ನಲ್ಲಿ ಸುದೀರ್ಘ ವಾದಗಳು ನಡೆದು ಇಂದು ಹೈಕೋರ್ಟ್ ಮರು ಮತ ಏಣಿಕೆಗೆ ಆದೇಶ ನೀಡಿ ಮೂವತ್ತು ದಿನಗಳ ಒಳಗೆ ಮತ ಏಣಿಕೆಗೆ ಆದೇಶ ಮಾಡಿದೆ.
ಸರ್ಕಾರದ ನಾಮನಿರ್ದೇಶನ ಸದಸ್ಯರು ಮತ ಚಲಾಯಿಸಿದ್ದರ ಬಗ್ಗೆ ತಕರಾರು ನಡೆದಿದ್ದು ಯಾರ ಪರ ಫಲಿತಾಂಶ ಬಂದರು ಸುಪ್ರೀಂ ಕೋರ್ಟ್ ನಲ್ಲಿ ಮತ್ತೊಮ್ಮೆ ತಕರಾರು ಸಲ್ಲಿಸಿದರು ಅಚ್ಚರಿ ಪಡುವಂತಿಲ್ಲ.
Setback for M.K. Pranesh – High Court orders recount of votes
Leave a comment