Home namma chikmagalur chikamagalur ನಿವೃತ್ತ ಮಹಿಳಾ ನೌಕರಿಗೆ 1,50,000 ರೂ ವಂಚನೆ
chikamagalurCrime NewsHomeLatest Newsnamma chikmagalur

ನಿವೃತ್ತ ಮಹಿಳಾ ನೌಕರಿಗೆ 1,50,000 ರೂ ವಂಚನೆ

Share
Share

ಚಿಕ್ಕಮಗಳೂರು: ಬ್ಯಾಂಕ್ ಆಫ್ ಬರೋಡಾದ ನಿವೃತ್ತ ಮಹಿಳಾ ನೌಕರರೊಬ್ಬರಿಗೆ ಫೇಸ್ ಬುಕ್ ನಲ್ಲಿ BOB PENSION CARD ಎಂಬ ಜಾಹೀರಾತು ಬಂದಿದ್ದು ಅದನ್ನು ಕ್ಲಿಕ್ಕಿಸಿದ್ದಾರೆ.

ಅದರಲ್ಲಿ ಕೇಳಿರುವಂತೆ ಪೋನ್ ನಂಬರ್ ಮತ್ತು ಕೆಲಸವನ್ನು ನಮೂದಿಸಿದ್ದಾರೆ .ನಂತರ ಅನುಮಾನ ಬಂದು ಸದರಿ ಅಪ್ಲೀಕೇಷನ್ ನಿಂದ ವಾಪಸ್ ಬಂದಿರುತ್ತಾರೆ.

ಮಧ್ಯಾಹ್ನದ ವೇಳೆಗೆ ಮೋಬೈಲ್ ನಂಬರ್ ಗೆ ಪೋನ್ ಬಂದಿದ್ದು ತನ್ನ ಹೆಸರು ಶ್ಯಾಮ್ ಎಂದೂ ಬ್ಯಾಂಕ್ ಆಫ್ ಬರೋಡಾದ ಪೆನ್ ಷನ್ ಕಾರ್ಡ್ ವಿಭಾಗದಿಂದ ಮಾತನಾಡುತ್ತಿದ್ದೇನೆ ಎಂದು ನಂಬಿಸಿದ್ದಾರೆ.

ಪೆನ್ ಷನ್ ಕಾರ್ಡ್ ಮಾಡಿಕೊಡುತ್ತೇನೆ ಎಂದು ಹೇಳಿ ವಾಟ್ಸ್ ಆಫ್ ಅನ್ನು ಸ್ಕ್ರೀನ್ ಶೇರಿಂಗ್ ಮಾಡಿಸಿಕೊಂಡಿದ್ದಾನೆ. ಬ್ಯಾಂಕ್ ಆಫ್ ಬರೋಡಾದಲ್ಲಿ ಎಫ್ ಡಿ ಖಾತೆಯಲ್ಲಿ 5,00,000/- ರೂಗಳನ್ನು ಒಂದು ವಾರದ ಹಿಂದೆ ಡೆಪಾಸಿಟ್ ಮಾಡಿದ್ದು , ಈ ಎಫ್ ಡಿ ಖಾತೆಯಿಂದ ತನ್ನ ಬಾಬ್ತು ಬ್ಯಾಂಕ್ ಆಫ್ ಬರೋಡಾದ ಎಸ್ ಬಿ ಖಾತೆಗೆ 4,75,000/- ರೂ ಓವರ್ ಡ್ರಾಪ್ಟ್ ಆನ್ ಎಫ್ ಡಿ ಆಗಿರುವ ಬಗ್ಗೆ ಪೋನ್ ಗೆ ಮೆಸೇಜ್ ಬಂದಿದೆ.

ನಂತರ ಖಾತೆಯಿಂದ 1,50,000/- ರೂ ಡ್ರಾ ಆಗಿದ್ದು, ತಕ್ಷಣ ನನಗೆ ಇದು ಪ್ರಾಡ್ ಪೋನ್ ಕಾಲ್ ತಿಳಿದು ಪೋನ್ ಸಂಪರ್ಕ ಕಡಿತಗೊಳಿಸಿ ಬ್ಯಾಂಕ್ ಗೆ ಪೋನ್ ಮಾಡಿ ತನ್ನ ಅಕೌಂಟ್ ಅನ್ನು ಬ್ಲಾಕ್ ಮಾಡಿಸಿದ್ದಾರೆ.

ಪೆನ್ ಷನ್ ಕಾರ್ಡ್ ಮಾಡಿಸಿಕೊಡುವುದಾಗಿ ನಂಬಿಸಿ ವಾಟ್ಸ್ ಆಫ್ ಸ್ಕ್ರೀನ್ ಶೇರಿಂಗ್ ಮಾಡಿಸಿಕೊಂಡು ತನ್ನ ಎಫ್ ಡಿ ಖಾತೆಯಿಂದ 4,75,000/- ರೂ ಲೋನ್ ಮಾಡಿ ಅದರಲ್ಲಿ 1,50,000/- ರೂಗಳನ್ನು ಡ್ರಾ ಮಾಡಿಕೊಂಡು ಮೋಸ ಮಾಡಿ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Retired female employee cheated of Rs 150000

Share

Leave a comment

Leave a Reply

Your email address will not be published. Required fields are marked *

Don't Miss

ಕಾರ್ಮಿಕ ವಿರೋಧಿ ನಡೆ ಖಂಡಿಸಿ ಬೃಹತ್ ಪ್ರತಿಭಟನೆ

ಚಿಕ್ಕಮಗಳೂರು:  ಕಾರ್ಮಿಕ ವಿರೋಧಿ ನಡೆ ಅನುಸರಿಸುತ್ತಿರುವ ಸರ್ಕಾರಗಳ ವಿರುದ್ಧ ಗುರುವಾರ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಎಐಟಿಯುಸಿ, ಪ್ಲಾಂಟೇಷನ್ ಯೂನಿಯನ್, ಬಿಸಿಯೂ ಟ-ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ನೂರಾರು ಕಾರ್ಮಿಕರು ಧರಣಿ ನಡೆಸಿ, ಅಂಚೆ...

ಮಾನಸಿಕ-ದೈಹಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ

ಚಿಕ್ಕಮಗಳೂರು:  ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ...

Related Articles

ಬೀರೂರಿನಲ್ಲಿ ಅನುಮಾನದ ಭೂತಕ್ಕೆ ಪತ್ನಿ ಕೊಲೆ

ಚಿಕ್ಕಮಗಳೂರು: ಪ್ರೀತಿಸಿ ಮದುವೆಯಾಗಿ 12 ವರ್ಷಗಳ ಸುಖ ಸಂಸಾರ ನಡೆಸಿದ್ದ ದಂಪತಿಗಳ ನಡುವೆ ಅನುಮಾನದ ಕಿಚ್ಚು...

ನಿಂತಿದ್ದ ಕಂಟೇನರ್ ಗೆ ಕಾರು ಡಿಕ್ಕಿ-ವ್ಯಕ್ತಿ ಸಾವು

ಚಿಕ್ಕಮಗಳೂರು: ನಿಂತಿದ್ದ ಕಂಟೇನರ್ ಗೆ ಕಾರು ಅಪ್ಪಳಿಸಿ ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ. ಫೆ 17 ರ ಬೆಳಗಿನ...

ವಿಮಾ ಪರಿಹಾರ ಬಡ್ಡಿ ಸಹಿತ ನೀಡಲು ಆದೇಶ

ಚಿಕ್ಕಮಗಳೂರು: ಶಿಕ್ಷಕರ ಸಹಕಾರ ಬ್ಯಾಂಕ್‌ನಿಂದ ಸಾಲ ಪಡೆದ ಸರ್ಕಾರಿ ಶಿಕ್ಷಕರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಸಾಲ ಮರುಪಾವತಿಗೆ...

ನನ್ನ ಆಟ ನನ್ನದು ಎನ್ನುತ್ತಲೇ ಶಾಸಕ ತಮ್ಮಯ್ಯ ವಿದೇಶಿ ಟೂರ್

ಚಿಕ್ಕಮಗಳೂರು: ಶಾಸಕ ಹೆಚ್.ಡಿ.ತಮ್ಮಯ್ಯ ವಿದೇಶಕ್ಕೆ ಪ್ರಯಾಣ ಮಾಡಿದ್ದಾರೆ.ಅದರಲ್ಲೂ ಅಲ್ಲಿನ ರೈತರ ಬದುಕು,ವ್ಯವಸಾಯದ ವಿಧಾನ ತಿಳಿದುಕೊಂಡು ಬಂದು...