ಚಿಕ್ಕಮಗಳೂರು : ಕಮ್ಯುನಿಸ್ಟ್ ಪಕ್ಷ ಹಾಗೂ ಕಾರ್ಮಿಕ ಮುಖಂಡ ಕೆ.ಗುಣಶೇಖರನ್ (72) ನಿಧನರಾಗಿದ್ದಾರೆ. ಹಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ನಿಧನದಿಂದ ಕಾರ್ಮಿಕ ವರ್ಗಕ್ಕೆ ತುಂಬಲಾರದ ನಷ್ಟವಾಗಿದೆ.
ಕೆ.ಗುಣಶೇಖರನ್ ತಂದೆ ಕೇಶವ ಮೇಸ್ತ್ರಿ 60 ರ ದಶಕದಲ್ಲಿ ತೋಟಕಾರ್ಮಿಕರ ಸಂಘಟನೆ ಪ್ರಾರಂಭಿಸಲು ಎಂ.ಸಿ.ನರಸಿಂಹನ್ ಜೊತೆ ಗೂಡಿದವರು ತಂದೆಯಂತೆ ಮಗನು ಸಂಘಟನೆ ಜೊತೆ ಜೊತೆಯಲ್ಲಿ ಬೆಳೆದವರು .
ಸಕಲೇಶಪುರದ ಕಾಡುಮನೆ ಎಸ್ಟೇಟ್ ನಲ್ಲಿ ಮಂಡಲ ಪಂಚಾಯತಿ ಉಪಾಧ್ಯಕ್ಷರಾಗಿ ನಂತರ ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿ ತೋಟ ಕಾರ್ಮಿಕರ ಸಂಘಟನೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಅಧ್ಯಕ್ಷರಾಗಿ ಪೂರ್ಣ ಅವಧಿ ಮುಖಂಡರಾಗಿ ಚಿಕ್ಕಮಗಳೂರು ಜಿಲ್ಲೆ ಅಷ್ಟೇ ಅಲ್ಲ ಹಾಸನ ಮತ್ತು ಕೊಡುಗು ಜಿಲ್ಲೆಯಲ್ಲಿ ಸಂಘಟನೆ ಕಟ್ಟಿದವರು.
ತೋಟ ಕಾರ್ಮಿಕರ ಜೊತೆಗೆ ರಬ್ಬರ್ ಕಾರ್ಮಿಕರನ್ನು ಸಂಘಟಿಸಿದವರು. ಕಮ್ಯೂನಿಸ್ಟ್ ಪಕ್ಷದ ರಾಜ್ಯ ಶಿಸ್ತು ಸಮಿತಿ ಸದಸ್ಯರಾಗಿ, ಕಾಫಿ ಬೋರ್ಡ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಮಿತ ಭಾಷಿಯಾಗಿದ್ದ ಗುಣಶೇಖರನ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕಾರ್ಮಿಕರು ಗುಂಪು, ಗುಂಪಾಗಿ ಬರುತ್ತಿದ್ದರು. ಕಮ್ಯುನಿಸ್ಟ್ ಮುಖಂಡರು ಹಾಗೂ ವಿವಿಧ ಪಕ್ಷದ ಗಣ್ಯರು ಅಂತಿಮ ದರ್ಶನ ಪಡೆದರು.
Leave a comment