ಚಿಕ್ಕಮಗಳೂರು :
ಹಿಂದೂಪರ ಸಂಘಟನೆಗಳಲ್ಲಿ ಒಡಕು ಇಂದು ನೆನ್ನೆಯದಲ್ಲಾ ಇದಕ್ಕೆ ಮತ್ತೊಂದು ಹೊಸ ಸೇರ್ಪಡೆ ಶ್ರೀರಾಮ ಸೇನೆಯಲ್ಲಿ ಉಂಟಾಗಿರುವ ಲೇಟೆಸ್ಟ್ ಭಿನ್ನಾಭಿಪ್ರಾಯ….
ಹೌದು ಕಳೆದ 20 ವರ್ಷಗಳ ಹಿಂದೆ ಸಂಘ ಪರಿವಾರದಿಂದ ಬೇರ್ಪಟ್ಟು ಪ್ರಮೋದ್ ಮುತಾಲಿಕ್ ಸಾರಥ್ಯದಲ್ಲಿ ಸ್ಥಾಪನೆಗೊಂಡ ಶ್ರೀರಾಮಸೇನೆಯಲ್ಲಿ ಇದೀಗ ಒಡಕು ಮೂಡಿದೆ. ಸೇನೆಯ ರಾಜ್ಯ ಅಧ್ಯಕ್ಷ ಗಂಗಾಧರ ಕುಲಕರ್ಣಿ ವಿರುದ್ಧ ಇದೀಗ ಒಂದು ಗುಂಪು ಸಿಡಿದೆದ್ದಿದೆ. ಅದರಲ್ಲೂ ಶ್ರೀರಾಮ ಸೇನೆ ಪ್ರಬಲವಾಗಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದೀಗ ಅಸಮಾಧಾನ ಬುಗಿಲೆದ್ದಿದೆ. ಇತ್ತೀಚೆಗೆ ಮುಂಬರುವ ದತ್ತಮಾಲಾ ಅಭಿಯಾನದ ಪತ್ರಿಕಾಗೋಷ್ಠಿಯ ನಂತರ ನಡೆದ ಬೆಳವಣಿಗೆಗಳು ಸಂಘಟನೆಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಸಾಭೀತು ಪಡಿಸಿದೆ.
ಇದೀಗ ಮತ್ತೊಂದು ಗುಂಪು ತಾವು ಪ್ರತ್ಯೇಕವಾಗಿ ದತ್ತಮಾಲಾ ಅಭಿಯಾನ ನಡೆಸುವುದಾಗಿ ಹೇಳಿಕೊಂಡಿದೆ. ಚಿಕ್ಕಮಗಳೂರು ಹಾಸನ ಶಿವಮೊಗ್ಗ ವಲಯ ಪ್ರಮುಖ್ ರಂಜಿತ್ ಶೆಟ್ಟಿ ನೇತೃತ್ವದ 20 ಕ್ಕೂ ಹೆಚ್ಚು ಜನ ಶ್ರೀರಾಮಸೇನೆ ಪದಾಧಿಕಾರಿಗಳ ತಂಡ ಜಿಲ್ಲಾಡಳಿತಕ್ಕೆ ಪ್ರತ್ಯೇಕ ಆಚರಣೆ ಮಾಡುವುದಾಗಿ ತಿಳಿಸಿದೆ.
ಮೂಲದ ಪ್ರಕಾರ ಪ್ರಸ್ತುತ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ತಮಗೆ ಬೇಕಾದವರನ್ನು ಮಾತ್ರ ಮುಂಚೂಣಿ ಸ್ಥಾನಗಳಲ್ಲಿ ಇಟ್ಟುಕೊಂಡು ಕೆಲವರನ್ನು ಜವಾಬ್ದಾರಿಯಿಂದ ವಿಮುಕ್ತಿ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ
ಇದರಿಂದ ಒಂದು ಗುಂಪು ಅದರಲ್ಲು ಚಿಕ್ಕಮಗಳೂರಿನ ರಂಜಿತ್ ಶೆಟ್ಟಿ ಹಾಗೂ ತಂಡ ಇದೀಗ ಕೆಂಡಾಮಂಡಲವಾಗಿದ್ದು ದತ್ತಮಾಲಾ ಅಭಿಯಾನವನ್ನೇ ಪ್ರತ್ಯೇಕವಾಗಿ ಮಾಡಲು ನಿರ್ಧರಿಸಿದೆ. ಮುಂದಿನ ತಿಂಗಳು ನವಂಬರ್ 4 ರಿಂದ ಆರಂಭಗೊಳ್ಳುವ ದತ್ತಮಾಲಾ ಅಭಿಯಾನ ನಾವು ಬೇರೆಯಾಗಿ ಮಾಡುತ್ತೇವೆ ಎಂದು ರಂಜಿತ್ ಶೆಟ್ಟಿ ಬಣ ಪೊಲೀಸರಿಗೆ ತಿಳಿಸಿದ್ದು ಶ್ರೀರಾಮ ಸೇನೆಯ ಈ ಒಡಕು ಇದೀಗ ಸಂಘಟನೆಯಲ್ಲಿ ಪ್ರತ್ಯೇಕತೆ ಜೊತೆಗೆ ಹಿಂದೂ ಬಾಂಧವರಲ್ಲಿ ಗೊಂದಲಕ್ಕೂ ಕಾರಣವಾಗಿದೆ.
Leave a comment