ಚಿಕ್ಕಮಗಳೂರು: ಕಳೆದ ಹದಿನೈದು ವರ್ಷಗಳಿಂದ ಕಾಂಗ್ರೆಸ್ ರೈತ ವಿಭಾಗದ ರಾಜ್ಯದ ಅಧ್ಯಕ್ಷ. ಸಚಿನ್ ಮೀಗಾ ಎಂಬ ಮಾಯಾ ಮೃಗಾ ವೃದ್ದ ದಂಪತಿಗೆ ಮಾನಸಿಕ ಹಿಂಸೆ ಮತ್ತು ಕಿರುಕುಳ ನೀಡುತ್ತಿರುವ ಬಗ್ಗೆ ರಮೇಶ್ ಭಟ್ ಮತ್ತು ವಾಣಿ ದೂರಿದ್ದಾರೆ.
ಸಚಿನ್ ರೈತ ಸಂಘಟನೆ ಮಾಡಿದ್ದಕ್ಕಿಂತ ಎಲ್ಲಿ,ಎಲ್ಲಿ ಎತ್ತುವಳಿ ಮಾಡಬಹುದು ಎಂದು ಲೆಕ್ಕಾಚಾರ ಮಾಡಿದ್ದೇ ಹೆಚ್ಚು ಎಂದು ಕಾಂಗ್ರೆಸ್ ನವರ ಮಾತು.
ಸದಾಕಾಲವೂ ಬೆಂಗಳೂರಿನಲ್ಲಿ ಠೀಕಾಣಿ ಹೊಡೆದು ಡಿ.ಕೆ. ಹಿಂದೆ, ಮುಂದೆ ಸುತ್ತುವ ಈತ ಲ್ಯಾಂಡ್ ಡೀಲರ್,ಫೈನಾನ್ಸಿಯರ್,ದಲ್ಲಾಳಿಗಳಿಗೆ,ವ್ಯಾಪಾರಿಗಳಿಗೆ ಲೆಟರ್ ಹೆಡ್ ನಾಯಕರುಳನ್ನು ಹುಟ್ಟು ಹಾಕಿದ ಖಳನಾಯಕ ಎಂಬ ಅಪಕೀರ್ತಿ ಈತನ ಮೇಲಿದೆ.
ಈತನ ತಂದೆ ಮೀಗಾ ಚಂದ್ರಶೇಖರ್ ಅತ್ಯಂತ ಪ್ರಾಮಾಣಿಕ ಒಮ್ಮೆ ಜಿ,ಪಂ ಸದಸ್ಯರಾಗಿ ಹೊಲಸು ರಾಜಕೀಯ ಬೇಡ ಎಂದವರ ಮಗನಾಗಿ ಎತ್ತುವಳಿ ಎಕ್ಸ್ ಫರ್ಟ್ ಎಂದು ಕರೆಯಿಸಿ ಕೊಳ್ಳುವ ಈತಾ ರಮೇಶ್ ಭಟ್ ಮತ್ತು ವಾಣಿ ಎಂಬ ವೃದ್ದದಂಪತಿಗಳನ್ನು ಕಣ್ಣೀರಿನಲ್ಲಿ ಮುಳುಗಿಸಿದ್ದಾನೆ.
ಈತನನ್ನು ಕಾಂಗ್ರೆಸ್ ನವರು ಮಳ್ಳಿಗ ಮಸಾಲೆ ದೋಸೆ ಸಚಿನ್ ಎನ್ನುತ್ತಾರೆ ಎಂದರೆ ಯೋಚಿಸಲೇ ಬೇಕು.
ಕೊಪ್ಪ ತಾಲ್ಲೂಕು ಬೇರು ಕೂಡಿಗೆ ರಮೇಶ್ ಭಟ್ ರ ಐದು ಎಕರೆ ಇಪ್ಪತೈದು ಗುಂಟೆ ಜಮೀನು ಖರೀದಿ ಮಾಡಿದ್ದಾನೆ.
ವೃದ್ದ ದಂಪತಿಗೆ ಇನ್ನೂ ಇಪ್ಪತೈದು ಎಕರೆ ಅಡಿಕೆ ಮತ್ತು ಕಾಫಿ ತೋಟವಿದ್ದು ಇದರ ಮೇಲೆ ಕಣ್ಣು ಬಿಟ್ಟಿರುವ ಮಾಯಾ ಮೃಗ ಸಚಿನ್ ವಾಸದ ಮನೆ ಖಾಲಿ ಮಾಡಿಸಲು ತಂತ್ರ, ಕುತಂತ್ರ ಮಾಡುತ್ತಿದ್ದು ಗೇಟ್ ಮುರಿಸುವುದು,ಕರೆಂಟ್ ತೆಗೆಯುವುದು,ನೀರಿನ ಮೋಟರ್ ಕೆಡಿಸಿದ್ದು ಈ ಬಗ್ಗೆ ಇಲಾಖೆ ದೂರು ಕೊಟ್ಟರು ಪ್ರಯೋಜನವಾಗಿಲ್ಲ .
ಪೊಲೀಸ್ ರಿಗೆ ದೂರು ನೀಡಲು ಹೋದರು ದೂರು ತೆಗೆದು ಕೊಂಡಿಲ್ಲ. ಎಂದು ಮಾಧ್ಯಮಗಳ ಮುಂದೆ ಕಣ್ಣೀರು ಸುರಿಸಿದ್ದಾರೆ.ಇಂತಹ ಚಿತ್ರ ವಿಚಿತ್ರ ಅನುಭವಿಸುವುದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.
ಕಳೆದ ಒಂದು ವಾರದಿಂದ ಕತ್ತಲೆಯ ಕೋಣೆಯಲ್ಲಿ ಬಂಧನಕ್ಕೆ ಒಳಗಾದ ಭೀತಿ ಇದ್ದು ಹೆಚ್ಚು ಕಡಿಮೆಯಾದರೆ ಯಾರು ಹೊಣೆ.
ನಮ್ಮ ತೋಟದ ಬೆಳೆಯನ್ನು ಕೊಯ್ಲು ಮಾಡಲು ಬಿಡುತ್ತಿಲ್ಲ.ದಬ್ಬಾಳಿಕೆ ಮೇಲೆ ಆತನೆ ಅಡಿಕೆ ಕೊಯ್ಲು ಮಾಡಿದ್ದು ಈ ಬಗ್ಗೆ ಪೊಲೀಸ್ ರು ದೂರು ಪಡೆಯುತ್ತಿಲ್ಲ.ನಮಗೆ ಆತ್ಮಹತ್ಯೆ ಬಿಟ್ಟರೆ ಬೇರೆ ದಾರಿ ಇಲ್ಲ ಎನ್ನುತ್ತಾರೆ.
ಕಾಂಗ್ರೆಸ್ ನಲ್ಲಿ ಇಂತಹ ಮಾಯಾ ಮೃಗಗಳಿಗೆ ಉಗಿದು ಬುದ್ದಿ ಹೇಳದ ಡೊಂಗಿ ನಾಯಕರುಗಳಿಗೆ ಏನು ಹೇಳಬೇಕು.
ಡಿ.ಕೆ.ಶಿವಕುಮಾರ್ ನ ಜೊತೆಗೆ ಇಂತವರೆ ಇರಬಹುದು ಇನ್ನೂ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡಗೆ ಇವತ್ತು ತಂಗುವುದು ಎಲ್ಲಿ ಎಂಬ ಚಿಂತೆ.ಬ್ರಾಹ್ಮಣ ಸಂಘದ ಮಂಜುನಾಥ್ ಜೋಷಿಗೆ ಯಾರಿಗೆ ಬಕಿಟ್ ಹಿಡಿಯಬೇಕು ಎಂಬ ಲೆಕ್ಕಾಚಾರ ವೃದ್ದ ದಂಪತಿಗಳಿಗೆ ಮಾಧ್ಯಮಗಳೇ ಕೊನೆಯ ಆಯ್ಕೆ. ಇನ್ನಾದರೂ ಪೊಲೀಸ್ ಇಲಾಖೆ ವೃದ್ದರ ನೆರವಿಗೆ ಬರಲಿ.
Sachin Meega
Leave a comment