Home Latest News ಚಿಕ್ಕಮಗಳೂರಿನ ಬಿಜೆಪಿ ಭೀಷ್ಮನಿಗೆ ಇದೆಂತಾ ದುಸ್ಥಿತಿ ಬಂತು
Latest News

ಚಿಕ್ಕಮಗಳೂರಿನ ಬಿಜೆಪಿ ಭೀಷ್ಮನಿಗೆ ಇದೆಂತಾ ದುಸ್ಥಿತಿ ಬಂತು

Share
Share

ಚಿಕ್ಕಮಗಳೂರು : ಕೇಸರಿ ಪಂಜೆ. ವೈಟ್ ಶರ್ಟ್. ಗಡ್ಡ-ಕೂದಲೆಲ್ಲಾ ಬಿಳಿ. ರಸ್ತೆ ಬದಿ ಕುಳಿತಿರುವ ಇವ್ರ ಹೆಸರು ವಿಠಲ್ ಆಚಾರ್ಯ. ವಯಸ್ಸು 92. ಮೂಲತಃ ಉಡುಪಿ ಜಿಲ್ಲೆಯವರು. ಆದ್ರೆ, ಕರ್ಮಭೂಮಿ ಕಾಫಿನಾಡು ಚಿಕ್ಕಮಗಳೂರು. ದಶಕಗಳಿಂದ ಇಲ್ಲೇ ನೆಲೆಯೂರಿರೋ ಇವರು ಆರ್.ಎಸ್.ಎಸ್. ಕಟ್ಟಾಳು. 7ನೇ ವಯಸ್ಸಿನಿಂದ 84ನೇ ವಯಸ್ಸಿನವರೆಗೆ ಸಂಘಕ್ಕಾಗಿ ಜೀವ ತೇಯ್ದಿದ್ದಾರೆ. 1975ರಲ್ಲಿ ಅಂದಿನ ಪ್ರಧಾನಿ ದೇಶದ ಮೇಲೆ ಎಮರ್ಜೆನ್ಸಿ ಹೇರಿದಾಗ ಅದರ ವಿರುದ್ಧ ಹೋರಾಡಿ ಯಡಿಯೂರಪ್ಪ, ಪಿ.ಜಿ.ಆರ್.ಸಿಂಧ್ಯಾ, ಶಂಕರಮೂರ್ತಿ, ಕಲ್ಲಡ್ಕ ಪ್ರಭಾಕರ್ ಭಟ್ ಜೊತೆ ಬೆಳಗಾವಿ-ಬಳ್ಳಾರಿ ಜೈಲಿನಲ್ಲಿ ದಿನ ಕಳೆದಿದ್ದಾರೆ. ಚಿಕ್ಕಮಗಳೂರು ನಗರಸಭೆ ಸದಸ್ಯರಾಗಿದ್ದ ಇವರು, ಜನಸಂಘದಿಂದ ವಿಧಾನಸಭೆ ಚುನಾವಣೆಗೂ ಸ್ಪರ್ಧಿಸಿದ್ದರು. ಕರ್ನಾಟಕದ ಅಯೋಧ್ಯೆ ಎಂದೇ ಕರೆಸಿಕೊಳ್ಳೋ ದತ್ತಪೀಠದ ಹೋರಾಟದಲ್ಲೂ ಸಿ.ಟಿ.ರವಿ, ಕಾರ್ಕಳ ಸುನೀಲ್ ಕುಮಾರ್ ಬೆನ್ನೆಲುಬಾಗಿ ನಿಂತವರು. ಆದರೆ, ಇಂದು ಬೀದಿಯಲ್ಲಿ ಜೀವನ ಕಳೆಯುತ್ತಿದ್ದಾರೆ. ನಾಲ್ಕು ಗಂಡು, ಒಂದು ಹೆಣ್ಣು ಮಗುವಿದ್ದು ಎಲ್ಲರೂ ಡಾಕ್ಟ್ರು-ಇಂಜಿನಿಯರ್. ಕೊಟ್ಯಾಂತರ ಆಸ್ತಿ ಇದ್ರು ಇಂದು ಅನಾಥರಾಗಿ ಸಂಧ್ಯಾಕಾಲವನ್ನ ಬೀದಿ ಬದಿ ಕಳೆಯುತ್ತಿದ್ದಾರೆ

92 ವರ್ಷದ ವಿಠಲ್ ಆಚಾರ್ಯ ಜೀವನದಲ್ಲಿ 107 ಪ್ರಕೃತಿ ಯಜ್ಞ ಮಾಡಿದ್ದಾರೆ. ಅದು ನಿಲ್ಲಬಾರದು ಅನ್ನೋದು ಇವ್ರ ಬಯಕೆ. ನಿಸ್ವಾರ್ಥವಾಗಿ ಪ್ರಕೃತಿಗೆ ಮಾಡುವ ಯಜ್ಞವದು. ಈ ಯಜ್ಞಕ್ಕೆ ಹಾಕುವ ವಸ್ತುಗಳು ಕಾರ್ಬನ್ ಡೈಆಕ್ಸೈಡ್ ಆದರೂ ಕೂಡ ಪ್ರಕೃತಿ ಅದನ್ನ ಪಡೆದು ನಮಗೆ ಆಕ್ಸಿಜನ್ ನೀಡುತ್ತೆ. ಅದು ನಿಲ್ಲಬಾರದು ಅಂತ ಈ ಇಳಿವಯಸ್ಸಲ್ಲಿ ಹೋರಾಡ್ತಿದ್ದಾರೆ. ಇಂದಿನ ಪೀಳಿಗೆ ಜನರಿಗೆ ಆಸಕ್ತಿ ಇಲ್ಲ. ಯಜ್ಞ ನಿಲ್ಲಬಾರದು ಅಂತ ಬ್ಯಾಂಕಿನಲ್ಲಿ 25 ಲಕ್ಷ ಹಣವಿಟ್ಟು ಪ್ರತಿವರ್ಷ ಯಜ್ಞ ಮಾಡ್ತಿದ್ರಂತೆ. ಆದ್ರೆ, ತಾನು ಸತ್ತ ನಂತರವೂ ಯಜ್ಞ ನಿಲ್ಲಬಾರದು ಅಂತ ಮಕ್ಕಳಿಗೆ ಆಸ್ತಿ ಮಾಡಿ, ಅವರಿಗೊಂದು ದಡ ಮುಟ್ಸಿ ಯಜ್ಞಕ್ಕೆ ಅಂತ ಒಂದು ಸೈಟ್ ಇಟ್ಕೊಂಡಿದ್ದರು. ಆ ಸೈಟ್ ಮಾರಿ ಅಥವ ಅದರಲ್ಲಿ ಕಾಂಪ್ಲೆಕ್ಸ್ ಕಟ್ಟಿ ಟ್ರಸ್ಟ್ ನಿರ್ಮಿಸಿ ಬಂದ ಹಣದಲ್ಲಿ ಯಜ್ಞ ನಡೆಸಬೇಕು ಅನ್ನೋದು ಇವ್ರ ಬಯಕೆ. ಹೋರಾಟ. ಕೊನೆ ಆಸೆ. ಆದರೆ, ಇವರಿಗೆ ಹೆತ್ತಮಕ್ಕಳೇ ಮೋಸ ಮಾಡಿದ್ದಾರಂತೆ. ಮಕ್ಕಳೇ ಮೋಸ ಮಾಡಿದ್ದಾರೆಂದು ಅವರ ಅನ್ನ ನನಗೆ ಬೇಡ ಅಂತ ಮನೆ ಮುಂದೆ ಏಕಾಂಗಿಯಾಗಿ ಪ್ರತಿಭಟನೆ ಮಾಡ್ತಿದ್ದಾರೆ.

ಒಟ್ಟಾರೆ ಇವ್ರಿಗೆ ಇರೋ ಮಕ್ಕಳೆಲ್ಲರೂ ಸಿರಿವಂತರೆ, ಆದರೂ, ಈ ಇಳಿವಯಸ್ಸಿನಲ್ಲಿ ಮಕ್ಕಳ ಮನೆಗೆ ಹೋಗದೇ ಬೇರೆಡೆ ಇದ್ದು 84 ವರ್ಷ ಆಗೋವರೆಗೂ ಹೇಗೋ ಪ್ರಕೃತಿ ಯಜ್ಞ ಮಾಡಿದ್ದಾರೆ. ಆದರೀಗ ತಾನೇ ಕಷ್ಟ ಪಟ್ಟು ಮಾಡಿದ್ದ ಜಾಗ ಇಲ್ಲ. ಆ ಜಾಗ ಟ್ರಸ್ಟ್‍ಗೆ ಕೊಡಲೇಬೇಕು. ಪ್ರತಿವರ್ಷ ಪ್ರಕೃತಿಯಜ್ಞ ನಡೆಯಲೇಬೇಕು. ನಿಲ್ಲಬಾರದು ಅಂತ ಬೀದಿಯಲ್ಲಿ ಕುಳಿತು ಹೋರಾಟ ಮಾಡುವಂತಾಗಿರೋದು ನಿಜಕ್ಕೂ ದುರಂತ.

Share

Leave a comment

Leave a Reply

Your email address will not be published. Required fields are marked *

Don't Miss

ದತ್ತ ಜಯಂತಿ ವೇಳೆ ಗಲಭೆ ಸಾಧ್ಯತೆ : ಶರಣ್ ಪಂಪ್ ವೆಲ್

ಚಿಕ್ಕಮಗಳೂರು : ತಾಲೂಕಿನ ದತ್ತಪೀಠ, ಗುರು ಪರಂಪರೆಯ ತಪೋ ಭೂಮಿ. ಚಂದ್ರದ್ರೋಣ ಪರ್ವತಗಳ ಸಾಲಿನ ಗುರು ದತ್ತಾತ್ರೇಯರ ಪೀಠ ಹಿಂದೂಗಳ ಧಾರ್ಮಿಕ ಕ್ಷೇತ್ರ. ಆದರೆ, ಹಿಂದೂಗಳ ಅಂತಹಾ ಧಾರ್ಮಿಕ ಕ್ಷೇತ್ರದಲ್ಲಿ ಮುಜಾವರ್...

ಎಸ್ ಎಮ್ ಕೃಷ್ಣ ನಿಧನಕ್ಕೆ ರಂಭಾಪುರಿ ಶ್ರೀ ಸಂತಾಪ

ಚಿಕ್ಕಮಗಳೂರು : ಎಸ್.ಎಂ ಕೃಷ್ಣ ನಿಧನಕ್ಕೆ ಬಾಳೆಹೊನ್ನೂರು ರಂಭಾಪುರಿ ಶ್ರೀಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಎಸ್ಎಂ ಕೃಷ್ಣ ಅವರ ಕೊಡುಗೆ ಅಪಾರವಾಗಿದ್ದು, ಅವರ ಕೊಡುಗೆಗಳು ಅವಿಸ್ಮರಣೀಯ. ರಂಭಾಪುರಿ ಮಠದ...

Related Articles

ನೌಕರರ ಸಂಘದಲ್ಲಿ ಗೆದ್ದು ಬೀಗಿದ ದೇವೆಂದ್ರ ಮಂಗಮಾಯ

ಚಿಕ್ಕಮಗಳೂರು : ರಾಜ್ಯ ಸರ್ಕಾರಿ ನೌಕರರ ಚುನಾವಣೆ ನಡೆದು ಹದಿನೇಳು ದಿನಗಳು ಕಳೆದಿವೆ. ನೌಕರರ ಸಂಘದ...

ಸಿ.ಟಿ.ರವಿ ಮನೆಗೆ ಮುತ್ತಿಗೆ ವೇಳೆ ಹೈಡ್ರಾಮ : ಕೈ ಕಾರ್ಯಕರ್ತನ ಮೇಲೆ ಹಲ್ಲೆ

ಚಿಕ್ಕಮಗಳೂರು : ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ ಸಿ.ಟಿ ರವಿ ಮನೆಗೆ...

ಅಂತರ್ ಜಾತಿ ವಿವಾಹಕ್ಕೆ ಪೋಷಕರ ವಿರೋಧ : ಎಸ್ಪಿ ಕಚೇರಿ ಬಳಿಯೇ ಹಾರ ಬದಲಾವಣೆ

ಚಿಕ್ಕಮಗಳೂರು : ಅಂರ್ತಾಜಾತಿ ಪ್ರೇಮಿಗಳು ವಿವಾಹವಾಗಿ ರಕ್ಷಣೆ ಕೋರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮೆಟ್ಟಿಲೇರಿ...

ಬಳ್ಳಾರಿ ಬಾಣಂತಿರ ಸಾವಿಗೆ ಕಾರಣವಾದ ದ್ರಾವಣ ಇಲ್ಲೂ ಕೊಡಲಾಗ್ತಿದ್ಯಾ ?

ಚಿಕ್ಕಮಗಳೂರು : ರಾಜ್ಯದಲ್ಲಿ ಬಾಣಂತಿಯರ ಸಾವಿನ ಸರಣಿ ಬಳ್ಳಾರಿ, ಬೆಳಗಾವಿ ವಿಜಾಪುರದಲ್ಲಿ ನಡೆದಿದ್ದು ಚಿಕ್ಕಮಗಳೂರಿನಲ್ಲಿ ಕೂಡ...