ಚಿಕ್ಕಮಗಳೂರು : ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್ ಮೂರ್ತಿ ತಮ್ಮದೇ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧವೇ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಎಂಎಲ್ ಮೂರ್ತಿ ಇದೊಂದು ಕಮರ್ಷಿಯಲ್ ಇಲಾಖೆ ಆಗಿದ್ದು ಪಶ್ಚಿಮ ಘಟ್ಟದ ಹೆಸರಿನಲ್ಲಿ ಭಾರೀ ಅನುದಾನ ಬರುತ್ತಿದೆ ಜತೆಗೆ ರಾಜ್ಯ ಸರ್ಕಾರವೇ ಟಿಂಬರ್ ಮರ್ಚೆಂಟ್ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಕಡಿ ಕಾರಿದ್ದಾರೆ. ಆನೆ ಹಾವಳಿ ತಡೆಯುವಲ್ಲಿ ವಿಫಲವಾಗಿರುವ ಅರಣ್ಯ ಇಲಾಖೆಯವರಿಗೆ ಯಾವ ಆಹಾರಗಳನ್ನು ನೀವು ಕಾಡಿನಲ್ಲಿ ಪ್ರಾಣಿಗಳಿಗಾಗಿ ಬೆಳೆಸಿದ್ದೀರಿ ಎಂದು ಗುಡುಗಿದ್ದಾರೆ
ರೈತ ಸಂಘಟನೆಗಳು ಕಾಫಿತೋಟದ ಮಾಲೀಕರು ಸಾರ್ವಜನಿಕರು ಕಷ್ಟ ಹೇಳಿಕೊಂಡು ಬೊಬ್ಬೆ ಹೊಡೆದರೂ ಕನಿಷ್ಟ ಪ್ರತಿಕ್ರಿಯೆ ಕೂಡ ಕೊಡದ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ವಿರುದ್ಧ ಕೆಂಡಾಮಂಡಲ ರಾಗಿರುವ ಎಂಎಲ್ಎಂ ಬಿಪಿಎಲ್ ಕಾರ್ಡ್ ವಿತರಣೆಯಲ್ಲಿ ಮುಖ್ಯವಾಗಿ ಅಲ್ಲಿನ ಅಧಿಕಾರಿಗಳೇ ಭ್ರಷ್ಟಾಚಾರ ಮಾಡಿದ್ದು ಈ ಲೂಟಿಯನ್ನ ಒಪ್ಪಲು ಸಾಧ್ಯವಿಲ್ಲ ಕಳ್ಳರು ಯಾರು ಎಂದು ತಿಳಿಯಬೇಕಾದರೆ ಪ್ರತಿ ನ್ಯಾಯಬೆಲೆ ಅಂಗಡಿಗಳ ಮುಂದೆ ನಾಮಫಲಕ ಗಳಲ್ಲಿ ಅಲ್ಲಿನ ಫಲಾನುಭವಿಗಳ ಪಟ್ಟಿ ಭಾವಚಿತ್ರ ಸಹಿತ ಪ್ರಕಟಿಸಬೇಕು ಎಂದು ಎಂಎಲ್ಎಂ ಒತ್ತಾಯಿಸಿದ್ದಾರೆ.
ಈ ಮೂಲಕ ತಮ್ಮದೇ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಕಾಂಗ್ರೆಸ್ ಆಡಳಿತ ಇರುವ ಮುಖಂಡರಿಗೆ ತೀವ್ರ ಮುಜುಗರ ಉಂಟಾಗುವುದು ಮಾತ್ರ ಸತ್ಯ
Leave a comment