Home namma chikmagalur chikamagalur ಸಾವಿತ್ರಿಬಾಯಿ ಫುಲೆ ಓರ್ವ ಅತ್ಯುತ್ತಮ ಸಮಾಜಸೇವಕಿ
chikamagalurHomeLatest Newsnamma chikmagalur

ಸಾವಿತ್ರಿಬಾಯಿ ಫುಲೆ ಓರ್ವ ಅತ್ಯುತ್ತಮ ಸಮಾಜಸೇವಕಿ

Share
Share

ಚಿಕ್ಕಮಗಳೂರು: ಭಾರತ ಪರಂಪರೆಯಲ್ಲಿ ಮಾತೆ ಸಾವಿತ್ರಿ ಬಾಯಿ ಪುಲೆ ಓರ್ವರು ಅತ್ತುತ್ತಮ ಸಮಾಜ ಸೇವಕಿ. ಅಂದಿನ ದಿನಗಳಲ್ಲಿದ್ದ ಮೌಡ್ಯತೆ ಕಂದಚಾರಗಳ ವಿರುದ್ದ ಹೋರಾಡಿದ ಧೀ ಮಂತ ಮಹಿಳೆ ಎಂದು ವಿಧಾನ ಪರಿ?ತ್ ಸದಸ್ಯ ಸಿ.ಟಿ. ರವಿ ಹೇಳಿದರು.

ನಗರದ ಟಿಎಂಎಸ್ ರೋಟರಿ ಸಭಾಂಗಣದಲ್ಲಿ ಸಾವಿತ್ರಿ ಬಾಯಿ ಫುಲೆ ರಾಷ್ಟ್ರೀಯ ಫೆಡರೇಷನ್ ನವ ದೆಹಲಿ, ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕರ ಸಂಘದ ತಾಲ್ಲೂಕು ಘಟಕದಿಂದ ಆಯೋಜಿಸಿದ್ಧ ಅಕ್ಷರ ಕ್ರಾ ಂತಿ ಮಹಿಳೆ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮವನ್ನು ಈಚೆಗೆ ಉದ್ಘಾಟಿಸಿ ಅವರು ಮಾತನಾ ಡಿದರು.

ಫುಲೆಯವರು ಶತಮಾನಗಳ ಮಧ್ಯೆಯಲ್ಲಿ ತೂರಿಕೊಂಡ ಕಂದಚಾರಗಳಿಂದಾಗಿ ಹೆಣ್ಣುಮಕ್ಕಳು ವಿದ್ಯೆ ಕಲಿಯಬಾರದೆಂದು ಕೆಲವು ಮೌಡ್ಯರು ಸಮಾಜದಲ್ಲಿ ಹೇರಿದ್ದರು. ಇದನ್ನು ಮೀರಿ ಅಂದಿನ ದಿನಗಳಲ್ಲಿ ಪತಿ ಜ್ಯೊತಿಬಾ ಪುಲೆ ಯವರ ಸಹಕಾರದೊಂದಿಗೆ ೧೫೦ ವ?ಗಳ ಹಿಂದೆ ಮಹಿಳೆಯರಿಗೆ ವಿದ್ಯಾದಾನ ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.

ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯಿನಿ ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟ ಗಾರ್ತಿ ಹಾಗು ಭಾರತದ ಮೊಟ್ಟ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆಯವರು, ದಣಿವರಿಯದ ಸತ್ಯ ಶೋಧಕಿ, ಆಧುನಿಕ ಶಿಕ್ಷಣದ ತಾಯಿಯಾಗಿ ಅಕ್ಷರ ಕ್ರಾಂತಿ ಮೂಡಿಸಿದವರು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ರುದ್ರಪ್ಪ ಮಾತನಾಡಿ ಶಿಕ್ಷಕರು ಮಕ್ಕಳಿಗೆ ಸಂಸ್ಕಾರ ಹಾಗೂ ಗುಣಮಟ್ಟದ ಶಿಕ್ಷಣವನ್ನು ಬೋಧಿಸಬೇಕು. ಆ ಮೂಲಕ ಭವಿಷ್ಯದ ಪ್ರಜೆಗಳನ್ನು ಅಣಿಗೊಳಿಸುವ ಮೂಲಕ ರಾಷ್ಟ್ರದ ಭವ್ಯ ತೆ ಕಾಪಾಡಬೇಕು. ಜೊತೆಗೆ ಸಾವಿತ್ರಿಫುಲೆಯವರ ಆದರ್ಶಗಳಡಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿ ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ತಾಲ್ಲೂಕು ಅಧ್ಯಕ್ಷೆ ಜ್ಯೋತಿ ಶಿಕ್ಷಣದಲ್ಲಿ ದೊ ಡ್ಡ ಕ್ರಾಂತಿ ಮೂಡಿಸಿದ ಸಾವಿತ್ರಿಭಾಯಿ ಫುಲೆಯವರು ಪ್ರತಿ ಶಿಕ್ಷಕ ವರ್ಗಕ್ಕೆ ಪ್ರೇರಣೆಯಾಗಬೇಕು. ಅನಾದಿ ಕಾಲದಲ್ಲಿ ಹೆಣ್ಣುಮಕ್ಕಳು ಹೊರಕಳಿಸದ ಸ್ಥಿತಿಯಲ್ಲಿ ಫುಲೆಯವರು ಗಂಡನ ಸಹಾಯದಿಂದ ಹೆಣ್ಣುಮಕ್ಕಳಿಗೆ ವಿದ್ಯಾದಾನ ಮಾಡಿದವರು ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ರೇಖಾ ನಾಗರಾಜ್, ಸುನಾ, ಲಕ್ಷ್ಮಣ್, ಕ.ರಾ.ಸ.ನೌಕರರ ಸಂ ಘದ ನಿರ್ದೇಶಕರಗಳು, ಕಾರ್ಯಾಧ್ಯಕ್ಷರು, ತಾಲೂಕು ಶಿಕ್ಷಕರ ಸಂಘದ ಪದಾಧಿಕಾರಿಗಳು, ಸಾವಿ ತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಮತ್ತು ತಾಲೂಕು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Savitribai Phule was a great social worker.

 

Share

Leave a comment

Leave a Reply

Your email address will not be published. Required fields are marked *

Don't Miss

ಜಿಲ್ಲಾಸ್ಪತ್ರೆಯ ನಿರ್ಲಕ್ಷ್ಯಕ್ಕೆ ಮತ್ತೊಂದು ಅಮಾಯಕ ಜೀವ ಬಲಿ

ಚಿಕ್ಕಮಗಳೂರು: ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯ ಮತ್ತೆ ಮುಂದುವರಿದಿದ್ದು,ನಾಲ್ಕು ದಿನಗಳ ಅಂತರದಲ್ಲಿ ಮತ್ತೊಂದು ಅಮಾಯಕ ಜೀವ ಬಲಿಯಾಗಿದ್ದು, ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆ ಮತ್ತೊಮ್ಮೆ ಬಯಲಾಗಿದೆ. ನಗರದ ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಉಸಿರಾಟದ ಸಮಸ್ಯೆಯಿಂದ...

ಹಾಪ್‌ಕಾಮ್ಸ್ ಜಿಲ್ಲಾ ಅಧ್ಯಕ್ಷರಾಗಿ ಕುಮಾರಸ್ವಾಮಿ-ಉಪಾಧ್ಯಕ್ಷ ಹಾಲಪ್ಪ

ಚಿಕ್ಕಮಗಳೂರು: – ಜಿಲ್ಲಾ ತೋಟಗಾರಿಕೆ ಬೆಳೆಗಾರರ ಉತ್ಪನ್ನಗಳ ಮಾರಾಟ ಮತ್ತು ಸಂ ಸ್ಕರಣಾ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಹೆಚ್.ಕುಮಾರಸ್ವಾಮಿ ಮತ್ತು ಉಪಾಧ್ಯಕ್ಷರಾಗಿ ಜಿ.ಹಾಲಪ್ಪ ಸೋ ಮವಾರ ಸಂಘದ ಕಚೇರಿಯಲ್ಲಿ ಅವಿರೋಧವಾಗಿ ಆಯ್ಕೆಯಾದರು....

Related Articles

ಡಿ.ಸಿ.ಸಿ.ಬ್ಯಾಂಕ್ ಚುನಾವಣೆಯ ರಂಗೀನಾಟ

ಚಿಕ್ಕಮಗಳೂರು: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಹೈ ಡ್ರಾಮಾ ನೋಡಿದರೆ ಯಾವ ಕಡೆ ನಗಾಡ...

ಬೀರೂರು ಪಟ್ಟಣದಲ್ಲಿ ಚಿರತೆ ಸಂಚಾರ

ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿ ಚಿರತೆ ಸಂಚಾರ ಹೆಚ್ಚಿರುವುದು ಜನರಲ್ಲಿ ಭಾರೀ ಆತಂಕ ಮೂಡಿಸಿದೆ....

ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅನಂತ ನಾಡಿಗ್ ಗೆ ಅಭಿನಂದನ ಸಮಾರಂಭ

ತರೀಕೆರೆ: ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕತ೯ ಅನಂತ ನಾಡಿಗ್ ಗೆ ತಾಲ್ಲೂಕು ಶರಣ...

ನಾಗರೀಕ ಸೇವಾ ಪರೀಕ್ಷೆ ಎದುರಿಸಲು ಜ್ಞಾನ, ಛಲದ ಅವಶ್ಯ

ಚಿಕ್ಕಮಗಳೂರು: ನಾಗರೀಕ ಸೇವಾ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಲು ವಿ ದ್ಯಾರ್ಥಿಗಳಿಗೆ ಆಸ್ತಿ-ಅಂತಸ್ತಿನ ಅರ್ಹತೆ ಬೇಕಿಲ್ಲ. ಅಪಾರ...