Home namma chikmagalur chikamagalur ಅಂತರಘಟ್ಟೆ ಗ್ರಾಮದಲ್ಲಿ ಸರಣಿ ಕಳ್ಳತನ
chikamagalurHomeLatest Newsnamma chikmagalur

ಅಂತರಘಟ್ಟೆ ಗ್ರಾಮದಲ್ಲಿ ಸರಣಿ ಕಳ್ಳತನ

Share
Share

ಅಜ್ಜಂಪುರ:  ತಾಲೂಕಿನ ಅಂತರಘಟ್ಟೆ ಗ್ರಾಮದಲ್ಲಿ ಒಂದೇ ರಾತ್ರಿ ಸರಣಿ ಕಳ್ಳತನ ನಡೆದಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ದುರ್ಗಾಂಬಾದೇವಿ ಸುಕ್ಷೇತ್ರವಾಗಿರುವ ಈ ಗ್ರಾಮದಲ್ಲಿ ರಾತ್ರಿ ಖದೀಮರು ಏಳು ಮನೆಗಳ ಬೀಗ ಮುರಿದು ನಗದು ಹಾಗೂ ಚಿನ್ನಾಭರಣಗಳನ್ನು ದೋಚಿದ್ದಾರೆ.

ಗ್ರಾಮದ ಶಂಕರನಾರಾಯಣ ಅವರ ಮನೆಯ ಗೇಟಿನ ಬೀಗ ಮುರಿದು ಒಳನುಗ್ಗಿದ ಕಳ್ಳರು, ಸುಮಾರು 50 ಸಾವಿರ ರೂಪಾಯಿ ನಗದು ಮತ್ತು ಒಂದು ಜೊತೆ ಚಿನ್ನದ ಕಿವಿ ಓಲೆಯನ್ನು ಕಳ್ಳತನ ಮಾಡಿದ್ದಾರೆ.

ಇದೇ ರೀತಿ ಕುಬೇರಪ್ಪ ಎಂಬುವವರ ಮನೆಯಿಂದ 5 ಸಾವಿರ ರೂಪಾಯಿಗಳನ್ನು ಕಳವು ಮಾಡಲಾಗಿದೆ. ಉಳಿದ ಐದು ಮನೆಗಳಲ್ಲೂ ಬೀಗ ಮುರಿಯಲಾಗಿದ್ದರೂ, ಅಲ್ಲಿ ಯಾವುದೇ ಬೆಲೆಬಾಳುವ ವಸ್ತುಗಳು ಸಿಗದ ಕಾರಣ ಕಳ್ಳರು ಬರಿಗೈಲಿ ವಾಪಸ್ಸಾಗಿದ್ದಾರೆ.

ಮನೆಯವರು ಊರಿನಲ್ಲಿ ಇಲ್ಲದ ಸಮಯವನ್ನು ಹೊಂಚು ಹಾಕಿ ಈ ಕೃತ್ಯ ಎಸಗಲಾಗಿದೆ. ಅಂತರಘಟ್ಟೆ ಗ್ರಾಮದಲ್ಲಿ ಇಂತಹ ಸರಣಿ ಕಳ್ಳತನದ ಪ್ರಕರಣ ಇದೇ ಮೊದಲು ಎನ್ನಲಾಗಿದ್ದು, ಗ್ರಾಮದ ಹಿರಿಯರು ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಪೊಲೀಸ್ ಹೊರಠಾಣೆ ಇದ್ದರೂ ಇಷ್ಟು ದೊಡ್ಡ ಮಟ್ಟದ ಕಳ್ಳತನ ನಡೆದಿರುವುದು ನಿವಾಸಿಗಳಲ್ಲಿ ಭಯ ಹುಟ್ಟಿಸಿದೆ.

ಇಲ್ಲಿನ ದುರ್ಗಾಂಬಾ ದೇವಾಲಯದ ಹುಂಡಿಗಳಲ್ಲಿ ಲಕ್ಷಾಂತರ ರೂಪಾಯಿ ಹಣವಿದ್ದು, ಇತ್ತೀಚೆಗಷ್ಟೇ ಜಾತ್ರೆ ನಡೆದಿದ್ದರಿಂದ ಹುಂಡಿಗಳು ತುಂಬಿವೆ. ಹೀಗಾಗಿ ಮುಜರಾಯಿ ಇಲಾಖೆ ಹಾಗೂ ಪೊಲೀಸರು ದೇವಾಲಯಕ್ಕೆ ಸೂಕ್ತ ಬಂದೋಬಸ್ತ್ ಒದಗಿಸಬೇಕು. ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Serial theft in Antaraghatte village

Share

Leave a comment

Leave a Reply

Your email address will not be published. Required fields are marked *

Don't Miss

ಕಾರ್ಮಿಕ ವಿರೋಧಿ ನಡೆ ಖಂಡಿಸಿ ಬೃಹತ್ ಪ್ರತಿಭಟನೆ

ಚಿಕ್ಕಮಗಳೂರು:  ಕಾರ್ಮಿಕ ವಿರೋಧಿ ನಡೆ ಅನುಸರಿಸುತ್ತಿರುವ ಸರ್ಕಾರಗಳ ವಿರುದ್ಧ ಗುರುವಾರ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಎಐಟಿಯುಸಿ, ಪ್ಲಾಂಟೇಷನ್ ಯೂನಿಯನ್, ಬಿಸಿಯೂ ಟ-ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ನೂರಾರು ಕಾರ್ಮಿಕರು ಧರಣಿ ನಡೆಸಿ, ಅಂಚೆ...

ಮಾನಸಿಕ-ದೈಹಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ

ಚಿಕ್ಕಮಗಳೂರು:  ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ...

Related Articles

ಬೀರೂರಿನಲ್ಲಿ ಅನುಮಾನದ ಭೂತಕ್ಕೆ ಪತ್ನಿ ಕೊಲೆ

ಚಿಕ್ಕಮಗಳೂರು: ಪ್ರೀತಿಸಿ ಮದುವೆಯಾಗಿ 12 ವರ್ಷಗಳ ಸುಖ ಸಂಸಾರ ನಡೆಸಿದ್ದ ದಂಪತಿಗಳ ನಡುವೆ ಅನುಮಾನದ ಕಿಚ್ಚು...

ನಿಂತಿದ್ದ ಕಂಟೇನರ್ ಗೆ ಕಾರು ಡಿಕ್ಕಿ-ವ್ಯಕ್ತಿ ಸಾವು

ಚಿಕ್ಕಮಗಳೂರು: ನಿಂತಿದ್ದ ಕಂಟೇನರ್ ಗೆ ಕಾರು ಅಪ್ಪಳಿಸಿ ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ. ಫೆ 17 ರ ಬೆಳಗಿನ...

ನಿವೃತ್ತ ಮಹಿಳಾ ನೌಕರಿಗೆ 1,50,000 ರೂ ವಂಚನೆ

ಚಿಕ್ಕಮಗಳೂರು: ಬ್ಯಾಂಕ್ ಆಫ್ ಬರೋಡಾದ ನಿವೃತ್ತ ಮಹಿಳಾ ನೌಕರರೊಬ್ಬರಿಗೆ ಫೇಸ್ ಬುಕ್ ನಲ್ಲಿ BOB PENSION...

ವಿಮಾ ಪರಿಹಾರ ಬಡ್ಡಿ ಸಹಿತ ನೀಡಲು ಆದೇಶ

ಚಿಕ್ಕಮಗಳೂರು: ಶಿಕ್ಷಕರ ಸಹಕಾರ ಬ್ಯಾಂಕ್‌ನಿಂದ ಸಾಲ ಪಡೆದ ಸರ್ಕಾರಿ ಶಿಕ್ಷಕರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಸಾಲ ಮರುಪಾವತಿಗೆ...