ಚಿಕ್ಕಮಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆ ೭೦ನೇ ಸಂಸ್ಥಾಪನದ ದಿನ ದ ಅಂಗವಾಗಿ ರೆಡ್‌ಕ್ರಾಸ್ ಜಿಲ್ಲಾ ಶಾಖೆ ಸಹಯೋಗದಲ್ಲಿ ನಗರದ ಕೋಟೆ ಸಮೀಪದ ಎಸ್‌ಬಿಐ ಬ್ಯಾಂಕ್ ಕಚೇರಿ ಆವರಣದಲ್ಲಿ ಸಿಎಸ್‌ಆರ್ ನಿಧಿಯಿಂದ ಶುಕ್ರವಾರ ರಕ್ತದಾನ ಶಿಬಿರವನ್ನು ನಡೆಸಲಾಯಿತು.
ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಎಸ್‌ಬಿಐ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಟಿ.ಎಂ.ರವಿ ಪ್ರಸ್ತುತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತದಲ್ಲಿ ಅತಿದೊಡ್ಡ ಬ್ಯಾಂಕ್ ಆಗಿದೆ. ೨೦೦ ವರ್ಷಗಳ ಇತಿ ಹಾಸವಿದೆ. ಮೊದಲು ಬ್ಯಾಂಕ್ ಆಫ್ ಕಲ್ಕತ್ತಾ ಹೆಸರಿನಲ್ಲಿ ಆರಂಭವಾಗಿ ನಂತರ ಇಂಪಿರಿಯಲ್ ಬ್ಯಾಂಕ್ ಇಂಡಿಯಾ ಎಂದು ಕರೆಯಲಾಗುತ್ತಿತ್ತು ಎಂದರು.
೧೯೯೫ರ ಜುಲೈ ೧ ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಂದು ಮರುನಾಮಕರಣ ಮಾಡಲಾಯಿ ತು. ಅಲ್ಲದೇ ಸರ್ಕಾರಿ ಕಚೇರಿ, ಆಸ್ಪತ್ರೆ, ಕಾಲೇಜುಗಳಿಗೆ ಸಂಸ್ಥೆಯ ಸಿಎಸ್‌ಆರ್ ನಿಧಿಯಿಂದ ಸಾಮಾಜಿಕ ಕಾರ್‍ಯಗಳನ್ನು ಮಾಡುವ ಮೂಲಕ ಎಸ್‌ಬಿಐ ಜನಪರವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ರೆಡ್‌ಕ್ರಾಸ್ ಜಿಲ್ಲಾಧ್ಯಕ್ಷ ಪ್ರದೀಪ್‌ಗೌಡ ಮಾತನಾಡಿ ಜೀವಗಳನ್ನು ಉಳಿಸಲು ಮತ್ತು ಆಸ್ಪತ್ರೆಗಳು ತುರ್ತು ಪರಿಸ್ಥಿತಿಗಳು, ಶಸ್ತ್ರಚಿಕಿತ್ಸೆಗಳು ಮತ್ತು ವೈದ್ಯಕೀಯ ಚಿಕಿತ್ಸೆಗಳನ್ನು ನಿರ್ವಹಿಸಲು ರಕ್ತದಾನವು ಅತ್ಯ ಗತ್ಯ. ರಕ್ತದಾನವು ಸರಳ ಮತ್ತು ನಿಸ್ವಾರ್ಥ ಕ್ರಿಯೆಯಾಗಿದ್ದು ಅಗತ್ಯವಿರುವವರಿಗೆ ಸ್ಪಂದಿಸುವ ಗುಣ ಬೆಳೆಸಿ ಕೊಳ್ಳಬೇಕು ಎಂದು ಕರೆ ನೀಡಿದರು.
ರಕ್ತದಾನ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕರಾತ್ಮಕ ಪರಿಣಾಮ ಬೀರು ತ್ತದೆ. ಸಮಯಕ್ಕೆ ಸರಿಯಾಗಿ ರಕ್ತ ಸಿಗದೇ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು, ಅಪಘಾತ ಗ ಗಾಯಾಳುಗಳು ಮೃತಪಡುತ್ತಿದ್ದು ಈ ಬಗ್ಗೆ ಗಮನಹರಿಸಿ ಭಯಪಡದೇ ರಕ್ತದಾನ ಶಿಬಿರದಲ್ಲಿ ಪಾಲ್ಗೊ ಳ್ಳಬೇಕು ಎಂದು ಕಿವಿಮಾತು ಹೇಳಿದರು.
ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ|| ಮುರಳಿಧರ್ ಮಾತನಾಡಿ ರಕ್ತದಾನದಿಂದ ಮೂರು ಜೀವಗಳನ್ನು ಉಳಿಸಬಹುದು. ಶಸ್ತ್ರಚಿಕಿತ್ಸೆ, ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುವ ರೋಗಿಗಳು ಮತ್ತು ಅಪಘಾತಗಳಂತಹ ತು ರ್ತು ಸಂದರ್ಭಗಳಲ್ಲಿ ಸಂರಕ್ಷಿಸಬಹುದು. ಅಲ್ಲದೇ ಸ್ಥಳೀಯ ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳಲ್ಲಿ ಸ್ಥಿರ ವಾದ ರಕ್ತದ ಪೂರೈಕೆಯನ್ನು ಕಾಪಾಡಿಕೊಳ್ಳಲು ಯುವಕರು ಸ್ವಯಂ ಮುಂದಾಗಬೇಕು ಎಂದರು.
ಇದೇ ವೇಳೆ ೬೦ ಜನರು ಸ್ವಯಂಪ್ರೇರಿತ ರಕ್ತದಾನ ಮಾಡಿದರು. ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನಿ ಗಳಿಗೆ ೫೦೦ ರೂ. ಬೆಲೆಬಾಳುವ ಬಹುಮಾನದ ಕೂಪನ್ ಬ್ಯಾಂಕ್‌ನಿಂದ ವಿತರಿಸಲಾಯಿತು. ಈ ಸಂದರ್ಭ ದಲ್ಲಿ ಹೊಸಮನೆ ಎಸ್‌ಬಿಐ ಬ್ಯಾಂಕ್ ಶಾಖೆ ಮುಖ್ಯಸ್ಥ ಗುರುಪ್ರಸಾದ್ ಕಾಮತ್, ಪ್ರಾದೇಶಿಕ ವ್ಯವಹಾರ ವ್ಯವಸ್ಥಾಪಕ ಕೆ.ರಂಗ ಸ್ವಾಮಿ, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಕು.ಪಲ್ಲವಿ ಜೋಷಿ, ರೆಡ್‌ಕ್ರಾಸ್ ನಿರ್ದೇಶಕ ವಿಲಿಯಂ ಪಿರೇರಾ, ಆ ಯೋಜಕ ಜಿ.ವಿ.ಗಿರೀಶ್, ಜೇಸಿಐ ಅಧ್ಯಕ್ಷ ಸಿ.ಬಿ. ಪ್ರದೀಪ್, ವೈದ್ಯ ಡಾ|| ಯಶವರ್ಧನ್ ಮತ್ತಿ ತರರು ಉಪ ಸ್ಥಿತರಿದ್ದರು.
SBI Foundation Day – 60 people volunteer to donate blood
Leave a comment