Home namma chikmagalur chikamagalur ಬಾರ್ ಲೈನ್ ರಸ್ತೆಯಲ್ಲಿ ಕಾರಿನಲ್ಲಿ 2 ಲಕ್ಷ ರೂ ಕಳ್ಳತನ
chikamagalurCrime NewsHomeLatest Newsnamma chikmagalur

ಬಾರ್ ಲೈನ್ ರಸ್ತೆಯಲ್ಲಿ ಕಾರಿನಲ್ಲಿ 2 ಲಕ್ಷ ರೂ ಕಳ್ಳತನ

Share
Share

ಚಿಕ್ಕಮಗಳೂರು: ಬ್ಯಾಂಕ್ ಕೆಲಸದ ನಿಮಿತ್ತ ನಗರದ ಬಾರ್ ಲೈನ್ ರಸ್ತೆಯಲ್ಲಿರುವ ಬ್ಯಾಂಕ್‌ಗೆ ತೆರಳಿದ್ದಾಗ ಕಾರಿಗೆ ಹಾನಿ ಮಾಡಿ ಕಳ್ಳತನ ನಡೆಸಿರುವ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೂದುವಳ್ಳಿಯ ಕಾಫಿ ಬೆಳೆಗಾರ ಮತ್ತು ಕಾಫಿ ಮರ್ಚೆಂಟ್ ಅರವಿಂದ್ ತಮ್ಮ ಸ್ಯಾಂಟ್ರೋ ಕಾರನ್ನು ರಸ್ತೆ ಬದಿ ನಿಲ್ಲಿಸಿ ಬ್ಯಾಂಕ್‌ಗೆ ಹೋಗಿದ್ದರು ಅವರು ವಾಪಸ್ ಬಂದಾಗ, ಕಾರಿನ ಬಲಭಾಗದ ಮುಂಭಾಗದ ಬಾಗಿಲು ಒಡೆದಿರುವುದು ಕಂಡುಬಂದಿದೆ.

ಅಷ್ಟೇ ಅಲ್ಲದೆ, ದುಷ್ಕರ್ಮಿಗಳು ಕಾರಿನ ಚಕ್ರಗಳ ಗಾಳಿ ತೆಗೆದು ಪಂಚರ್ ಮಾಡಿದ್ದಲ್ಲದೆ, ಕಲ್ಲಿನಿಂದ ಉಜ್ಜಿ ಗಾಜುಗಳನ್ನು ಸಂಪೂರ್ಣವಾಗಿ ಹಾನಿಗೊಳಿಸಿದ್ದಾರೆ. ಕಾರಿನ ಒಳಗಿಟ್ಟಿದ್ದ ಸುಮಾರು ಎರಡು ಲಕ್ಷ ರೂಪಾಯಿ ನಗದು ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆ ಪತ್ರಗಳು ನಾಪತ್ತೆಯಾಗಿವೆ.

ಈ ಕೃತ್ಯವನ್ನು ಸ್ಥಳೀಯ ನಿವಾಸಿಯಾದ ಶರತ್ ಎಂಬ ವ್ಯಕ್ತಿ ಎಸಗಿರುವ ಬಗ್ಗೆ ಸ್ಥಳೀಯರಿಂದ ಮಾಹಿತಿ ಲಭ್ಯವಾಗಿದ್ದು, ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದುಹೋದ ಹಣ ಮತ್ತು ದಾಖಲೆಗಳನ್ನು ಕೊಡಿಸಿ ನ್ಯಾಯ ಒದಗಿಸುವಂತೆ ಸಂತ್ರಸ್ತರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

Rs 2 lakh stolen from car on Bar Line Road

Share

Leave a comment

Leave a Reply

Your email address will not be published. Required fields are marked *

Don't Miss

ಮುಖ್ಯಮಂತ್ರಿಗಳಿಂದ ಸರ್ವವ್ಯಾಪಿ ಸರ್ವಸ್ಪರ್ಶಿ ಬಜೆಟ್

ಚಿಕ್ಕಮಗಳೂರು:  ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಇಂದು ದಾಖಲೆಯ ೧೭ ನೇ ಬಜೆಟ್ ಮಂಡಿಸಿದ್ದು ಸರ್ವವ್ಯಾಪಿ ಸರ್ವಸ್ಪರ್ಶಿಯಾಗಿದೆ. ಕೃಷಿ, ಗ್ರಾಮೀಣಾಭಿವೃದ್ಧಿ, ಪ್ರವಾಸೋದಮ ಸೇರಿದಂತೆ ಎಲ್ಲಾ ಕ್ಷೇತ್ರಗಳ ಮೂಲಭೂತ ಸೌಕರ್ಯಕ್ಕೆ ಹಣ ಒದಗಿಸಲಾಗಿದೆ....

ನಗರಸಭೆಯಿಂದ ಉದ್ದಿಮೆ ಪರವಾನಗಿ ಪಡೆಯದೆ ಅಂಗಡಿ ಬೀಗ

ಚಿಕ್ಕಮಗಳೂರು: ನಗರದ ವರ್ತಕರು ಅಧಿಕೃತ ಶುಲ್ಕ ಪಾವತಿಸಿ ನಗರಸಭೆಯಿಂದ ನಿಗದಿತ ಉದ್ದಿಮೆ ಪರವಾನಗಿ ಪಡೆಯುವ ಮೂಲಕ ನಗರಸಭೆಯೊಂದಿಗೆ ಸಹಕರಿಸಬೇಕೆಂದು ಪೌರಾಯುಕ್ತ ಬಿ.ಸಿ ಬಸವರಾಜ್ ಮನವಿ ಮಾಡಿದರು. ಅವರು ಇಂದು ನಗರದ ಮುಖ್ಯ...

Related Articles

ಕುಶಲಕರ್ಮಿಗಳ ಬದುಕಿಗೆ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಹೊಸ ಚೈತನ್ಯ

ಚಿಕ್ಕಮಗಳೂರು: ಸಮಾಜದ ಕಟ್ಟಕಡೆಯ ಕುಶಲಕರ್ಮಿಗಳ ಬದುಕಿನಲ್ಲಿ ಆರ್ಥಿಕ ಕ್ರಾಂತಿ ಉಂಟುಮಾಡುವ ಉದ್ದೇಶದಿಂದ ಜಾರಿಗೆ ತರಲಾದ ಪ್ರಧಾನ...

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ-ಜಿಲ್ಲಾಧಿಕಾರಿ

ಚಿಕ್ಕಮಗಳೂರು: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಇದೇ ಮಾರ್ಚ್ ೧೮ ರಿಂದ ಪ್ರಾರಂಭವಾಗಲಿದ್ದು, ಪರೀಕ್ಷೆಗಳು ಸುಸೂತ್ರವಾಗಿ ನಡೆಯಲು...

ಜಿಲ್ಲೆಯಲ್ಲಿ ಗೃಹಬಳಕೆ ಸಿಲಿಂಡರ್‌ಗೆ ಕೊರತೆ ಇಲ್ಲ

ಚಿಕ್ಕಮಗಳೂರು, ಮಾ.೧೩: ಜಿಲ್ಲೆಯಲ್ಲಿ ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳ ಸಮರ್ಪಕ ಸಂಗ್ರಹ ಮತ್ತು ಸರಬರಾಜು ಲಭ್ಯವಿರುವುದನ್ನು ದೃಢಪಡಿಸಿ...

ಶಾಸಕ ಕೆ.ಎಸ್. ಆನಂದ್ ಆಪ್ತ ಸಹಾಯಕನಿಂದ ಶಿಷ್ಟಾಚಾರ ಉಲ್ಲಂಘನೆ

ಕಡೂರು: ತಾಲ್ಲೂಕು ಕಚೇರಿಯಲ್ಲಿ ನಡೆದ ಸರ್ಕಾರದ ಪ್ರಮುಖ ಸಭೆಯು ಈಗ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ....