ಚಿಕ್ಕಮಗಳೂರು : ವಿದೇಶಿ ಪ್ರಜೆಗಳು ಕ್ಯಾಂಟೀನ್ ವೊಂದರಲ್ಲಿ ಮರೆತು ಬಿಟ್ಟು ಹೋಗಿದ್ದ ಮೂರು ವರೆ ಲಕ್ಷ ಹಣ, ಲ್ಯಾಪ್ ಟಾಪ್, ವೀಸಾ ಪಾಸ್ ಪೋರ್ಟ್ ಅನ್ನು ಮರಳಿ ಅವರಿಗೆ ನೀಡಿ ಮಾನವೀಯತೆ ಮೆರೆದಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್ ಆರ್ ಪುರ ತಾಲೂಕಿನ ಮಾಗುಂಡಿ ಗ್ರಾಮದಲ್ಲಿ ನಡೆದಿದೆ.
ಕುದುರೆಮುಖಕ್ಕೆ ಟ್ರಕ್ಕಿಂಗ್ ಗೆ ಹೋಗಲು ಬಂದಿದ್ದ ಮೂವರು ರಷ್ಯನ್ ಪ್ರಜೆಗಳು ಅದೇ ಮಾರ್ಗವಾಗಿ ಮಾಗುಂಡಿ ಗ್ರಾಮದ ಕ್ಯಾಂಟೀನ್ ನಲ್ಲಿ ಟೀ ಹಾಗೂ ಕೂಲ್ ಡ್ರಿಂಕ್ಸ್ ಕುಡಿಯಲು ಬಂದಾಗ ಮರೆತು ಬ್ಯಾಗ್ ಬಿಟ್ಟು ಹೋಗಿದ್ದರು. ಕ್ಯಾಂಟೀನಲ್ಲೇ ಇದ್ದ ಸ್ಥಳೀಯ ಯುವಕ ಅವಿನಾಶ್ ಲಕ್ಷಾಂತರ ರೂಪಾಯಿ ಹಣ ವಾಪಸ್ ನೀಡಿ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದಾರೆ.
ವಿದೇಶಿ ಪ್ರಜೆಗಳು ಬ್ಯಾಗ್ ಮರೆತು ಬಿಟ್ಟು ಹೋಗಿದ್ದಾಗ ಕಳಸ ತಾಲೂಕಿನ ಸಂಸೆಯ ಆಟೋ ಚಾಲಕನಿಗೆ ಫೋನ್ ಮಾಡಿ ಮಾಹಿತಿ ನೀಡಿ ಮೂರು ರಷ್ಯನ್ ಪ್ರಜೆಗಳಿಗನ್ನು ವಾಪಸ್ ಕಳಿಸುವಂತೆ ಫೋನ್ ಮೂಲಕ ತಿಳಿಸಿದ್ದಾರೆ. ತಕ್ಷಣವೇ ವಾಪಸ್ ಬಂದ ವಿದೇಶಿ ಪ್ರಜೆಗಳು ಅವಿನಾಶ್ ಹಾಗೂ ಸ್ಥಳೀಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಬ್ಯಾಗಿನಲ್ಲಿದ್ದ ಮೂರುವರೆ ಲಕ್ಷ ಹಣ ಹಾಗೂ ಲ್ಯಾಪ್ ಟಾಪ್ ಅನ್ನು ನೀವೆ ಇಟ್ಟುಕೊಳ್ಳುವಂತೆ ಅವಿನಾಶ್ ಗೆ ಹೇಳಿದಾಗ ಬೇಡ ನೀವೇ ತೆಗೆದುಕೊಳ್ಳಿ ಎಂದು ವಾಪಸ್ ಕೊಟ್ಟಿದ್ದಾರೆ. ವಿದೇಶಿ ಪ್ರಜೆಗಳಿಗೆ ಆಶ್ಚರ್ಯ ಹಾಗೂ ಒಳ್ಳೆಯತನಕ್ಕೆ ಫಿದಾ ಆಗಿದ್ದಾರೆ. ಇದೆ ವೇಳೆ ಈ ಕಾರ್ಯಕ್ಕೆ ಮೆಚ್ಚಿದ ವಿದೇಶಿ ಪ್ರಜೆಗಳು ಐ ಲವ್ ಇಂಡಿಯನ್ಸ್ ಐ ಲವ್ ಇಂಡಿಯಾ ಎಂದು ಘೋಷಣೆ ಕೂಗಿ ಸೆಲ್ಫಿ ತೆಗೆದು, ತಬ್ಬಿಕೊಂಡು ಖುಷಿಪಟ್ಟಿದ್ದಾರೆ. ಬಳಿಕ ಅಲ್ಲಿಂದ ಕುದುರೆಮುಖಕ್ಕೆ ರಷ್ಯನ್ ಪ್ರಜೆಗಳು ತೆರಳಿದ್ದಾರೆ. ಇದೇ ವೇಳೆ ಅವಿನಾಶ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು ಬೆನ್ನು ತಟ್ಟಿದ್ದಾರೆ.
Leave a comment